ನಾವು ಮನುಷ್ಯರಾಗೋದು ಯಾವಾಗ? ಗರ್ಭಿಣಿ ಆನೆ ಸಾವಿಗೆ ಸ್ಯಾಂಡಲ್​ವುಡ್​ ಸಂತಾಪ

blank

ಅದೊಂದು ಘಟನೆ ಕಳೆದೊಂದು ದಿನದಿಂದ ದೇಶಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೆಲವು ದುಷ್ಕರ್ಮಿಗಳು ಪೈನಾಪಲ್​ನಲ್ಲಿ ಸ್ಫೋಟಕ ತುಂಬಿ, ಗರ್ಭಿಣಿ ಆನೆಗೆ ತಿನ್ನಲು ಕೊಟ್ಟು, ಅದರ ಸಾವಿಗೆ ಕಾಣರಾಗಿದ್ದಾರೆ. ಈ ಘಟನೆ ಎಲ್ಲರನ್ನೂ ತಲ್ಲಣಗೊಳಿಸಿದೆ.

ಇದನ್ನೂ ಓದಿ: ಸ್ಟಾರ್​ ಡೈರೆಕ್ಟರ್​ ಹುಟ್ಟುಹಬ್ಬದ ಸಂಭ್ರಮ ಹೀಗಿತ್ತು ನೋಡಿ …

ಅಷ್ಟೇ ಅಲ್ಲ, ಆನೆಯ ಸಾವಿಗೆ ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ಹರಿದು ಬರುತ್ತಿದೆ. ಇಂತಹ ಹೀನ ಕೃತ್ಯ ಮಾಡಿದವರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಸ್ಯಾಂಡಲ್​ವುಡ್​ ಸಹ ಹೊರತಲ್ಲ. ಸೋಷಿಯಲ್​ ಮೀಡಿಯಾದಿಂದ ಹಲವು ದಿನಗಳಿಂದ ದೂರ ಇರುವ ನಟಿ ರಮ್ಯಾ, ಪ್ರತ್ಯಕ್ಷರಾಗಿ ಈ ಘಟನೆಯನ್ನು ಖಂಡಿಸಿರುವುದರ ಜತೆಗೆ, ಆನೆಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈಗ ಚಂದನವನದ ಇನ್ನಷ್ಟು ಕಲಾವಿದರು ಮತ್ತು ತಂತ್ರಜ್ಱರು ಈ ಹೇಯ ಕೃತ್ಯವನ್ನು ಖಂಡಿಸಿದ್ದಾರೆ.

ಈ ಕುರಿತು ಬೇಸರ ವ್ಯಕ್ತಪಡಿಸಿರುವ ಗೋಲ್ಡನ್​ ಸ್ಟಾರ್​ ಗಣೇಶ್​, ಮನುಷ್ಯರು ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಘಟನೆ ಬಗ್ಗೆ ಕೇಳಿ ಹೃದಯ ಚೂರುಚೂರಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗಣೇಶ್​ ಟ್ವೀಟ್​ ಮಾಡಿದ್ದಾರೆ.

ಮನುಷ್ಯ ಅಂದರೆ ಮಾನವೀಯತೆ. ಆದರೆ, ಪ್ರಾಣಿಗಳೊಂದಿಗೆ ಮನುಷ್ಯನ ಈ ಮಟ್ಟದ ಮೃಗೀಯ ವರ್ತನೆ ನಿಜಕ್ಕೂ ಖೇದಕರ ವಿಚಾರ ಎಂದು ನಿಖಿಲ್​ ಕುಮಾರ್​ ಬೇಸರ ವ್ಯಕ್ತಪಡಿಸಿದರೆ, ನಾವು ಮನುಷ್ಯರಾಗೋದು ಯಾವಾಗ? ಎಂದು ಸತೀಶ್​ ನೀನಾಸಂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪವನ್​ ಒಡೆಯರ್​ ವಿರುದ್ಧ ಸುದೀಪ್​ ಅಭಿಮಾನಿಗಳ ಆಕ್ರೋಶ

ಈ ಘಟನೆ ಬಗ್ಗೆ ಟ್ವೀಟ್​ ಮಾಡಿರುವ ಮಿಸ್ಸಿಂಗ್​ ಬಾಯ್​ ನಿರ್ದೇಶಕ ರಘುರಾಮ್​, ಭೂಮಿ ಕಾಯೋ ದೇವ್ರು ನೀನು ಎಲ್ಲಿ ಕೂತಿದ್ಯ? ಅಮಾಯಕ ಮೂಕ ಪ್ರಾಣಿ, ತಾಯಿ-ಮಗುವನ್ನು ಕೊಂದ ವಿಕೇತಿ ಮನುಷ್ಯರನ್ನು ಇನ್ನೂ ಬದುಕಲು ಹೇಗೆ ಬಿಟ್ಟಿದ್ಯ? ಎಂದು ದೇವರಿಗೆ ಪ್ರಶ್ನೆ ಮಾಡಿದ್ದಾರೆ.

ಇದು ಉದಾಹರಣೆಯಷ್ಟೇ. ಆನೆ ಸಾವಿನ ಕುರಿತಾಗಿ ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಹಲವು ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ಹಾಗೆಯೇ ಗರ್ಭಿಣಿ ಆನೆಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣಕ್ಕೆ ಮರಳಿದ ಮೋಹಕತಾರೆ ರಮ್ಯಾರಿಂದ ಸಮಯ ಮೀಸಲಿಡಲು ಕರೆ…!

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…