ಈ ಫೋಟೋದಲ್ಲಿರೋ ಬಾಲಕ ಇಂದು ಸ್ಯಾಂಡಲ್​ವುಡ್​ನ​ ಸ್ಟಾರ್​ ನಟ!

ಬೆಂಗಳೂರು: ಬಾಲ್ಯ ಪ್ರತಿಯೊಬ್ಬರ ಜೀವನದ ಅಮೂಲ್ಯ ಕ್ಷಣ. ಅದರಲ್ಲೂ ಯಾವುದಾದರೊಂದು ಬಾಲ್ಯದ ಫೋಟೋ ನೋಡಿದರೆ ಸಾಕು ಪ್ರತಿಯೊಬ್ಬರ ತುಟಿಯಂಚಲ್ಲಿ ನಗು ಮೂಡದೇ ಇರದು.

ಈಗ ಇದೇ ಅನುಭವ ಕಿಚ್ಚ ಸುದೀಪ್​ ಅವರಿಗೆ ಆಗಿದೆ. ಅಭಿಮಾನಿಯೊಬ್ಬ ಸುದೀಪ್​ ಅವರ ಬಾಲ್ಯದ ಪೋಟೋವನ್ನು ಅಪ್​ಲೋಡ್​ ಮಾಡಿ ಹೇಗಿದೆ ಅಂತಾ ಹೇಳಿ ಅಣ್ಣಾ ಎಂದು ಟ್ವೀಟ್​ ಮೂಲಕ ವಿನಂತಿಸಿಕೊಂಡಿದ್ದ. ಇದಕ್ಕೆ ಉತ್ತರಿಸಿರುವ ಕಿಚ್ಚ ಎಲ್ಲರ ಜೀವನದಲ್ಲೂ ಬಾಲ್ಯ ಜೀವನ ಉತ್ತಮ ದಿನಗಳು. ಸುಂದರವಾದ ಚಿತ್ರ. ಧನ್ಯವಾದಗಳು ಎಂದು ಉತ್ತರಿಸಿದ್ದಾರೆ. ಪೋಟೊದಲ್ಲಿ ಸುದೀಪ್​ ತಮ್ಮ ತಂದೆ-ತಾಯಿ ಹಾಗೂ ಇಬ್ಬರ ಅಕ್ಕಂದಿರ ಮಧ್ಯೆ ಮಂದಹಾಸ ಬೀರುತ್ತಾ ನಿಂತಿದ್ದಾರೆ.

ಟ್ವಿಟರ್​ನಲ್ಲಿ ಸದಾ ಸಕ್ರೀಯರಾಗಿರುವ ಅಭಿನಯ ಚಕ್ರವರ್ತಿ ಸುದೀಪ್ ಅತಿ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಅಭಿಮಾನಿಗಳಲ್ಲದೆ, ಸಾಮಾನ್ಯ ಜನರ ಟ್ವೀಟ್​ಗೂ ಉತ್ತರಿಸುವ ಸುದೀಪ್​ ಜನರ ಮನ ಗೆದ್ದಿದ್ದಾರೆ.​