ಬೆಂಗಳೂರು: ಸ್ಯಾಂಡಲ್ವುಡ್ ಘಟಾನುಗಟಿ ನಾಯಕರು ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿತ್ತು. ಆದರೆ, ಚಂದನವನದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಖ್ಯಾತರಾದ ನಟ ದರ್ಶನ್ ಮನೆ ಮೇಲೆ ದಾಳಿ ಯಾಕೆ ಆಗಿಲ್ಲ ಎಂಬ ಒಂದು ಪ್ರಶ್ನೆ ಎಲ್ಲರಲ್ಲೂ ಸಾಮಾನ್ಯವಾಗಿ ಜೀವ ತೆಳೆದಿದೆ.
ಹೌದು, ಬಿಗ್ ಸ್ಟಾರ್ಗಳಾದ ಕಿಚ್ಚ ಸುದೀಪ್, ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಯಶ್ ಸೇರಿದಂತೆ ಪ್ರಮುಖ ನಿರ್ಮಾಪಕರ ಮನೆ ದಾಳಿ ನಡೆದಿತ್ತು. ಆದರೆ, ಸ್ಯಾಂಡಲ್ವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ದರ್ಶನ್ ಮೇಲೆ ಐಟಿ ನೆರಳು ಬೀಳಲೇ ಇಲ್ಲ.
ನಟ ದರ್ಶನ್ ಐಟಿ ಬಲೆಗೆ ಸಿಲುಕದಿರುವುದಕ್ಕೆ ಕಾರಣ ಅವರು ಲೆಕ್ಕದಲ್ಲಿ ಪಕ್ಕಾ ಹಾಗೂ ತೆರಿಗೆ ಕಟ್ಟುವುದರಲ್ಲೂ ಪಕ್ಕಾ ಎಂಬ ಮಾಹಿತಿ ಆಪ್ತ ವಲಯದಿಂದ ತಿಳಿದುಬಂದಿದೆ. ದರ್ಶನ್ ಅವರು ತನ್ನ ಆದಾಯದ ದಿನಚರಿಯ ಬಗ್ಗೆ ಲೆಕ್ಕ ಇಡುವುದಕ್ಕೆ ಮೂವರು ಲೆಕ್ಕ ಪರಿಶೋಧಕರನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ.
ತಮ್ಮ ಆದಾಯಕ್ಕೆ ಎಷ್ಟು ತೆರಿಗೆ ಕಟ್ಟಬೇಕು ಎಂದು ಆಡಿಟರ್ಗಳಿಂದ ತಿಳಿದುಕೊಂಡು ಕಳೆದ ಆರು ವರ್ಷಗಳಿಂದ ಸರಿಯಾಗಿ ತೆರಿಗೆ ಕಟ್ಟುತ್ತಾ ಬಂದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈಗ ಐಟಿ ದಾಳಿಗೆ ಒಳಗಾಗಿರುವ ಎಲ್ಲರನ್ನೂ ಕಳೆದ ಐದು ತಿಂಗಳಿಂದ ಅಧಿಕಾರಿಗಳು ಗಮನಿಸಿದ್ದಾರೆ ಎಂದು ಹೇಳಲಾಗಿದೆ. (ದಿಗ್ವಿಜಯ ನ್ಯೂಸ್)
Darshan ThoogudeepIT RaidSandalwoodTaxಐಟಿ ದಾಳಿತೆರಿಗೆದರ್ಶನ್ ತೂಗುದೀಪ್ಸ್ಯಾಂಡಲ್ವುಡ್
He loves animal and bird…so god will protect him