ಮೀಟೂ ವಿತ್​ ಫೈಟೂ: ಸ್ಯಾಂಡಲ್​ವುಡ್​ ಕರಾಳ ಮುಖ ಚಿತ್ರಿಸಲು ಹೊರಟ ಯುವ ನಿರ್ದೇಶಕ

ಬೆಂಗಳೂರು: ಕನ್ನಡ ಸಿನಿಮಾ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಡುವ ಸಿನಿಮಾ ಮಾಡಲು ಯುವ ನಿರ್ದೇಶಕರೊಬ್ಬರು ಹೊರಟಿದ್ದು, ವಿವಾದಾತ್ಮಕ ನಟಿ ಶ್ರೀ ರೆಡ್ಡಿಯನ್ನು ಸ್ಯಾಂಡಲ್​ವುಡ್​​ಗೆ ಪರಿಚಯಿಸುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಮೀ ಟೂ ಅಭಿಯಾನದ ಎಳೆಯನ್ನಿಟ್ಟುಕೊಂಡು ಚಿತ್ರ ನಿರ್ದೇಶಿಸಲು ಹೊರಟಿರುವ ಕಿರಿಕ್​ ಹುಡುಗ ಕೀರ್ತನ್​ ಶೆಟ್ಟಿ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ‘ಮೀಟೂ ವಿತ್​ ಫೈಟೂ’ ಎಂಬ ಟೈಟಲ್​ ಇಟ್ಟಿರುವುದು ಭಾರಿ ಕುತೂಹಲವನ್ನು ಉಂಟು ಮಾಡಿದೆ.

ಈಗಾಗಲೇ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಬಿರುಗಾಳಿ ಎಬ್ಬಿಸಿದ್ದ ತೆಲುಗು ನಟಿ ಶ್ರೀರೆಡ್ಡಿಯನ್ನು ಪರಿಚಯಿಸುವುದಾಗಿ ನಿರ್ದೇಶಕ ತಿಳಿಸಿದ್ದಾರೆ. ಸಿನಿಮಾ ಪ್ರಪಂಚದಲ್ಲಿ ನಟಿಯರು ಅನುಭವಿಸಿರುವ ಹಲವು ನೈಜ ಘಟನಾವಳಿಗಳ ಕಥೆಯನ್ನು ನಿರ್ದೇಶಕ ಬಿಚ್ಚಿಡಲಿದ್ದಾರಂತೆ.

ಮೀ ಟೂ ನೋವನ್ನು ಅನುಭವಿಸಿರುವ ನಟಿಯರು ನಮ್ಮ ಚಿತ್ರದಲ್ಲಿ ಬಂದು ಹೋಗುತ್ತಾರೆ. ಹಳೆಯ ನಟ-ನಟಿಯರು ಹಾಗೂ ಹೊಸ ನಟ-ನಟಿಯರು ಸಿನಿಮಾದಲ್ಲಿ ಇರುತ್ತಾರೆ. ಆದರೆ, ಯಾರ್ಯಾರು ಎಂಬ ಸುಳಿವು ಬಿಟ್ಟು ಕೊಡಲ್ಲ. ಕನ್ನಡ ಚಿತ್ರರಂಗದ ಅನೇಕ ಗಣ್ಯ ವ್ಯಕ್ತಿಗಳ ವಿಚಾರವೂ ಕೂಡ ಈ ಸಿನಿಮಾದಲ್ಲಿ ಸೇರಿದೆ ಎಂದು ನಿರ್ದೇಶಕ ಕೀರ್ತನ್​ ಶೆಟ್ಟಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದು, ಇದು ಸ್ಯಾಂಡಲ್​ವುಡ್​ನ ದೊಡ್ಡ ವಿವಾದಾತ್ಮಕ ಚಿತ್ರವಾಗಲಿದೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

#ಮೀಟೂwithಪೈಟೂ ಚಿತ್ರದ "First Look" ಟೈಟಲ್ನಾನು ಚಿತ್ರರಂಗದಲ್ಲಿ ಕಣ್ಣಾರೇ ಕಂಡತಹ ಅಂಶವನ್ನೇ ಅದನೇ ದೋಚಿ ಗೀಚಿ ಅದೇ ನೋವನ್ನೇ…

Kirik Huduga Keerthan Shetty ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ನವೆಂಬರ್ 21, 2018