ನಿರ್ದೇಶಕ ಸ್ಟಾರ್‌ ಮೇಕರ್ಸ್‌ ಆಗಬೇಕು, ಸ್ಟಾರ್‌ ಹಿಂದೆ ಬೀಳಬಾರದು: ನಟ ಉಪೇಂದ್ರ

ಬೆಂಗಳೂರು: ನಿರ್ದೇಶಕರು ಯಾರ ಹಿಂದೆಯೂ ಹೋಗಬಾರದು. ನಿರ್ದೇಶಕ ಸ್ಟಾರ್ ಮೇಕರ್ಸ್ ಆಗಬೇಕೇ ಹೊರತು ಸ್ಟಾರ್ ಹಿಂದೆ ಬೀಳಬಾರದು ಎಂದು ನಿರ್ದೇಶಕ, ನಟ ಉಪೇಂದ್ರ ತಿಳಿಸಿದರು.

ನಿರ್ದೇಶಕರ ಸಂಘದ ಕಚೇರಿ ಉದ್ಘಾಟನೆಯಲ್ಲಿ ಮಾತನಾಡಿ, ಮೊದಲು ನಿರ್ದೇಶಕ ಕಥೆ ಮಾಡುವುದನ್ನು ಕಲಿಯಬೇಕು. ತುಂಬಾನೆ ಕಾಂಪಿಟೇಷನ್ ಇದೆ. ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆಯುವಂತೆ ನಿರ್ದೇಶಕರು ಬೆಳೆಯಬೇಕು. ನಾವೇ ದುಡ್ಡು ಹಾಕಿ, ನಮ್ಮ ನಿರ್ದೇಶಕರ ಸಂಘದ ಕಟ್ಟಡ ಕಟ್ಟಬೇಕು, ಭವನ ಕಟ್ಟಬೇಕು, ಆಡಿಟೋರಿಯಮ್ ಮಾಡಬೇಕು ಎಂದು ಹೇಳಿದರು.

ಹೊಸದಾಗಿ ಇಂಡಸ್ಟ್ರಿಗೆ ಬರುವ ನಿರ್ದೇಶಕರು ಈಗಿನ ಡಿಜಿಟಲ್ ದುನಿಯಾಗೆ ತಕ್ಕಂತೆ ಅಪ್‌ಡೇಟ್‌ ಆಗಬೇಕು. ಕಲೆಗೆ ಬೆಲೆ ಕಟ್ಟುವ ಜನರ ನಡುವೆ ನಿರ್ದೇಶಕರು ಕಲೆಯನ್ನು ಬೆಳೆಯುವಂತೆ ಮಾಡಬೇಕು ಎಂದರು. (ದಿಗ್ವಿಜಯ ನ್ಯೂಸ್)