VIDEO| ಹುಟ್ಟುಹಬ್ಬದಂದು ದಚ್ಚು ಮನೆಗೆ ಬರಲಿದೆ ಅಕ್ಕಿ, ಬೇಳೆ, ಸಕ್ಕರೆಯ ವಿಶೇಷ ಪ್ಯಾಕೇಜ್​

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಇನ್ನೂ 10 ದಿನಗಳಷ್ಟೇ ಬಾಕಿ ಇದೆ. ಈ ಬಾರಿ ಸರಳವಾಗಿ ಬರ್ತ್​ಡೇ ಆಚರಿಸಲು ದರ್ಶನ್​ ಹೇಳಿದ್ದು, ಅದನ್ನು ಪಾಲಿಸುತ್ತಿರುವ ಅಭಿಮಾನಿಗಳು ಯಜಮಾನನ ಮನೆಗೆ ಕೇಕ್, ಹಾರ ಹಾಗೂ ಗಿಫ್ಟ್​​ಗಳ ಬದಲಿಗೆ ಅಕ್ಕಿ, ಬೇಳೆ ಹಾಗೂ ಸಕ್ಕರೆಯ ಸ್ಪೆಷಲ್ ಪ್ಯಾಕೇಜ್ ತರಲು ನಿರ್ಧರಿಸಿದ್ದಾರೆ.

ಚಂದನವನದ ಡಿಬಾಸ್ ಪರ್ವಕ್ಕೆ ಹತ್ತು ದಿನಗಳಷ್ಟೇ ಬಾಕಿ. ಈ ಬಾರಿ ಡಿಬಾಸ್ ಉತ್ಸವವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಅವರ ಭಕ್ತಗಣ ಫೆಬ್ರವರಿ 16ರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಈ ಬಾರಿ ಸಂಭ್ರಮವನ್ನು ಸುಲ್ತಾನನ ಸಂಭ್ರಮ ಎಂಬ ಹೆಸರಿನಲ್ಲಿ ಆಚರಿಸಬೇಕು ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಆದರೆ ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವ ನೋವಿನಲ್ಲಿ ದಚ್ಚು ಅದ್ಧೂರಿ ಬರ್ತ್​ಡೇಗೆ ಬ್ರೇಕ್ ಹಾಕಿ, ಕೇವಲ ಅಭಿಮಾನಿಗಳಿಗಾಗಿ ಸರಳ ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಕೇಕ್ ಕಟ್ಟಿಂಗ್ ಹಾರ-ತುರಾಯಿಗೆ ಅವಕಾಶ ನೀಡದೇ ಕೇವಲ ದೂರದ ಊರುಗಳಿಂದ ತನ್ನನ್ನು ಕಾಣಲು ಬರುವವರಿಗೆ ದರ್ಶನ ಕೊಟ್ಟು, ವಿಶ್ ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ. ಇದರ ಜತೆಗೆ ಅಭಿಮಾನಿಗಳಿಗೆ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವಂತೆ ಕರೆ ಕೊಟ್ಟಿದ್ದಾರೆ.

ಚಕ್ರವರ್ತಿಯ ಒಂದೇ ಒಂದು ಕರೆಗೆ ಅಭಿಮಾನಿಗಳು ಅಷ್ಟೇ ಅಭಿಮಾನದಿಂದ ಸ್ಪಂದಿಸುತ್ತಿದ್ದಾರೆ. ಕೇಕ್, ಹಾರವನ್ನ ತರುವ ಬದಲು ಅಕ್ಕಿ, ಬೇಳೆ, ಸಕ್ಕರೆ ಹಾಗೂ ಆಹಾರ ಪದಾರ್ಥಗಳನ್ನು ತನ್ನಿ ಎಂದು ವಿಶೇಷವಾದ ವಿನಂತಿಯನ್ನು ಸಾಮಾಜಿಕ ಲೋಕದಲ್ಲಿ ದಚ್ಚು ಅಭಿಮಾನಿಗಳು ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಅಭಿಮಾನಿಗಳಿಗೆ ದಚ್ಚು ತಮ್ಮ ಹುಟ್ಟುಹಬ್ಬದಂದು ಯಜಮಾನ ಟ್ರೇಲರ್ ಅನ್ನು ಗಿಫ್ಟ್ ಆಗಿ ನೀಡಲಿದ್ದಾರೆ. ಹಾಗೇ ಗಂಡುಗಲಿ ಮದಕರಿ ನಾಯಕ ಕೂಡ ಅಂದೇ ಸೆಟ್ಟೇರಲಿದೆ. (ದಿಗ್ವಿಜಯ ನ್ಯೂಸ್​)

#dboss #darshanthoogudeepasrinivas #challengingstar

Guninae Upasana ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಫೆಬ್ರವರಿ 6, 2019

I Request all the DBOSS fans to watch this video and share this video until it reaches to BOSS JAI DBOSSJAI THOOGUDEEPA

Manjunath Thoogudeepa ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಫೆಬ್ರವರಿ 2, 2019

https://www.facebook.com/NimmaPreethiyaDasaDarshan/photos/a.1462454550724725/2002305766739598/?type=3&theater