ಮನವಿಯನ್ನು ಪ್ರೀತಿಯಿಂದ ಪಾಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ದಚ್ಚು

ಬೆಂಗಳೂರು: ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವ ನೋವಿನಲ್ಲಿ ನಟ ದರ್ಶನ್​ ಅದ್ಧೂರಿ ಬರ್ತ್​​ಡೇಗೆ ಬ್ರೇಕ್ ಹಾಕಿ, ಅಭಿಮಾನಿಗಳಿಗಾಗಿ ಸರಳ ಹುಟ್ಟುಹಬ್ಬ ಆಚರಿವುದಾಗಿ ಹೇಳಿದ್ದರು. ಇದೇ ವೇಳೆ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು.

ದಚ್ಚು ಮನವಿಯನ್ನು ಪ್ರೀತಿಯಿಂದ ಸ್ವೀಕರಿಸಿರುವ ಅನೇಕ ಅಭಿಮಾನಿಗಳು ಕೇಕ್​ ಹಾಗೂ ಹಾರ-ತುರಾಯಿ ಬದಲಿಗೆ ಅಕ್ಕಿ, ಬೇಳೆ ಹಾಗೂ ಸಕ್ಕರೆಯನ್ನು ಖರೀಸದಿಸಿ ಪ್ಯಾಕ್​ ಮಾಡಿ ಫೆ.16ರ ಹುಟ್ಟುಹಬ್ಬದಂದು ದಚ್ಚು ಮನೆಗೆ ತರುವಂತೆ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತುಂಬಾ ಖುಷಿಯಾಗಿರುವ ದರ್ಶನ್​ ಅವರು ಅಭಿಮಾನಿಗಳಿಗೆ ತಮ್ಮ ಫೇಸ್​ಬುಕ್​ ಖಾತೆಯ ಮೂಲಕ ಧನ್ಯವಾದಗಳನ್ನು ತಿಳಿಸಿದ್ದು, ಅಭಿಮಾನಿಗಳು ತರುವ ಉಡುಗೊರೆಯನ್ನು ಸ್ವತಃ ದರ್ಶನ್​ ಅವರೇ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸುವುದಾಗಿ ಹೇಳಿದ್ದಾರೆ.

ನಟ ದರ್ಶನ್ ಫೇಸ್​ಬುಕ್​ ಫೋಸ್ಟ್​ ಹೀಗಿದೆ…​
ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ…
ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ. ಅದನ್ನು ಸಿದ್ಧಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷದ ವಿಷಯ. ನನ್ನ ಹುಟ್ಟುಹಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯ ಒಂದು ಅನಾಥಾಶ್ರಮಕ್ಕೆ, ಒಂದು ವೃದ್ಧಾಶ್ರಮಕ್ಕೆ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದು ಕೊಳ್ಳುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್​ಗಳನ್ನೇ ಬಳಸಿ.
ವಂದನೆಗಳೊಂದಿಗೆ,
ಇಂತಿ
ನಿಮ್ಮ ಪ್ರೀತಿಯ ದಾಸ ದರ್ಶನ್

Leave a Reply

Your email address will not be published. Required fields are marked *