17 C
Bangalore
Friday, December 13, 2019

ಸಿದ್ದಲಿಂಗಯ ನನ್ನ ದೇವರು…  

Latest News

ಸಂಭ್ರಮದ ಅಮೃತೇಶ್ವರ ರಥೋತ್ಸವ

ಅಣ್ಣಿಗೇರಿ: ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಜಯಘೊಷಗಳ ಮಧ್ಯ ಸಡಗರ, ಸಂಭ್ರಮದಿಂದ ಜರುಗಿತು.

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೇಡ

ವಿಜಯವಾಣಿ ಸುದ್ದಿಜಾಲ ಧಾರವಾಡ 2020ರ ಜ. 26ರ ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರೆಜಿಲ್ ಪ್ರಧಾನಿ ಬೊಲ್ಸೇನಾರೋ ಬರುತ್ತಿರುವುದನ್ನು ರೈತ ಸಂಘ...

ಡಿಸಿಪಿಯಾಗಿ ಬಿ.ಎಸ್. ನೇಮಗೌಡ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ವರ್ಗವಾಗಿ ಬಂದಿರುವ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಬಿ.ಎಸ್. ನೇಮಗೌಡ ಗುರುವಾರ...

ಸೇವೆ ಸ್ಥಗಿತಗೊಳಿಸಿ ಧರಣಿ

ವಿಜಯವಾಣಿ ಸುದ್ದಿಜಾಲ ಕುಂದಗೋಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತಾಲೂಕಾಸ್ಪತ್ರೆ ಡಿ ದರ್ಜೆ ಗುತ್ತಿಗೆ ನೌಕರರು ಗುರುವಾರ ಸೇವೆ...

ಜ್ಞಾನ ಸಂಸತ್ ಅಧಿವೇಶನ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್​ನಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಡಿ. 14ರಂದು ಸಂಜೆ 4ಕ್ಕೆ...

ಕನ್ನಡ ಚಿತ್ರರಂಗಕ್ಕೆ ಮಹತ್ವದ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಿದ್ದಲಿಂಗಯ್ಯನವರ ಜನ್ಮದಿನ (ಡಿ.15) ನಾಳೆ. ಸಮಾಜಮುಖಿ, ಸಹಜೀವನದ ಆಶಯದೊಂದಿಗೆ ಸಿನಿಮಾಗಳನ್ನು ನಿರ್ದೇಶಿಸಿದ ಅವರು ತೆರೆಯ ಮೇಲೆ ಮಾದರಿ ಪಾತ್ರಗಳನ್ನು ಸೃಷ್ಟಿಸಿದರು. ಗ್ರಾಮೀಣ ಸೊಗಡನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದರು. ಅವರ ಜನ್ಮದಿನದ ಹೊಸ್ತಿಲಿನಲ್ಲಿ, ತಮ್ಮನ್ನು ಬೆಳ್ಳಿಪರದೆಗೆ ಪರಿಚಯಿಸಿದ ಗುರುವನ್ನು ಬಹುಭಾಷಾ ನಟ ಚರಣ್ ರಾಜ್ ಇಲ್ಲಿ ಸ್ಮರಿಸಿಕೊಂಡಿದ್ದಾರೆ.

ಬೆಂಗಳೂರಿಗೆ 1976ರ ಸುಮಾರಿಗೆ ಬಂದ ನಾನು 1981ರವರೆಗೂ ಸಿನಿಮಾ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಇದ್ದೆ. ಬೆಳಗಾವಿಯವ ನಾನು. ಹಳೇ ಮೈಸೂರು ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಆರೇಳು ವರ್ಷಗಳ ನಂತರವೂ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಊರಿಗೆ ವಾಪಸು ಹೋದರೆ ಮನೆಯಲ್ಲಿ ಮುಖ ತೋರಿಸೋದು ಹೇಗೆಂದು ಬೇಸರ ಮಾಡಿಕೊಳ್ಳುತ್ತಿದ್ದೆ. ಆಗೆಲ್ಲ ಆತ್ಮಹತ್ಯೆ ಬಗೆಗೂ ಯೋಚಿಸಿದ್ದಿದೆ! ಹೊಟ್ಟೆಪಾಡಿಗೋಸ್ಕರ ನೈಟ್​ಕ್ಲಬ್, ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದೆ.

ಒಮ್ಮೆ ಹಿತೈಷಿಯೊಬ್ಬರು, ‘ಸಿದ್ದಲಿಂಗಯ್ಯ ಅವರು ‘ಪರಾಜಿತ’ ಅಂತ ಸಿನಿಮಾ ಮಾಡ್ತಿದಾರೆ. ಹೀರೋ ಬೇಕಂತೆ. ನೀನ್ಯಾಕೆ ಪ್ರಯತ್ನಿಸಬಾರದು’ ಎಂದರು. ಅದು ನನಗೊಂಥರ ಅಶರೀರವಾಣಿಯಂತೆ ಕೇಳಿಸಿತು! ಇಡೀ ರಾತ್ರಿ ನಿದ್ದೆ ಮಾಡಲಿಲ್ಲ. ಬೆಳಗ್ಗೆ ಐದಕ್ಕೆ ಎದ್ದವನೇ ಸಿದ್ಧವಾಗಿ ರಾಜಾಜಿನಗರದ ಸಿದ್ದಲಿಂಗಯ್ಯನವರ ಮನೆಗೆ ಹೊರಟೆ. ಬೆಳಕು ಹರಿಯುವವರೆಗೆ ಕಾದಿದ್ದು ಆರೂವರೆ ಹೊತ್ತಿಗೆ ಸಿದ್ದಲಿಂಗಯ್ಯನವರ ಮನೆಯ ಕಾಲಿಂಗ್ ಬೆಲ್ ಒತ್ತಿ, ಹಿಂದೆ ಸರಿದು ನಿಂತೆ. ಮೇಲೆ ಪೋರ್ಟಿಕೋದಿಂದ ನನ್ನನ್ನು ನೋಡಿದ ಸಿದ್ದಲಿಂಗಯ್ಯನವರ ಮಗ ಸುರೇಶ್, ‘ಅಪ್ಪಾಜಿ ಯಾರೋ ಬಂದವ್ರೆ ನೋಡಿ, ನೀವು ಹೇಳಿದ್ರಲ್ಲ… ಆ ಥರಾನೇ ಇದಾರೆ’ ಅಂದರು. ಬಹುಶಃ ಮನೆಯಲ್ಲಿ ‘ಪರಾಜಿತ’ ಚಿತ್ರದ ಕಥೆಯನ್ನು ಸಿದ್ದಲಿಂಗಯ್ಯನವರು ಚರ್ಚೆ ಮಾಡಿದ್ದರು ಅಂತ ಕಾಣುತ್ತದೆ. ಸುರೇಶ್ ಹಾಗೆ ಹೇಳುತ್ತಿದ್ದಂತೆ ಸಿದ್ದಲಿಂಗಯ್ಯನವರು ಒಳಗೆ ಕರೆದು ಕೂರಿಸಿದರು. ‘ನಾಟಕ, ನಟನೆ ಮಾಡಿದ್ದಿದೆಯೇ’ ಎಂದು ಕೇಳಿದರು ಸಿದ್ದಲಿಂಗಯ್ಯ. ನಾನಾಗ ‘ಡೊಂಕು ಬಾಲದ ನಾಯಕರು’ ನಾಟಕ ಮಾಡುತ್ತಿದ್ದೆ. ನಾನು ಈ ನಾಟಕದ ಒಂದು ಸನ್ನಿವೇಶವನ್ನು ನಟಿಸಿ, ಡೈಲಾಗ್ ಹೇಳಿದವನೇ ಅವರ ಕಾಲು ಹಿಡಿದುಕೊಂಡು ಅಳೋದಕ್ಕೆ ಶುರು ಮಾಡಿದೆ! ಬೆಳಗಾವಿಯಿಂದ ಬಂದು ಆರೇಳು ವರ್ಷವಾಯ್ತು. ಯಾರೂ ಅವಕಾಶ ಕೊಟ್ಟಿಲ್ಲ. ನಿಮ್ಮ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಕೊಡಿ. ನಟಿಸಿ ಊರಿಗೆ ಹೋಗಿ ಬಿಡ್ತೀನಿ ಎಂದು ಅವಲತ್ತುಕೊಂಡೆ.

ಥಟ್ಟನೆ ನನ್ನ ಭುಜ ಹಿಡಿದೆತ್ತಿ ತಬ್ಬಿಕೊಂಡು, ‘ಬಾರಪ್ಪ ಹಂಗೆಲ್ಲ ಅಳಬಾರದು. ನಾನೂ ನಿನ್ನ ಹಾಗೆಯೇ ಕಷ್ಟಪಟ್ಟು ಬಂದಿದೀನಿ. ಚೆನ್ನಾಗಿ ನಟಿಸಿದ್ದೀಯ. ಬ್ರಾಡ್​ವೇ ಹೋಟೆಲ್​ಗೆ ಬಾ’ ಎಂದವರೇ ಕಾರಿನಲ್ಲಿ ಹೊರಟುಹೋದರು. ನಾನು ಕೂಡಲೇ ನಡೆದುಕೊಂಡು ಬ್ರಾಡ್​ವೇ ಹೋಟೆಲ್​ಗೆ ಹೋದೆ. ಅಲ್ಲಿ ನೋಡಿದರೆ, ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರದಲ್ಲಿ ಅಲೆಯುತ್ತಿದ್ದ ಹತ್ತಾರು ಹುಡುಗರು ಬಂದಿದ್ದರು! ಅವರೆಲ್ಲರ ಮಧ್ಯೆ ನನಗೆ ಅವಕಾಶ ಸಿಗೋದು ಕಷ್ಟವೆಂದೇ ನಾನು ಭಾವಿಸಿದೆ. ಬೆಳಗ್ಗೆ ಸುಮಾರು 9 ಗಂಟೆ ಸಮಯ. ಅವಕಾಶಕ್ಕಾಗಿ ಅಲೆದಾಡುತ್ತಿದ್ದ ನಾವು ಸಾಲಾಗಿ ನಿಂತಿದ್ದೆವು. ತಮ್ಮ ಮನೆಯಲ್ಲಿ ನನ್ನನ್ನು ನೋಡಿದ್ದ ಸಿದ್ದಲಿಂಗಯ್ಯನವರು ನನ್ನ ಹೆಸರನ್ನು ಮರೆತಿದ್ದರು. ‘ಕೊನೆಯಲ್ಲಿ ನಿಂತಿದ್ದಾನಲ್ಲ… ಆ ಎತ್ತರದ ಹುಡುಗ, ಅವನಲ್ಲೇನೋ ವಿಶೇಷವಿದೆ. ಅವನೇ ಈ ಸಿನಿಮಾದ ಹೀರೋ. ಉಳಿದವರಿಗೆ ಮುಂದಿನ ಚಿತ್ರಗಳಲ್ಲಿ ಅವಕಾಶ ಕೊಡೋಣವಂತೆ’ ಎಂದರು. ಛಾಯಾಗ್ರಾಹಕ ಚಿಟ್ಟಿಬಾಬು, ಫೈಟರ್ ಶಿವಯ್ಯ ಜತೆ ಸಹನಿರ್ದೇಶಕರು ಅಲ್ಲಿದ್ದರು. ಎಲ್ಲರಿಗೂ ನನ್ನ ಆಯ್ಕೆ ಒಪ್ಪಿಗೆಯಾಯ್ತು. ಡಿ. 23ಕ್ಕೆ ನೀನು ಚಿಕ್ಕಮಗಳೂರಿಗೆ ಬರಬೇಕು ಎಂದವರೇ 300 ರೂ. ಅಡ್ವಾನ್ಸ್ ಕೊಡಿಸಿದರು. ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಶುರುವಾಯ್ತು. ಮೊದಲ ಚಿಕ್ಕ ಶಾಟ್ ಸಲೀಸಾಗಿ ಪೂರೈಸಿದೆ. ಎರಡನೇ ಶಾಟ್​ನಲ್ಲಿ ಇನ್ನೂರೈವತ್ತು ಅಡಿ ರೀಲ್​ನ ಒಂದೇ ಶಾಟ್ ಇತ್ತು. ಮೂರು ಪೇಜ್ ಡೈಲಾಗ್ ಇದ್ದ ಸನ್ನಿವೇಶವನ್ನು ಒಂದೇ ಟೇಕ್​ಗೆ ಓಕೆ ಮಾಡಿದೆ. ಅಲ್ಲಿದ್ದವರು ಕ್ಲಾ್ಯಪ್ ಹೊಡೆದರು.

ಸೆಟ್​ನಲ್ಲಿದ್ದ ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅವರು, ‘ಸಿದ್ಲಿಂಗಯ್ಯನೋರೇ… ನೀವು ಒಳ್ಳೇ ಹುಡುಗನಿಗೆ ಅವಕಾಶ ಕೊಟ್ಟಿದ್ದೀರಿ. ಇವನು ಚೆನ್ನಾಗಿ ಬೆಳೀತಾನೆ’ ಎಂದರು. ಹತ್ತಿರ ಬಂದ ಸಿದ್ದಲಿಂಗಯ್ಯನವರೂ ಬೆನ್ನು ತಟ್ಟಿದರು. ಮುಂದೆ ಚಿತ್ರ ತೆರೆಕಂಡು ನನಗೆ ಒಳ್ಳೆಯ ಹೆಸರು ಬಂದಿತು. ಮೊದಲ ಬಾರಿಗೆ ನನ್ನೂರು ಬೆಳಗಾವಿಗೆ ಫ್ಲೈಟ್​ನಲ್ಲಿ ಹೋದೆ. ಅಲ್ಲಿ ನನ್ನ ಸ್ನೇಹಿತರು, ಕುಟುಂಬದವರೂ ಸೇರಿ ನೂರಾರು ಜನರು ನನ್ನನ್ನು ಬರಮಾಡಿಕೊಂಡಿದ್ದರು! ಇಂಥದ್ದೊಂದು ಸ್ವಾಗತಕ್ಕೆ ಕಾರಣರಾಗಿದ್ದು ಸಿದ್ದಲಿಂಗಯ್ಯನವರು. ಜನ್ಮಜನ್ಮಕ್ಕೂ ನಾನು ಅವರಿಗೆ ಋಣಿಯಾಗಿರುತ್ತೇನೆ. ಅಂದಿನ ಅವರ ಆಶೀರ್ವಾದವೇ ಇಂದಿಗೂ ನನ್ನನ್ನು ಕಾಯುತ್ತಿದೆ.

ಅವರ ರ್ವಂಗ್ ಸ್ಟೈಲ್ ಮಾದರಿಯಾಗುವಂಥದ್ದು. ಅವರೊಂಥರಾ ಡಿಕ್ಷನರಿ! ನಾನೀಗ ಹಿಂದಿ, ದಕ್ಷಿಣದ ಭಾಷೆಗಳೂ ಸೇರಿ 9 ಭಾಷೆಗಳಲ್ಲಿ 400ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಇದಕ್ಕೆ ಭದ್ರ ಅಡಿಪಾಯ ಸಿಕ್ಕಿದ್ದೇ ಸಿದ್ದಲಿಂಗಯ್ಯನವರ ಗರಡಿಯಲ್ಲಿ. ‘ಪರಾಜಿತ’ ಚಿತ್ರೀಕರಣದ ಸಂದರ್ಭದಲ್ಲಿ ನಾನು ಅನನುಭವಿ. ನಟನೆ, ಡೈಲಾಗ್, ಫೈಟ್, ಡಾನ್ಸ್ ಸೇರಿ ಎಲ್ಲ ವಿಭಾಗಗಳಲ್ಲಿಯೂ ಅವರು ನನ್ನನ್ನು ತಿದ್ದಿ ತೀಡಿದರು.

ಅವರಿಗೆ ಜನಾರ್ಧನ ಹೋಟೆಲ್​ನ ಖಾಲಿ ದೋಸೆ, ಬೆಣ್ಣೆ ಮುರುಕು, ಮೈಸೂರು ಪಾಕ್ ತುಂಬ ಇಷ್ಟವಾಗೋದು. ನಾನು ಬೆಂಗಳೂರಿಗೆ ಬಂದಾಗ ಈ ತಿನಿಸುಗಳೊಂದಿಗೆ ಅವರನ್ನು ಭೇಟಿ ಮಾಡುತ್ತಿದ್ದೆ. ಅವರೊಂದಿಗಿನ ಕ್ಷಣಗಳನ್ನು ನೆನಪು ಮಾಡಿಕೊಂಡರೆ ಖುಷಿಯಾಗುತ್ತದೆ. ದೇವರು ಸಿದ್ದಲಿಂಗಯ್ಯನವರಂತಹ ಒಳ್ಳೆಯ ಗುರುಗಳ ಬಳಿ ನನ್ನನ್ನು ಸೇರಿಸಿದ. ಅದಕ್ಕಾಗಿ ನಾನು ದೇವರಿಗೂ, ದೇವರ ರೂಪದಲ್ಲಿ ಬಂದ ಸಿದ್ದಲಿಂಗಯ್ಯನವರಿಗೂ ಸದಾಕಾಲ ಋಣಿಯಾಗಿರುತ್ತೇನೆ.

ನಿರೂಪಣೆ: ಶಶಿಧರ ಚಿತ್ರದುರ್ಗ

ಚಿತ್ರಗಳು: ಪ್ರಗತಿ ಅಶ್ವತ್ಥ ನಾರಾಯಣ

Stay connected

278,749FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...