ಸ್ಯಾಂಡಲ್​ವುಡ್​​ನಲ್ಲೂ ತೆರೆಗೆ ಬರಲಿದೆ ನಟ ದರ್ಶನ್ ದಂಗಲ್..!

ಕಿಚ್ಚ ಸುದೀಪ್, ದುನಿಯಾ ವಿಜಿ ಆಯ್ತು ಈಗ ದರ್ಶನ್ ಸರದಿ. ದಾವಣಗೆರೆಯ ಪೈಲ್ವಾನ್ ಕಾಟೇರಾ ಜೀವನ ಆಧರಿತ ಸಿನಿಮಾದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯಿಸಲಿದ್ದಾರೆ.

ಪೈಲ್ವಾನ್‌ ಕಾಟೇರಾ ಬಗ್ಗೆ ಮಾಹಿತಿ ಹೊಂದಿರುವ ದರ್ಶನ್‌, ದಿನಕ್ಕೆ 25 ಚಪಾತಿ, 3 ಕೋಳಿ, 15 ಗ್ಲಾಸ್​ ಕಲ್ಲಂಗಡಿ ಜ್ಯೂಸ್ ಸೇವಿಸಲಿದ್ದಾರೆ.
ದರ್ಶನ್​ ಇಷ್ಟಪಟ್ಟು ಕಾಟೇರಾ ಪಾತ್ರ ಮಾಡಲು ಒಪ್ಪಿಕೊಂಡಿದ್ದು, ಒಂದು ಕಂಡೀಷನ್‌ ಮೂಲಕ ಈ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅದೇನೆಂದರೆ ಚಿತ್ರದಲ್ಲಿ ಶೇ.96ರಷ್ಟು ಕನ್ನಡಿಗರೇ ಇರಬೇಕು ಎಂದಿದ್ದಾರಂತೆ.

ನವೆಂಬರ್‌ನಿಂದ ಕಾಟೇರಾ ಚಿತ್ರದ ಶೂಟಿಂಗ್ ಶುರುವಾಗಲಿದೆ.

ಕಾಟೇರ ಅಖಾಡಕ್ಕೆ ಇಳಿದರೆ ಯಾರು ಲೆಕ್ಕಕ್ಕೆ ಬರಲ್ಲ. ಅವನಿಗೆ ಸುಸ್ತು ಎನ್ನುವುದೇ ಆಗಲ್ಲ. ಅಂಥಾ ವ್ಯಕ್ತಿಯ ಪಾತ್ರವನ್ನು ಮಾಡಬೇಕೆನ್ನುವ ದಾಹ ದಾಸನಿಗೆ ಬಹುದಿನಗಳಿಂದ ಇದ್ದು, ಸದ್ಯಕ್ಕೆ ಇದು ನೆರವೇರುತ್ತಿದೆ. ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದು, ಸ್ವತಃ ಅವರೇ ಈ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)