ಬೆಂಗಳೂರು: ಒಂಬತ್ತು ತಿಂಗಳು ತುಂಬು ಗರ್ಭಿಣಿಯಾಗಿರುವ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆದಿದೆ.
ಗೌಡರ ಸಂಪ್ರದಾಯದಂತೆ ಸೀಮಂತ ಶಾಸ್ತ್ರ ನಡೆಯಲಿದ್ದು, ಸೀಮಂತದ ಸಂಭ್ರಮದಲ್ಲಿ ಸಿನಿಮಾರಂಗದ ಕಲಾವಿದರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದಾರೆ.
ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಾಳೆ ನಡೆಯಲಿರುವ ಸೀಮಂತ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆದಿದ್ದು, ಆತ್ಮೀಯರಿಗೆ, ಸ್ನೇಹಿತರಿಗಷ್ಟೇ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್)