ದಚ್ಚು ಅಭಿನಯದ ಒಡೆಯರ್​ ಚಿತ್ರಕ್ಕೆ ಗ್ರಹಣ ಕಂಟಕ!

ಮೈಸೂರು: ಬಿಟ್ಟನೆಂದರು ಬಿಡದು ಟೈಟಲ್​ ವಿವಾದ ಎಂಬ ಮಾತಿಗೆ ಸ್ಯಾಂಡಲ್​ವುಡ್​ ಸಾಕ್ಷಿಯಾಗಿದ್ದು, ಚಂದನವನದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಚಿತ್ರವೀಗ ಈ ವಿವಾದದ ಸುಳಿಯಲ್ಲಿ ಸಿಲುಕಿದೆ.

ದರ್ಶನ ಅಭಿನಯದ “ಒಡೆಯರ್” ಚಿತ್ರದ ಹೆಸರು ಬದಲಾವಣೆಗೆ ಕನ್ನಡ ಕ್ರಾಂತಿದಳದ ಸಂಘಟನೆ ಪಟ್ಟು ಹಿಡಿದಿದೆ. ಒಡೆಯರ್ ಪದ ಮೈಸೂರು ಅರಸರ ಮನೆತನದ ಹೆಸರಾಗಿದ್ದು, ಈ ಭಾಗದ ಜನರು ಅರಸರನ್ನು ಭಗವಂತನ‌ ರೀತಿ ಕಾಣುತ್ತೇವೆ. ಆದ್ದರಿಂದ ಟೈಟಲ್​ ಬದಲಿಸಿ ಎಂದು ಆಗ್ರಹಿಸಿದ್ದಾರೆ.

ನಿರ್ಮಾಪಕ ಸಂದೇಶ್ ನಾಗರಾಜ್ ಹಾಗೂ ನಟ ದರ್ಶನ್ ಅವರು ಒಡೆಯರ್ ಹೆಸರಿನಲ್ಲಿ ಪ್ರೇಮ‌ಕಥೆ ತೆಗೆಯಲು ಹೊರಟಿದ್ದಾರೆ. ರೌಡಿಂ, ಹಾಸ್ಯ ಹಾಗೂ ವ್ಯಾಪಾರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರೀಕರಣಕ್ಕೆ ಅಡ್ಡಿ ಪಡಿಸುವುದಾಗಿ ಎಚ್ಚರಿಕೆ ನೀಡಿದ್ದು, ಈ ಸಂಬಂಧ ಕೆ.ಆರ್.ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ.