ಸ್ಯಾಂಡಲ್‌ವುಡ್‌ ಪದ್ಮಾವತಿಗೆ ಮದುವೆ? ದುಬೈನಲ್ಲಿ ಶೀಘ್ರವೇ ಮೋಹಕ ತಾರೆ ರಮ್ಯಾ ಕಲ್ಯಾಣವಂತೆ!

ಬೆಂಗಳೂರು: ನಟಿಯಾಗಿ ಯಶಸ್ಸಿನ ಉತ್ತುಂಗಕ್ಕೇರಿದ್ದ ನಟಿ ರಮ್ಯಾ, ರಾಜಕಾರಣದಲ್ಲಿಯೂ ತೊಡಗಿಕೊಂಡು ಯಶಸ್ಸು ಸಾಧಿಸಿದವರು. ಚಿತ್ರರಂಗದಿಂದ ದೂರ ಸರಿದ ಅವರು ರಾಜಕೀಯದಲ್ಲಿ ನೆಲೆಯೂರಿದ್ದರು. ಇದೀಗ ರಾಜಕೀಯದಿಂದಲೂ ರಮ್ಯಾ ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ. ಅದಕ್ಕೆ ಕಾರಣ ರಮ್ಯಾ ಅವರ ಕಲ್ಯಾಣವಂತೆ…

ಹೌದು, ಮೋಹಕ ತಾರೆ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ ಎನ್ನುವ ಮಾತುಗಳು ಇದೀಗ ಜೋರಾಗಿಯೇ ಕೇಳಿಬರುತ್ತಿದೆ. 2 ವರ್ಷಗಳಿಂದ ಎಲ್ಲಿಯೂ ಸದ್ದು ಮಾಡದ ರಮ್ಯಾ ಸದ್ದಿಲ್ಲದೆ ಮದುವೆ ಸಿದ್ಧತೆಯಲ್ಲಿದ್ದಾರೆ.

ಕಳೆದ ವರ್ಷ ಸ್ಯಾಂಡಲ್​ವುಡ್​ನಲ್ಲಿ ದಿಗಂತ್​- ಐಂದ್ರಿತಾ ರೇ, ನಟಿ ಭಾವನಾ, ಚಿರಂಜೀವಿ ಸರ್ಜಾ- ಮೇಘನಾ ರಾಜ್, ಸುನಿಲ್ ರಾವ್, ನಿರ್ದೇಶಕರಾದ ಪವನ್ ವಡೆಯರ್, ಸಂತೋಷ್ ಆನಂದರಾಮ್ ಸೇರಿದಂತೆ ಹಲವು ತಾರೆಯರು ವಿವಾಹವಾಗಿದ್ದರು. ಇದೀಗ 37 ವರ್ಷದ ರಮ್ಯಾ ಕೂಡ ತಮ್ಮ ಬಹುಕಾಲದ ಗೆಳೆಯನೊಂದಿಗೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಉಂಟು ಮಾಡಿದೆ.

ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗಿ ‘ಅಭಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಮ್ಯಾ ಅವರು 2013ರಲ್ಲಿ ಮಂಡ್ಯದಿಂದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋತು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದರು.

ಈ ಹಿಂದೆ ಸುದ್ದಿಯಾಗಿದ್ದಂತೆ ತಮ್ಮ ಬಹುಕಾಲದ ಗೆಳೆಯ ರಫೆಲ್ ಜತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಏಳೆಂಟು ವರ್ಷಗಳ ಹಿಂದೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ರಮ್ಯಾ ಸದ್ಯದಲ್ಲೇ ಪೋರ್ಚುಗಲ್ ದೇಶದ ರಫೆಲ್ ಜತೆಗೆ ಹಸೆಮಣೆಯೇರುವುದು ಖಚಿತ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)

2 Replies to “ಸ್ಯಾಂಡಲ್‌ವುಡ್‌ ಪದ್ಮಾವತಿಗೆ ಮದುವೆ? ದುಬೈನಲ್ಲಿ ಶೀಘ್ರವೇ ಮೋಹಕ ತಾರೆ ರಮ್ಯಾ ಕಲ್ಯಾಣವಂತೆ!”

Leave a Reply

Your email address will not be published. Required fields are marked *