ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್​

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ಜೋಡಿಗಳಾದ ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಜೋಡಿಯ ಮನೆಗೆ ಇಂದು ಬೆಳಗ್ಗೆ ಹೊಸ ಅತಿಥಿಯ ಆಗಮನವಾಗಿದೆ. ರಾಧಿಕಾ ಪಂಡಿತ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಭಾನುವಾರ ಬೆಳಗ್ಗೆ 6.20 ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯದಿಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

2016ರ ಡಿಸೆಂಬರ್ 9ಕ್ಕೆ ಸ್ಯಾಂಡಲ್​ವುಡ್​ನ ತಾರಾ ಜೋಡಿ ಯಶ್ ಮತ್ತು ರಾಧಿಕಾ ಮದುವೆಯಾಗಿತ್ತು. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೀಮಂತ ಕಾರ್ಯ ಆಯೋಜನೆ ಮಾಡಿದ್ದ ಯಶ್, ಆಪ್ತರು ಮತ್ತು ಸಿನಿಮಾ ಮಂದಿಗೆ ಆಹ್ವಾನ ನೀಡಿದ್ದರು. ಯಶ್ ಪಾಲಿಗೆ ಡಿಸೆಂಬರ್ ಲಕ್ಕಿ ತಿಂಗಳು. ಡಿಸೆಂಬರ್​ನಲ್ಲೇ ಯಶ್​ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಇದೇ ತಿಂಗಳ ಕೊನೆಯಲ್ಲಿ ಯಶ್​ ಅವರ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್​’ ಬಿಡುಗಡೆಯಾಗಲಿದೆ.

PHOTOS| ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್‌ ಸೀಮಂತ ಕಾರ್ಯಕ್ರಮ

View this post on Instagram

What's your vote 😊 #radhikapandit #nimmaRP

A post shared by Radhika Pandit (@iamradhikapandit) on