ಸ್ಯಾಂಡಲ್‌ವುಡ್‌ನ ಖ್ಯಾತ ನಟಿಗಾಗಿ ಬಡಿದಾಡಿಕೊಂಡ ಇಬ್ಬರು ಪ್ರೇಮಿಗಳು

ಬೆಂಗಳೂರು: ಸ್ಯಾಂಡಲ್​ವುಡ್‌ನ ಪ್ರಖ್ಯಾತ ನಟಿಗಾಗಿ ಪ್ರೇಮಿಗಳಿಬ್ಬರು ಕಿತ್ತಾಟ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ನಡೆದಿದೆ.

ನಟಿ ಎದುರೇ ಪ್ರೇಮಿಗಳಾದ RTO ಅಧಿಕಾರಿ ರವಿ ಮತ್ತು ಶಿವಪ್ರಸಾದ್ ಎಂಬವರ ನಡುವೆ ಗಲಾಟೆಯಾಗಿದ್ದು, ಬಿಯರ್ ಬಾಟಲಿಯಿಂದ ಬಡಿದಾಡಿಕೊಂಡಿದ್ದಾರೆ.

ಶಿವಪ್ರಕಾಶ್ ಎಂಬವರನ್ನು ಮೊದಲು ನಟಿ ಪ್ರೀತಿಸುತ್ತಿದ್ದರು. ನಂತರ ರವಿ ಎಂಬಾತನೊಂದಿಗೆ ಓಡಾಡಿಕೊಂಡಿದ್ದರು. ಗಣಿ ಉದ್ಯಮಿಯಾಗಿರುವ ಶಿವಪ್ರಸಾದ್ ಪಾರ್ಟಿ ಮಾಡಲು ಫ್ರೆಂಡ್ಸ್ ಜತೆ ತೆರಳಿದ್ದ ವೇಳೆ ನಿನ್ನೆ ಮಧ್ಯರಾತ್ರಿ ಹೊಟೇಲ್‌ನಲ್ಲಿ ನಟಿ ಮತ್ತು ಆರ್‌ಟಿಒ ಅಧಿಕಾರಿ ರವಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಆಕೆಯೊಂದಿಗಿದ್ದ ರವಿ ಜತೆಗೆ ಶಿವಪ್ರಕಾಶ್‌ ಜಗಳವಾಡಿದ್ದಾನೆ. ನನ್ನ ಹುಡುಗಿ ಜತೆ ಓಡಾಡುವುದಕ್ಕೆ ಎಷ್ಟೋ ಧೈರ್ಯ ಎಂದು ಹಲ್ಲೆ ಮಾಡಿದ್ದಾನೆ.

ಬಿಯರ್ ಬಾಟಲಿಯಿಂದ ರವಿ ತಲೆಗೆ ಶಿವಪ್ರಕಾಶ್‌ ಹೊಡೆದಿದ್ದಾನೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)