More

  “ಓ ಮಲ್ಲಿಗೆ”ನಟಿ ಚಾರುಲತಾ ಈಗೇನು ಕೆಲಸ ಮಾಡ್ತಿದ್ದಾರೆ ಗೊತ್ತಾ?

  ಬೆಂಗಳೂರು: ಓ ಮಲ್ಲಿಗೆ  ಸಿನಿಮಾ ಖ್ಯಾತಿಯ ನಟಿ ಚಾರುಲತಾ. 90ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆ ಕೆಡಿಸಿದ ಚೆಲುವೆ ಈ ನಟಿ. ನಟಿ ಎಲ್ಲಿದ್ದಾರೆ? ಹೇಗಾಗಿದ್ದಾರೆ? ಎನ್ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

  ಮೂಲತಃ ಪಂಜಾಬಿಯಾಗಿದ್ದರೂ ಕನ್ನಡದಲ್ಲಿಯೇ ಅತಿಹೆಚ್ಚು ಸಿನಿಮಾ ಮಾಡಿದ್ದಾರೆ.  ಕನ್ನಡದ ವಿ. ಮನೋಹರ್ ನಿರ್ದೇಶನದ ‘ಓ ಮಲ್ಲಿಗೆ’ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದರು. ಆರಂಭದಲ್ಲಿ ಮಾಡ್ಲಿಂಗ್ ಮಾಡ್ತಾ ಇದ್ದರು. ಬಾಲ್ಯದಲ್ಲಿ ಜಾಹೀರಾತಿನಲ್ಲಿ ಅಭಿನಯ ಕೂಡ ಮಾಡಿದ್ದಾರೆ.

  1997ರಿಂದ 2000 ಇಸವಿವರೆಗೆ ದಕ್ಷಿಣ ಭಾರತ ಚಿತ್ರ ರಂಗದ ಬಹುಬೇಡಿಕೆ ನಟಿಯಾಗಿದ್ದರು.  ವರ್ಷಕ್ಕೆ ಕನಿಷ್ಠ 6-10 ಸಿನಿಮಾ ಮಾಡುತ್ತಿದ್ದ ಚಾರುಲತಾ ನಂತರ ಸಿನಿಮಾ ಅವಕಾಶಗಳನ್ನು ಕಡಿಮೆ ಮಾಡಿದರು.  ಕನ್ನಡ ಚಿತ್ರರಂಗ ಹೊರತಾಗಿ ತಮಿಳು ಹಾಗೂ ಮಲೆಯಾಳಂನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್‌ ಆರಂಭಿಸಿದರು.  ನೀಲಾಂಬರಿ, ಜೋಡಿಹಕ್ಕಿ, ಮದುವೆ, ಜಗತ್ ಕಿಲಾಡಿ, ಪಾಂಡವರು, ಹಬ್ಬದಂತ ಚಿತ್ರಗಳು ಕಾಣಿಸಿಕೊಂಡರು.  ದರ್ಶನ್ ಚಕ್ರವರ್ತಿ ಚಿತ್ರ ಆದ್ಮೇಲೆ ಚಾರುಲತಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

  ಚಾರುಲತಾ ಈಗ ದೆಹಲಿಯಲ್ಲಿ ತಾಯಿಯೊಂದಿಗಿದ್ದು, ಗಾರ್ಮೆಂಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ಅವರು ಕನ್ನಡವನ್ನು ಬಿಡದೇ ಸಣ್ಣ ಪುಟ್ಟ ರೀಲ್ಸ್‌ಗಳನ್ನು ಮಾಡುತ್ತಾ ಅಭಿಮಾನಿಗಳಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರೆ.

  ಮೇಡಂ ನೀವು ಎಲ್ಲಿದ್ದೀರಿ? ಸಿನಿಮಾ ಯಾಕೆ ಮಾಡುತ್ತಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಕೇಳುತ್ತಲೆ ಇರುತ್ತಾರೆ. ಆದರೆ  ಸ್ಮೈಲಿಗಳ ಮೂಲಕ ನಟಿ ರಿಯಾಕ್ಟ್ ಮಾಡುತ್ತಾರೆ.   ಮದುವೆ ಕುರಿತಾದ ಯಾವುದೇ ಅಸಲಿ ಮಾಹಿತಿ ಲಭ್ಯವಿಲ್ಲ. ಈ ನಟಿ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಾರಾ ಕಾದು ನೋಡಬೇಕು.

  ನನಗೆ ಅದ್ರ ಅವಶ್ಯಕತೆ ಇಲ್ಲ, ಎಲ್ಲವನ್ನು ಅನುಭವಿಸಿದ್ದೇನೆ..’ಓ ಮಲ್ಲಿಗೆ’ ಬ್ಯೂಟಿ ಚಾರುಲತಾ ಓಪನ್​ ಟಾಕ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts