Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಎಸ್​ಆರ್​ಕೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಭ್ರಮ

Friday, 13.07.2018, 3:05 AM       No Comments

ಬೆಂಗಳೂರು: ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಮನೆಮುಂದೆ ಹಬ್ಬದ ವಾತಾವರಣವೇ ನಿರ್ವಣವಾಗಿತ್ತು. ಗುರುವಾರ (ಜು.12) 56ನೇ ವಸಂತಕ್ಕೆ ಕಾಲಿಟ್ಟ ನೆಚ್ಚಿನ ನಟನಿಗೆ ಶುಭಕೋರಲು ಬಂದಿದ್ದ ಅಭಿಮಾನಿಗಳು ಹಲವು ಬಗೆಯ ಕೇಕ್, ಉಡುಗೊರೆ ಮತ್ತು ಹೂಗುಚ್ಛಗಳನ್ನು ನೀಡಿ ಸಂಭ್ರಮಿಸಿದರು. ಮನೆಯ ಸುತ್ತಮುತ್ತ ತಲೆಎತ್ತಿದ್ದ ದೊಡ್ಡ ಬ್ಯಾನರ್​ಗಳು ಜನ್ಮದಿನದ ರಂಗು ಹೆಚ್ಚಿಸಿದವು. ಬುಧವಾರ ರಾತ್ರಿಯೇ ನಾಗವಾರದ ನಿವಾಸದಲ್ಲಿ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಆತ್ಮೀಯರ ಜತೆ ಬರ್ತ್​ಡೇ ಆಚರಿಸಿಕೊಂಡ ಶಿವಣ್ಣ, ಗುರುವಾರ ದಿನಪೂರ್ತಿ ಫ್ಯಾನ್ಸ್ ಜತೆ ಕಾಲ ಕಳೆದರು. ದೂರದ ಊರುಗಳಿಂದ ಬಂದು, ಸರತಿ ಸಾಲಿನಲ್ಲಿ ನಿಂತು ಕಾದ ‘ಅಭಿಮಾನಿ ದೇವರುಗಳ’ ಜತೆಗೆ ಸೆಲ್ಪಿಗೆ ಪೋಸ್ ನೀಡಿದರು. ‘ಶಿವು ಅಡ್ಡ’ ಅಭಿಮಾನಿಗಳು ತಂದಿದ್ದ 326 ಕೆ.ಜಿ. ತೂಕ, 56 ಅಡಿ ಉದ್ದದ ಕೇಕ್ ಎಲ್ಲರ ಗಮನ ಸೆಳೆಯಿತು.

‘ರುಸ್ತುಂ’ಗಾಗಿ ಬಂದ ವಿವೇಕ್ ಒಬೆರಾಯ್

ಈಗಾಗಲೇ ಶೂಟಿಂಗ್ ಆರಂಭಿಸಿರುವ ‘ರುಸ್ತುಂ’ ಬಳಗದಿಂದಲೂ ಹೊಸ ಸುದ್ದಿ ಕೇಳಿಬಂದಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಜತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ತೆರೆಹಂಚಿಕೊಳ್ಳಲಿದ್ದು, ಈ ಮೂಲಕ ಅವರು ಚಂದನವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಕನ್ನಡಕ್ಕೆ ಕರೆತರಬೇಕು ಎಂದು ಈ ಮೊದಲೇ ಅನೇಕ ನಿರ್ದೇಶಕರು ಪ್ರಯತ್ನಿಸಿದ್ದರು. ರಾಮ್ೋಪಾಲ್ ವರ್ವ ನಿರ್ದೇಶಿಸುತ್ತಿದ್ದ ‘ರೈ’ ಚಿತ್ರದಿಂದಲೇ ಅವರು ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಬೇಕಿತ್ತು. ಆದರೆ ಕಾರಣಾಂತರ ಆ ಸಿನಿಮಾ ಪೂರ್ಣಗೊಳ್ಳಲಿಲ್ಲ. ಹಾಗಾಗಿ ‘ರುಸ್ತುಂ’ ಚಿತ್ರವೇ ಅವರ ಮೊದಲ ಕನ್ನಡ ಸಿನಿಮಾ ಆಗಲಿದೆ. ಸಾಹಸ ನಿರ್ದೇಶಕನಾಗಿ ಬಾಲಿವುಡ್​ನಲ್ಲೂ ಕೆಲಸ ಮಾಡಿ ಅನುಭವ ಗಿಟ್ಟಿಸಿರುವ ರವಿವರ್ವ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

ಹೈವೋಲ್ಟೇಜ್ ಹೊಸ ಚಿತ್ರಗಳು

‘ಹ್ಯಾಟ್ರಿಕ್ ಹೀರೋ’ ಜನ್ಮದಿನಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಗಾಂಧಿನಗರದಲ್ಲಿ ಭರ್ಜರಿ ಉಡುಗೊರೆಗಳೇ ಸಿಕ್ಕಿವೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ಶಿವಣ್ಣ, ಇನ್ನೊಂದಿಷ್ಟು ಹೈವೋಲ್ಟೇಜ್ ಚಿತ್ರಗಳನ್ನೇ ಒಪ್ಪಿಕೊಂಡಿದ್ದಾರೆ. ಆ ಪೈಕಿ ನಾಗಾಭರಣ ಮತ್ತು ಯೋಗರಾಜ್ ಭಟ್ ನಿರ್ದೇಶಿಸಲಿರುವ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ.

ಇದೇ ಮೊದಲ ಬಾರಿಗೆ ಶಿವಣ್ಣನ ಜತೆ ಯೋಗರಾಜ್ ಭಟ್ ಕೈ ಜೋಡಿಸಿದ್ದು, ಆಗಸ್ಟ್​ನಲ್ಲಿ ಈ ಚಿತ್ರದ ಟೈಟಲ್ ಘೋಷಣೆ ಆಗಲಿದೆ. ಈಗಾಗಲೇ ಬಗೆಬಗೆಯ ಪೋಸ್ಟರ್​ಗಳು ಹರಿದಾಡುತ್ತಿದ್ದು, ನಿರೀಕ್ಷೆ ಹೆಚ್ಚಿಸಿವೆ. ಅದಕ್ಕಿಂತಲೂ ಇಂಟರೆಸ್ಟಿಂಗ್ ವಿಚಾರವೇನೆಂದರೆ, ‘ಚಿಗುರಿದ ಕನಸು’ ಮತ್ತು ‘ಜನುಮದ ಜೋಡಿ’ಯಲ್ಲಿ ಮೋಡಿ ಮಾಡಿದ್ದ ನಾಗಾಭರಣ ಮತ್ತು ಶಿವಣ್ಣ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ. ಪೂರ್ಣಚಂದ್ರ ತೇಜಸ್ವಿ ಬರೆದ ‘ಜುಗಾರಿ ಕ್ರಾಸ್’ ಕಥೆಯನ್ನು ನಾಗಾಭರಣ ಬೆಳ್ಳಿಪರದೆಗೆ ತರುತ್ತಾರೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಆ ಚಿತ್ರಕ್ಕೆ ಶಿವರಾಜ್​ಕುಮಾರ್ ಹೀರೋ ಎಂಬ ವಿಷಯ ಈಗ ಬಹಿರಂಗವಾಗಿದೆ. ‘ಕಡ್ಡಿಪುಡಿ’ ಚಂದ್ರು ನಿರ್ವಣದ ಹೊಣೆ ಹೊತ್ತಿದ್ದು, ‘ಸಂತೆಯಲ್ಲಿ ನಿಂತ ಕಬೀರ’ ಬಳಿಕ ಸಾಹಿತ್ಯ ಕೃತಿ ಆಧಾರಿತ ಚಿತ್ರದಲ್ಲಿ ಮತ್ತೊಮ್ಮೆ ಎಸ್​ಆರ್​ಕೆ ಬಣ್ಣ ಹಚ್ಚುತ್ತಿರುವುದು ವಿಶೇಷ. ಇದಲ್ಲದೆ, ‘ದ್ವಾರಕೀಶ್ ಚಿತ್ರ’ ಬ್ಯಾನರ್​ನ 52ನೇ ಸಿನಿಮಾದಲ್ಲಿ ‘ಹ್ಯಾಟ್ರಿಕ್ ಹೀರೋ’ ನಟಿಸುವುದು ಖಚಿತವಾಗಿದೆ. ಅದಕ್ಕೆ ಪಿ. ವಾಸು ಆಕ್ಷನ್-ಕಟ್ ಹೇಳಲಿದ್ದಾರಂತೆ. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಲಿರುವ ಹೊಸ ಚಿತ್ರ ‘ವೈರಮುಡಿ’ಗೂ ಅವರೇ ನಾಯಕ.

Leave a Reply

Your email address will not be published. Required fields are marked *

Back To Top