ಡಿಸೆಂಬರ್​ನಲ್ಲಿ ಮುದ್ದು ಜೋಡಿ ದಿಗ್ಗಿ-ಆ್ಯಂಡಿ ಮ್ಯಾರೇಜ್​ ಫಿಕ್ಸ್​!

ಬೆಂಗಳೂರು: ಚಂದನವನದ ಮೋಸ್ಟ್ ಪಾಪ್ಯುಲರ್​ ಜೋಡಿ ದಿಗಂತ್ ಹಾಗೂ ಐಂದ್ರಿತಾ ಮದುವೆ ಯಾವಾಗ ಎಂಬ ಹಲವು ವರ್ಷಗಳ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ.

ಹೌದು, ಈ ಪ್ರಶ್ನೆಗೆ ಖುದ್ದು ನಟ ದಿಗಂತ್​ ಅವರೇ ದಿಗ್ವಿಜಯ ನ್ಯೂಸ್​ ವಿಶೇಷ ಕಾರ್ಯಕ್ರಮದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ತಾಯಿಯ ಸಮ್ಮುಖದಲ್ಲಿಯೇ ಮದುವೆ ಬಗ್ಗೆ ಹೇಳಿಕೊಂಡಿರುವ ದಿಗಂತ್​, “ಎಲ್ಲವೂ ಓಕೆ ಆದರೆ ಡಿಸೆಂಬರ್​ನಲ್ಲಿ ಮದುವೆಯಾಗುತ್ತೇವೆ,” ಎನ್ನುವ ಮೂಲಕ ದೊಡ್ಡ ಮಟ್ಟದ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕಿದ್ದಾರೆ.

View this post on Instagram

Keep smiling 😊

A post shared by diganthmanchale (@diganthmanchale) on

‘ವಿಜಯವಾಣಿ’ ಸೋದರ ಸಂಸ್ಥೆ ‘ದಿಗ್ವಿಜಯ ನ್ಯೂಸ್​’ನಲ್ಲಿ ಸದ್ಯದಲ್ಲೇ ಪ್ರಸಾರವಾಗಲಿರುವ, ‘ಮತ್ತೆಲ್ಲಾ ಅರಾಮಲ್ದಾ’ ವಿಶೇಷ ಕಾರ್ಯಕ್ರಮದಲ್ಲಿ ದಿಗಂತ್​ ತಮ್ಮ ಮದುವೆ ವಿಷಯ ಹಾಗೂ ಐಂದ್ರಿತಾ ಬಗ್ಗೆ ಹೇಳಿಕೊಂಡಿದ್ದಾರೆ.

ಐಂದ್ರಿತಾ ಬಗ್ಗೆ ಮಾತನಾಡಿದ ದಿಗಂತ್​, “ಐಂದ್ರಿತಾ ವಿಷಯದಲ್ಲಿ ನಾನು ಅದೃಷ್ಟ ಮಾಡಿದ್ದೇನೆ. ಅವಳಿಗೂ ಹವ್ಯಕ ಹೇಳಿಕೊಡುತ್ತಿದ್ದೇನೆ. ಆಗಾಗ ಸಾಗರಕ್ಕೆ ಕರೆದುಕೊಂಡು ಹೋಗುತ್ತಿರುತ್ತೇನೆ. ನಮ್ಮ ಅಜ್ಜಿಗೆ ಅವಳಂದ್ರೆ ಬಹಳ ಖುಷಿ,” ಎಂದು ಸಂತಸ ವ್ಯಕ್ತ ಪಡಿಸಿದರು.

View this post on Instagram

No RoAd Is lOnG wHeN YoU hAvE gOOd cOmPanY 😀#riders

A post shared by diganthmanchale (@diganthmanchale) on

ಸಂದರ್ಶನದ ತುಣುಕು:

ಸಂದರ್ಶಕ: ಮೊದಲು ಅಪ್ಪಿ (ದಿಗಂತ್​) ಕೂಸು(ಐಂದ್ರಿತಾ) ಬಗ್ಗೆ ಹೇಳಿದ್ದು ಯಾವಾಗ?

ದಿಗಂತ್​ ತಾಯಿ: ಮನಸಾರೆ ಟೈಮ್​ ಅಲ್ಲಿ ಅವ್ರಿಬ್ರೂ ಫ್ರೆಂಡ್ಸ್​ ಆಗಿದ್ರಲ್ವಾ ಹಾಗಾಗಿ ನಮಗೆ ಅಷ್ಟೆ ಗೊತ್ತಾಗಿದ್ದು.

ಸಂದರ್ಶಕ: ನಿಮಗೆ ಫಸ್ಟ್​ ಏನ್​ ಹೇಳಿದ್ರು?

ದಿಗಂತ್​ ತಾಯಿ: ನಮ್​ ಮನೇಲಿ ಆ ಥರದ ಯಾವುದೇ ರಿಸ್ಟ್ರಿಕ್ಷನ್​ ಎಲ್ಲ ಇಲ್ಲ. ಅವ್ರಿಬ್ರೂ ನಮಗೆ ಇದುವರೆಗೆ ಆ ರೀತಿ ಏನು ಹೇಳಿಲ್ಲ. ನಾವೇ ಯೋಚನೆ ಮಾಡಿದ್ವಿ…

ದಿಗಂತ್​: ಸದ್ಯದಲ್ಲೇ ಗುಡ್​ ನ್ಯೂಸ್​ ತಿಳಿಸುತ್ತೀವಿ. ಎಲ್ಲ ಕೈಗೂಡಿದರೆ ಡಿಸೆಂಬರ್​ನಲ್ಲಿ ಆಗಬೇಕು ಅಂತ ಇದ್ದೀವಿ…(ದಿಗ್ವಿಜಯ ನ್ಯೂಸ್​)