ಕಾರು ಅಪಘಾತ: ದರ್ಶನ್​, ಪ್ರಜ್ವಲ್​ ದೇವರಾಜ್​ ಸೇರಿ ನಾಲ್ವರಿಗೆ ಗಾಯ

ಮೈಸೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಹೊರವಲಯದಲ್ಲಿ ಅಪಘಾತಕ್ಕೀಡಾಗಿದ್ದು, ದರ್ಶನ್​, ಪ್ರಜ್ವಲ್​ ದೇವರಾಜ್​ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.

ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹಿನಕಲ್ ಜಂಕ್ಷನ್​ ಬಳಿ ಕಾರು ಸ್ಕಿಡ್ ಆಗಿ ಅವಘಡ ನಡೆದಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್​ ಅವರ ಕೈಗೆ ಗಾಯವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ದರ್ಶನ್​ ಅವರು ಒಡೆಯ ಚಿತ್ರದ ಶೂಟಿಂಗ್​ ಮುಗಿಸಿ ವಾಪಸ್​ ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅಪಘಾತದ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ ಒಡೆಯ ಚಿತ್ರದ ನಿರ್ಮಾಪಕ ಸಂದೇಶ್​ ನಾಗರಾಜ್​ ಅವರು ನನಗೆ ಈಗಷ್ಟೇ ದರ್ಶನ್​ ಪಿ.ಎ. ಲಕ್ಷ್ಮಣ್​ ಅವರಿಂದ ಮಾಹಿತಿ ಲಭ್ಯವಾಗಿದೆ. ಸದ್ಯ ನಾನು ಆಸ್ಪತ್ರೆ ಬಳಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.