ಸಿನಿಮಾದಲ್ಲಿ ಚಾನ್ಸ್​ ಕೊಡುವುದಾಗಿ ಮಹಿಳೆಗೆ ವಂಚಿಸಿ, ಕೊಲೆಗೆ ಯತ್ನ ಆರೋಪ: ಸ್ಯಾಂಡಲ್​ವುಡ್​ ನಟ ಸೇರಿ ಇಬ್ಬರ ಬಂಧನ

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವ ನೆಪದಲ್ಲಿ ಮಹಿಳೆಯೊಬ್ಬಳಿಗೆ ವಂಚಿಸಿದ್ದಲ್ಲದೇ ಆಕೆಯ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶಬರೀಶ್ ಶೆಟ್ಟಿ ಹಾಗೂ ನವೀನ್ ಬಂಧಿತ ಆರೋಪಿಗಳು. ಆರೋಪಿ ಶಬರೀಶ್​ ಅರುಣ್​ ಚಿತ್ರದಲ್ಲಿ ನಾಯಕ ನಟನಾಗಿದ್ದ. ಶಬರೀಶ್​, ನವೀನ್​ ಎಂಬಾತನೊಂದಿಗೆ ಸೇರಿ ಮಹಿಳೆಗೆ ವಂಚಿಸಿದ್ದಾರೆ. ಅಲ್ಲದೆ, ಕೀಟಮೈನ್ ಮತ್ತು ಫೆನಾರ್ಗನ್ ಇಂಜೆಕ್ಷನ್ ನೀಡಿ ಮಹಿಳೆಯ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿಗಳೂ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಮತ್ತಷ್ಟು ಯುವತಿಯರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಕೆ.ಆರ್.ಪುರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)