ಮರಳಿಗೆ ಹೆಚ್ಚು ಬೆಲೆ ಪಡೆದರೆ ದೂರು ದಾಖಲಿಸಿ

ಹಾಸನ: ಜಿಲ್ಲೆಯಲ್ಲಿ ಸ್ಥಾಪಿಸಿರುವ ಮರಳು ದಾಸ್ತಾನು ಪ್ರದೇಶಗಳಲ್ಲಿ ಮರಳು ಟಾಸ್ಕ್‌ಫೋರ್ಸ್ ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆಯಿಟ್ಟರೆ ದೂರವಾಣಿ ಮೂಲಕವೇ ಗ್ರಾಹಕರು ದೂರು ಸಲ್ಲಿಸಲು ದೂರವಾಣಿ ಸಹಾಯ ಕೇಂದ್ರ ತೆರೆಯಲಾಗಿದೆ.
ದಾಸ್ತಾನು ಪ್ರಾಂಗಣದ ನಾಮಫಲಕದಲ್ಲಿ ದರಪಟ್ಟಿ ನಮೂದಿಸಲಾಗಿದೆ. ಪ್ರತಿ ಮೆಟ್ರಿಕ್ ಟನ್ ಮರಳಿಗೆ ಕನಿಷ್ಠ 670 ರಿಂದ ಗರಿಷ್ಠ 2,500 ರೂ. ನಿಗದಿಪಡಿಸಿದ್ದು, ಅದಕ್ಕಿಂತಲೂಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡುತ್ತಿರುವುದು ಕಂಡುಬಂದರೆ ದೂಸಂ: 08172-261111ಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಗಣಿಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
ಮರಳು ಮಾರಾಟದರ:
ಸಕಲೇಶಪುರ ತಾಲೂಕಿನ ಕೌಡಳ್ಳಿ 670 ರೂ., ಐಗೂರು 719 ರೂ., ಬ್ಯಾಗಡಿಹಳ್ಳಿ 782 ರೂ., ತೊಂತಲಾಪುರ 1102 ರೂ., ಲಕ್ಕುಂದ 1106 ರೂ., ನಿಡಿಗೆರೆ 1108 ರೂ., ಹೆನ್ನಲಿ-1ರಲ್ಲಿ 1169 ರೂ., ಮಾವಿನಹಳ್ಳಿ 1176 ರೂ., ಐಗೂರು-1ರಲ್ಲಿ 1177 ರೂ., ಮಾಗಲು 1211 ರೂ., ಹೆನ್ನಲಿ 2ರಲ್ಲಿ 1217 ರೂ., ಹಾಲೇಬೇಲೂರು 1535 ರೂ., ಮಳಲಿ 1795 ರೂ., ಕಣಗಲಮನೆ 2406 ರೂ. ಹಾಗೂ ಆಲೂರು ತಾಲೂಕಿನ ಹೆಮ್ಮಿಗೆ-1ರ ನಿಕ್ಷೇಪದಲ್ಲಿ 676 ರೂ., ಕಾಗನೂರು 1105 ರೂ., ಹರೀಹಳ್ಳಿ-1ರಲ್ಲಿ 1231 ರೂ., ಹ್ಯಾರಗಳಲೆ 1237 ರೂ., ಹಾಗೂ ಕೊಡಗಲವಾಡಿ ದಾಸ್ತಾನು ಕೇಂದ್ರದಲ್ಲಿ ಖರೀದಿಸುವ ಮರಳಿಗೆ ಪ್ರತಿ ಟನ್‌ಗೆ 2466 ರೂ. ಪಾವತಿಸಬೇಕು.
ಬೇಲೂರು ತಾಲೂಕಿನ ಗೊರವನಹಳ್ಳಿಯಲ್ಲಿ 778 ರೂ., ಹೊಸಹಳ್ಳಿ 1105 ರೂ., ನಾರ್ವೆ 1115 ರೂ., ತುಂಬುದೇವರಹಳ್ಳಿ ದಾಸ್ತಾನು ಕೇಂದ್ರದಲ್ಲಿ ಮಾರಾಟ ಮಾಡುವ ಮರಳಿಗೆ 2500 ರೂ. ದರ ನಿಗದಿ ಮಾಡಲಾಗಿದೆ.

Leave a Reply

Your email address will not be published. Required fields are marked *