ಸಿನಿಮಾ

ಸೇತುವೆಗೆ ರೇತಿ ಚೀಲವೇ ಆಧಾರ !

ಶಿರಸಿ: ಅನೇಕ ವರ್ಷಗಳಿಂದ ಸೇತುವೆ ನಿರ್ಮಿಸಿಕೊಂಡು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮಸ್ಥರೇ ಸ್ವತಃ ಸೇತುವೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಅಣಲೇಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಮನೆ, ಕ್ಯಾತನಮನೆ, ಅಂಬೆಗಾರ ಸೇರಿ ಹಲವು ಹಳ್ಳಿಗಳಿಗೆ ಅಘನಾಶಿನಿ ನದಿ ಅಡ್ಡ ಬಂದಿದೆ. ಮಳೆಗಾಲದಲ್ಲಿ ಈ ನದಿ ದಾಟಲು ಸಾಧ್ಯವಾಗದೇ ಇಲ್ಲಿಯ ನಿವಾಸಿಗಳು ಸಮಸ್ಯೆ ಎದುರಿಸುತ್ತಾರೆ.

ಸೇತುವೆ ಕಂಬ ಶಿಥಿಲ

ಹೇರೂರು ಗೋಳಿಮಕ್ಕಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಇಲ್ಲಿಯ ನಡಿಮನೆ ಬಳಿ ಜೀಪ್ ಮತ್ತು ಬೈಕ್ ದಾಟಬಹುದಾದ ಮಾದರಿಯ ಸಣ್ಣ ಸೇತುವೆಯನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ, ಅಘನಾಶಿನಿ ನದಿಯ ಪ್ರವಾಹದ ಅಬ್ಬರಕ್ಕೆ ಸೇತುವೆಯ ಇಕ್ಕೆಲಗಳ ಭದ್ರತಾ ಕಂಬಗಳು ಮುರಿದು ಹೋಗಿ ಬೈಕ್ ದಾಟಿಸಲೂ ಭಯವಾಗುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಸೇತುವೆಯ ಮಧ್ಯ ಭಾಗದ ಕಂಬವೇ ಶಿಥಿಲಗೊಂಡು ಸೇತುವೆಯ ಮೇಲೆ ಸಂಚರಿಸಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇತ್ತೀಚೆಗೆ ನೂತನ ಸೇತುವೆ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದರು. ಗ್ರಾಮಸ್ಥರ ಬೇಡಿಕೆಗೆ ಮಾಮೂಲಿಯಂತೆ ಈ ವರ್ಷ ಸಹ ಸ್ಪಂದನೆ ಸಿಕ್ಕಿಲ್ಲ.

ಮಳೆಗಾಲದ ಅನಿವಾರ್ಯತೆಗಾಗಿ ಗ್ರಾಮಸ್ಥರೇ ಈಗ ಶ್ರಮದಾನದ ಮೂಲಕ ಸೇತುವೆ ಕುಸಿದು ಬೀಳದಂತೆ ರೇತಿ ಚೀಲದ ಆಧಾರ ಒದಗಿಸಿದ್ದಾರೆ.

ಶ್ರಮದಾನದ ಮೂಲಕ ಸೇತುವೆ ರಕ್ಷಣೆ

ಗ್ರಾಮದ ಗಣೇಶ ಹೆಗಡೆ, ತಿರುಮಲೇಶ್ವರ ಹೆಗಡೆ, ರಘುಪತಿ ಹೆಗಡರ, ಜನಾರ್ದನ ಹೆಗಡೆ, ನಾಗರಾಜ ಗೌಡ, ಎಂ.ಎನ್. ಹೆಗಡೆ, ಗಣಪತಿ ಗೌಡ, ನವೀನ್ ಗೌಡ, ಮಹಾಬಲೇಶ್ವರ ನಾಯ್ಕ, ದಿನೇಶ ನಾಯ್ಕ, ಗಜಾನನ ಗೌಡ, ಸುಮಂತ ಹೆಗಡೆ ಇತರರು ಸುಮಾರು 400 ಚೀಲಗಳಲ್ಲಿ ಉಸುಕು ತುಂಬಿ ಶಿಥಿಲಗೊಂಡ ಕಂಬದ ಬುಡದಲ್ಲಿಟ್ಟು ಸೇತುವೆ ಕುಸಿತ ತಪ್ಪಿಸಲು ಯತ್ನಿಸಿದ್ದಾರೆ.

Latest Posts

ಲೈಫ್‌ಸ್ಟೈಲ್