Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಪ್ರಶ್ನೆ ಪರಿಹಾರ

Thursday, 05.07.2018, 3:02 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

# ಎಲ್ಲವೂ ಸರಿಹೋಗುತ್ತಿದೆ ಎಂದುಕೊಂಡಾಗ ಒಮ್ಮೆಗೇ ಆತ್ಮಸ್ಥೈರ್ಯ ತಪ್ಪುವಂಥ ಕುಸಿತ ಕಂಡುಬರುತ್ತದೆ. ಏನೋ, ಹೇಗೋ, ಯಾಕೋ ತೊಂದರೆ ಬರುತ್ತದೆ ಎಂದು ಧೈರ್ಯಗೆಡುವುದೇ ಆಗಿದೆ. ಒಂದು ಗಟ್ಟಿ ನೆಮ್ಮದಿ ಎಂಬುದು ಬಂದೀತೆ? ಮಗಳ ಮದುವೆಯೂ ಆಗಬೇಕು. ಇರುವ ಕಿರಾಣಿ ಅಂಗಡಿ ಮುಂದುವರಿಸುವುದು ಒಳಿತೆ? ಪರಿಹಾರವೇನು?

| ವಿಘ್ನೇಶ್ವರ ಅಡಪೇಕರ ರತ್ನಾಗಿರಿ

ಕುಸಿತ ಕಾಣಿಸಿಕೊಳ್ಳುತ್ತದೆ. ಮತ್ತೆ ಸುಧಾರಿಸಿಕೊಳ್ಳುತ್ತೀರಿ. ಆದರೆ ಪೂರ್ತಿಪ್ರಮಾಣದ, ದೀರ್ಘವಾದ, ಸಶಕ್ತ ಏಳ್ಗೆಗೆ ಅವಕಾಶವಾಗಿಲ್ಲ ಎಂಬುದು ನಿಮ್ಮ ಸಂಕಟ. ನಿಮ್ಮ ಜಾತಕ ಕುಂಡಲಿಯಲ್ಲಿ ಸೂರ್ಯನಿಂದ ಕೇತುವಿನವರೆಗೂ (ಒಂಭತ್ತೂ ಗ್ರಹಗಳು) ಅಂತರ್ಗತವಾದ ಶಕ್ತಿಯ ಸಂಪನ್ನತೆಯನ್ನು, ಹಾಗೆಯೇ ಸ್ವರೂಪ ಪಡೆದಿರುವ ಸಂಪನ್ನತೆಯಲ್ಲಿ ಕ್ಷತವನ್ನೂ ಪಡೆದು ಸವಕಳಿಯನ್ನು ಪಡೆದ ಅತಂತ್ರತೆಯನ್ನು ಪ್ರದರ್ಶಿಸುತ್ತಿವೆ. ಆದರೆ ಮುಳುಗಲು ಬಿಡುವುದಿಲ್ಲ. ಮುಳುಗಿಸಲಾರೆ ಎಂಬ ಧೈರ್ಯ ಚಾಮರವನ್ನೂ ಬಿಡಿಸಿಟ್ಟು ನೆತ್ತಿಯನ್ನು ಕಾಯುತ್ತಿಲ್ಲ. ಹೀಗಿರುವಾಗ ನೀವು ಎದುರಿಸುವ ಮನೋಕ್ಲೇಶ ಅರ್ಥವಾಗುವಂಥದ್ದು. ನಿಮ್ಮ ಹೆಸರಿನಲ್ಲೇ ನಿರ್ವಿಘ್ನಗಳಿಗೆ ಈಶ್ವರ ಎಂಬ ಅರ್ಥದ ಆವರಣಗಳಿವೆ. ಸಣ್ಣ ಮೊತ್ತದಲ್ಲಿ ನವಗ್ರಹ ಶಾಂತಿ ಮಾಡಿಸಿ. ದಾವಾಗ್ನಿಯ ಭಯ ಜಿನುಗಿಸಿರುವ ಗ್ರಹಗಳು ಶಾಂತವಾಗುತ್ತವೆ. ನಿಮ್ಮ ಮನೆದೇವರನ್ನು ಆರಾಧಿಸಿ. ಗಣೇಶನನ್ನು ಆರಾಧಿಸಿ. ಕ್ಷೇಮದ ದಾರಿ ಲಭ್ಯ.

# ಸೊಸೆಯ ಜಗಳ ನಿತ್ಯವೂ ನಡೆದಿದೆ. ನೊಂದಿದ್ದೇನೆ. ನನ್ನವಳು ಸುಮ್ಮನಿರುತ್ತಾಳೋ ಎಂದು ನೋಡಿದರೆ ಇವಳೂ ಸುಮ್ಮನಿರಲಾರಳು. ಸೊಸೆಗೆ ಮಾವನಾಗಿ, ಇವಳಿಗೆ ಪತಿಯಾಗಿ ಮೂಕಪ್ರೇಕ್ಷಕನಾಗುವ ಹೊರೆ ಕಷ್ಟವಾಗಿದೆ. ಮಗ ದಿಕ್ಕು ಕಾಣದ ಪಾರಿವಾಳದಂತಾಗಿದ್ದಾನೆ. ಪರಿಹಾರವಿದೆಯೇ?

| ಉತ್ತರಕುಮಾರ ಲಕ್ಷ್ಮಣಪ್ಪ ಹುಬ್ಬಳ್ಳಿ

ಶ್ರೀ ಲಲಿತಾತ್ರಿಶತೀ ಸ್ತೋತ್ರ ಓದಿ. ನಿಮ್ಮ ಮನೆಯವರು ಕೂಡ ಈ ಸ್ತೋತ್ರದ ಮೂಲಕ ಲಲಿತೆಯನ್ನು ಸ್ತುತಿಸಲಿ. ಕೃಷ್ಣಪಿಂಗಾಕ್ಷನಾದ ಗಣಪತಿಗೆ ನೀವು ಪ್ರತಿದಿನ ಏಳು ಗರಿಕೆಗಳನ್ನು ಏರಿಸಿ ಕೈಮುಗಿಯಿರಿ. ಸಂಸಾರದ ಚೌಕಟ್ಟಿನಲ್ಲಿ ಎದ್ದಿರುವ ಕಣ್ಣಿಗೆ ಕಾಣದ, ಆದರೂ ಸುಡುತ್ತಿರುವ ಈ ಬೆಂಕಿಯನ್ನು ನಂದಿಸಲು ಸಾಧ್ಯ. ನಿಮ್ಮ ಜಾತಕದ ಸೂರ್ಯ, ಮಗನ ಜಾತಕದ ಶುಕ್ರ, ನಿಮ್ಮ ಪತ್ನಿಯ ಜಾತಕದ ಚಂದ್ರ, ಸೊಸೆಯ ಜಾತಕದ ರಾಹುಗ್ರಹಗಳ ವಿಲಕ್ಷಣ ಸ್ಥಿತಿ ಗಮನಿಸಿ ಇದನ್ನು ಹೇಳುತ್ತಿದ್ದೇನೆ. ಸೊಸೆಗೂ ಇದನ್ನು ಓದಲು ವಿನಂತಿಸಿ. ಶಾಂತಿ ಸಾಧ್ಯ.

# ಜಾತಕ ಕುಂಡಲಿ ಕಳಿಸುತ್ತಿದ್ದೇನೆ. ಮದುವೆಯು ವಿಳಂಬವಾಗುವುದು ಯಾಕೆ ಎಂದು ತಿಳಿಸುತ್ತಲೇ ಇದ್ದೀರಿ. ನನ್ನ ಮಗಳಿಗೀಗ 33 ವರ್ಷ. ವರನೇ ಸಿಗುತ್ತಿಲ್ಲ. ಇವಳ ಓದಿಗೂ, ವರನ ಓದಿಗೂ ಅಥವಾ ಇವಳು ಬಯಸುವ ಇತರ ವಿಚಾರಗಳಿಗೂ ತಡೆ ಬರುತ್ತಲಿರುವುದರಿಂದ ವಿವಾಹ ಕಷ್ಟವೇ ಆಗಿದೆ. ಪರಿಹಾರ ತಿಳಿಸಿ.

| ವತ್ಸಲಾ ಗೋಪಿನಾಥ್ ಪಿಂಪ್ರಿ

ಒಂದು ಜಾಗ್ರತಾವಸ್ಥೆಯಲ್ಲಿದೆ. ಇನ್ನೊಂದು ಜಡತ್ವ ಪಡೆದಿದೆ. ದಾರಿಯಲ್ಲಿ ಅಡ್ಡವಾಗಿರುವ ರಾಹುವು ಅಡ್ಡವಾಗಿ ಮಲಗದೆ ದೂರವಾದರೆ ವಿವಾಹ ನಿಶ್ಚಿತ. ಹೀಗಾಗಿ ಮಗಳು ಗೋಪಾಲಕೃಷ್ಣನನ್ನು ಸ್ತುತಿಸಲಿ. ನೀಲಿ, ಕೆಂಪು, ಬಿಳಿ, ಹಸಿರು ಬಣ್ಣಗಳನ್ನು ಬೆರೆಸಿ, ಅರಿಶಿಣ, ಕುಂಕುಮ, ಅಕ್ಷತೆಗಳೊಡನೆ ನಾಗನ ಚಿಕ್ಕ ವಿಗ್ರಹಕ್ಕೆ ರಾಹು ಪೀಡಾ (7 ಬಾರಿ) ನಿವಾರಣಾ ಸ್ತೋತ್ರ ಪಠಿಸಿ ಆರಾಧಿಸಲಿ. ಚಂಪಕಾ ಪುಷ್ಪಗಳನ್ನೂ ಅರ್ಪಿಸಿ. ತೆಂಗಿನಕಾಯಿಯ ತುರಿಯಿಂದ ಮಾಡಿದ ಸಿಹಿಯನ್ನು ರಾಹುವಿಗೆ ನೈವೇದ್ಯ ಮಾಡಿ. ಮದುವೆಗೆ ಬೇಕಾದ ಅಮೃತತ್ತ ್ವು ಇದೇ ನಾಗನ ವಿಷದ ಹೆಡೆಯನ್ನು ಮುದುಡಿ ಮಂಗಳಮಯವಾದ ಲಗ್ನಮಂಟಪ ಭದ್ರವಾಗುತ್ತದೆ. ನಂಬಿಕೆಯ ಪ್ರಶ್ನೆ ಇದು. ಎಳೆ ಕರುವೂ ಭಯಂಕರ ವ್ಯಾಘ್ರವನ್ನು ತನ್ನ ಕೋಡುಗಳಿಂದೆತ್ತಿ ಬಿಸಾಡುವ, ಎತ್ತಾಗಿ ಹೂಂಕರಿಸುವಂತಹ ಶಕ್ತಿ ಕೊಡುವ ಗೋಪಾಲಕೃಷ್ಣನ ಅನುಗ್ರಹದಿಂದ ಖೇದಕ್ಕೆ ಮುಕ್ತಿ ಸಾಧ್ಯ.

# ನನ್ನ ದೊಡ್ಡ ತೊಂದರೆ ಏನೆಂದರೆ – ಎಲ್ಲರ ಕುರಿತೂ ಅನುಮಾನಗಳು ಎದ್ದೇಳುತ್ತವೆ. ಕಾರಣವಿರದ ಭಯ. ನಮ್ಮ ಪತಿ ಅನ್ಯರನ್ನು ಗುಟ್ಟಾಗಿ ಪ್ರೀತಿಸುತ್ತಿರಬಹುದೇ? ನನ್ನ ಅತ್ತೆ ಮಾವಂದಿರು ತಮ್ಮ ಹೆಣ್ಣುಮಕ್ಕಳಿಗೆ ಒಳಗಿಂದೊಳಗೇ ಆರ್ಥಿಕ ಸಹಾಯ ಮಾಡುತ್ತ ನಮಗೆ ಸಿಗಬಹುದಾದ ಲಾಭಕ್ಕೆ ಕತ್ತರಿ ಹಾಕುತ್ತಾರೆಯೆ ಇತ್ಯಾದಿ. ಹುಣ್ಣಿಮೆಯ ದಿನಗಳಂದು ಜಾಸ್ತಿ. ಏನು ಪರಿಹಾರ?

| ಮಮತಾ ಪಾಟೀಲ ಹಾನಗಲ್

‘ಇದು ಅತಿಯಾಯ್ತು’ ಎಂದು ನಿಮ್ಮ ಭಯದ ಬಗೆಗೆ ನಿಮಗೇ ತಿಳಿದಿದೆ. ಬುಧಾದಿತ್ಯ ಯೋಗ (ಇದು ಒಂದು ಸಾಮಾನ್ಯ ಬುದ್ಧಿಶಕ್ತಿಯನ್ನು ಮೀರಿ ಹೆಚ್ಚಿನ ಸಾಂದ್ರತೆಯೊಂದಿಗೆ ಅರಿವು ಹಾಗೂ ಬುದ್ಧಿಬಲವನ್ನೂ ಕೊಡುವ ಯೋಗ) ಸಂಪನ್ನತೆಯನ್ನು ಹೊಂದಿರುವುದರ ಜತೆಗೇ ರಾಹುದೋಷವನ್ನು ಕ್ಷೀಣ ಚಂದ್ರ ಘಾತವನ್ನೂ ಪಡೆದಿದೆ. ತುಂಬಿರುವ ಸಿರಿತನದ ಕಲಶ ಬರಿದಾಗುವುದೇ ಎಂಬ ಭಯ ಚಂದ್ರನಿಂದಾಗಿ ಬರುತ್ತಿದೆ. ಕಾಲದೃಷ್ಟಿಃ ಕಾಲರೂಪಃ ಶ್ರೀಕಂಠಹೃದಯಾಶ್ರಯಃ | ವಿಧುಂತುದಃ ಸೈಂಹಿಕೇಯೋ ಘೊರರೂಪೋ ಮಹಾಬಲಃ || ಎಂಬ ಸ್ತೋತ್ರವನ್ನು ಪ್ರತಿದಿನ 27 ಬಾರಿ ಪಠಿಸಿ. ಜತೆಗೆ ಸೂರ್ಯ, ಚಂದ್ರರ ಅಷ್ಟೋತ್ತರ ಪಠಿಸಿ. ಭಯವನ್ನು ನಿವಾರಿಸಿ; ಉತ್ಕಟವಾಗಿ ಬಂದೆರಗುವ ಅಬ್ಬರದ ವಿಚಾರಗಳ ಕ್ರೂರ ತೆರೆಗಳು ಪರಿವರ್ತನೆಗೊಂಡು ಶಾಂತವಾಗಿ ಪ್ರವಹಿಸುತ್ತವೆ. ಇದನ್ನು ಮಾಡಿ.

# ಬಹಳ ಕಷ್ಟಪಟ್ಟು ಒಂದು ಸೈಟನ್ನು ಖರೀದಿಸಿದೆ. ಒಂದು ರೀತಿಯಲ್ಲಿ ಅವಸರವೂ ಘಟಿಸಿ ಪ್ರಮಾದವಾಯ್ತು. ಈಗ ನಾನು ಖರೀದಿಸಿದ ಸೈಟನ್ನು ತಾನು ಖರೀದಿಸಿದ್ದೆ ಎಂದು ಇನ್ನೊಬ್ಬ ವ್ಯಕ್ತಿ ನಡುವೆ ಪ್ರವೇಶಿಸಿದ್ದಾನೆ. ತುಂಬ ಮಾನಸಿಕ ಹಿಂಸೆಯಾಗುತ್ತಿದೆ. ಕಾಯ್ದೆ ಕಾನೂನುಗಳಿಗೆ ಶಕ್ತಿಯೇ ಇಲ್ಲವೆ ಎಂಬಂತಾಗಿದೆ. ಪರಿಹಾರ ಸಿಗಬಹುದೆ?

| ರಮಾಮಣಿ ನೀಲಕಂಠಯ್ಯ ಯಳಂದೂರು

ಚಂದ್ರನು ನಿಮ್ಮನ್ನು ಉದ್ವಿಗ್ನತೆಗೆ ಸಿಲುಕಿಸುವ ಘಾತಕ ಶಕ್ತಿ ಪಡೆದಿದ್ದಾನೆ. ಕಾಯ್ದೆ ಕಾನೂನುಗಳು ರಕ್ಷಣೆ ನೀಡುವ ಶಕ್ತಿ ಕಳೆದುಕೊಂಡಿವೆಯೆ ಎಂಬ ನಿಮ್ಮ ಆತಂಕದ ಕುದಿ ನಿಮ್ಮನ್ನು ಸುಡುತ್ತಿರುವ ಬಗೆ ಅರ್ಥವಾಗುವಂಥದ್ದು. ಇದೇ ಚಂದ್ರ ಶನೈಶ್ಚರನ ಜತೆ ಕೊಂಡಿ ಕೂಡಿಸಿಕೊಳ್ಳುವ ಶನಿಕಾಟ ಬಂದಾಗ ಶನೈಶ್ಚರನ ಕೈಗೆ ಸಿಕ್ಕಿದ ಹರಿತ ಆಯುಧವೇ ಚಂದ್ರನಾಗುತ್ತಾನೆ. ಹನುಮಾನ್ ಚಾಲೀಸಾ ಓದಿ. ಚಂದ್ರಪೀಡಾ (7 ಬಾರಿ ಓದಲು 3 ನಿಮಿಷಗಳು ಸಾಕು) ನಿವಾರಣಾ ಸ್ತೋತ್ರ ಓದಿ. ಭೂಮಿ ಸಂಬಂಧವಾದ ವಿಚಾರದಲ್ಲಿನ ಅಡೆತಡೆಗಳ ನಿವಾರಣೆ ಭೂವರಾಹಸ್ವಾಮಿ ಸ್ತೋತ್ರ ಸ್ತುತಿ ಮಾಡಿ. ಈ ಸಂಬಂಧವಾಗಿ ಸೂಕ್ತ ಕಾಯ್ದೆಯ ರಕ್ಷಣೆ (ಗಡಿಬಿಡಿ ಮಾಡದೆ, ಸೂಕ್ತ, ಗ್ರಾಹಕಸ್ನೇಹಿ ಲಾಯರ್ ಬಳಿ ರ್ಚಚಿಸಿ) ಪಡೆಯಿರಿ. ಒಳಿತಿನ ಬುಧ ಹಾಗೂ ಗುರುಗ್ರಹಗಳ ಕಾರಣದಿಂದಾಗಿ ಕೋರ್ಟ್​ನಲ್ಲಿ ನಿಮಗೆ ಬೇಕಾದ ರಕ್ಷಣೆಯ ಆವರಣ ಸಿಗುತ್ತದೆ. ದಾರಿಯಲ್ಲಿ ಅಡೆತಡೆಗಳಿವೆ. ತಾಳ್ಮೆ, ಗಟ್ಟಿಯಾದ ಹೆಜ್ಜೆಗಳು ಯಶ ತರಲಿವೆ.

# ನಾನಾಕಾರಣ ನಾನು ದೊಡ್ಡ ಕೆಲಸವೊಂದನ್ನು ಕಳೆದುಕೊಂಡೆ. ಇಲ್ಲಿ ನನ್ನ ಕೆಲಸದ ಗುಣಮಟ್ಟದ ಸವಕಳಿಯಿಂದಾಗಿ ತೊಂದರೆಯಾದುದಲ್ಲ. ಕ್ಷುಲ್ಲಕ ಕಾರಣಕ್ಕಾಗಿ ಮೇಲಿನ ವ್ಯಕ್ತಿ ನನ್ನ ವಿರುದ್ಧ ಕೆಟ್ಟ ರಿಪೋರ್ಟ್ ಬರೆಯುವ ವಿಷದ ಹನಿಗಳು ನನಗೀಗ ದುರವಸ್ಥೆ ತಂದಿವೆ. ಅವನನ್ನು ನೇರವಾಗಿ ನಿಯಂತ್ರಿಸಲು ಸಾಧ್ಯವಿರಲಿಲ್ಲ. ಬೇರೆ ಕೆಲಸ ಸಿಗಬಹುದೇ? ಪರಿಹಾರವೇನು?

| ಗಣಪತಿ ಜೋಯ್್ಸ ಭದ್ರಾವತಿ

ನಿಮಗೀಗ ರಾಹುದಶಾಕಾಲದಲ್ಲಿ ವಿಷದ ಹೆಡೆಗಳು ಇಂಥ ಬಾಸ್ ಅಥವಾ ಅರೆಬಾಸ್​ಗಳಿಂದ ಮೇಲೆದ್ದು ಬರುತ್ತಲೇ ಇರುತ್ತವೆ. ಇವತ್ತಿನ ಕಾಲವೇ ಅಡಕತ್ತರಿಯ ಮೇಲೆ ನಮ್ಮ ಪ್ರತಿಭೆ ಹಾಗೂ ಶಕ್ತಿಯನ್ನು ನಿಲ್ಲಿಸಿಡುವ ರೀತಿಯಲ್ಲಿ ಸಂಯೋಜಿಸಲ್ಪಟ್ಟಿರುತ್ತವೆ. ಕೆಲವು ಸಲ ಕೇವಲ ಗಾಜಿನ ಹರಳೇ ವಜ್ರವಾಗಿ (ಭ್ರಮೆಯನ್ನುಕ್ಕಿಸುವ ಶಕ್ತಿ ಪಡೆದು) ಸಂಭ್ರಮಿಸುತ್ತಿರುತ್ತದೆ. ವಜ್ರವು ನಿಜವಾದ ಸತ್ವ ಪಡೆದಿರುವಾಗ ಇದು ಸಂಭವಿಸದು. ಈಗ ನಿಮಗೆ ಗುರುದಶಾ ಪ್ರಾರಂಭವಾಗಿದೆ ಎಂದಾಗಿದ್ದರೆ ಇಂಥ ಸ್ಥಿತಿಗತಿ ಇರುತ್ತಿರಲಿಲ್ಲ. ಆದರೂ ಬಿಳಿ ಬಟ್ಟೆಯ ಮೇಲೆ ಕಪ್ಪು ವರ್ಣದ ಬಳಕೆ ಮಾಡಿ ಒಂದು ತ್ರಿಕೋನ ರಚಿಸಿ, ತ್ರಿಕೋನದ ನಡುವೆ ಕೆಂಪು ವೃತ್ತ (ಕುಂಕುಮದ ಬೊಟ್ಟಿನಂತೆ) ರಚಿಸಿ, ಶಿವಧ್ಯಾನಾಸಕ್ತರಾಗಿ, ಸಂಕಲ್ಪಿತ ಕಾರ್ಯಸಿದ್ಧಿಗೆ ಪ್ರಾರ್ಥಿಸಿ. ಹೊಸ ಕೆಲಸಕ್ಕೆ ಅವಕಾಶ ಸಾಧ್ಯವಾಗುತ್ತದೆ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top