ನಾದಮಯ ಈ ಲೋಕವೆಲ್ಲ…

ಭಾರತೀಯ ಸಂಗೀತಕ್ಕೂ ಅಧ್ಯಾತ್ಮಕ್ಕೂ ಇರುವ ನಂಟು ತಾಯಿ-ಮಗುವಿನ ಸಂಬಂಧದಷ್ಟೇ ಸಹಜವಾದುದು, ಅನ್ಯೋನ್ಯವಾದದ್ದು. ಈ ಸಂಗೀತವು ಮನೋರಂಜನೆಗಿಂತಲೂ ಮುಖ್ಯವಾಗಿ ಮನಸ್ಸನ್ನು ಉನ್ನತ ಸ್ತರಕ್ಕೇರಿಸುವ ಪರಿಶುದ್ಧ ಗುಣವುಳ್ಳದ್ದು. ಅದೇ ಕಾರಣಕ್ಕಾಗಿ ಜಗತ್ತಿನೆಲ್ಲೆಡೆ ಭಾರತೀಯ ಸಂಗೀತಕ್ಕೆ ವಿಶೇಷ ಗೌರವ, ಮನ್ನಣೆ. ಭಾರತೀಯ ಸಂಗೀತದಲ್ಲಿ ತಾತ್ತಿ್ವಕತೆ ಮತ್ತು ಅದರ ವೈಶ್ವಿಕವಾದ ಅನ್ವಯವನ್ನು ಗುರುತಿಸುವ ಪ್ರಯತ್ನ ಇಲ್ಲಿದೆ.

| ಎನ್.ಪಿ. ಸಾಯಿಗಣೇಶ್

‘ವೇದಾನಾಂ ಸಾಮವೇದೊà—ಸ್ಮಿ (ಭ.ಗೀ.: 10.22) ಎಂಬುದು ಭಗವಂತನದ್ದೇ ಮಾತು. ಬಹಳ ವಿಶಿಷ್ಟವಾದದ್ದು ಕೂಡ. ಸಾಮವೇದವಾದರೋ ಬಹುಪಾಲು ಋಗ್ವೇದದ ಆಯ್ದ ಮಂತ್ರಗಳೇ ಆದರೂ ಭಗವಂತ, ‘ವೇದಗಳಲ್ಲಿ ಸಾಮವೇದವು ತಾನು’ ಎಂದು ಹೇಳುವುದು, ನಮ್ಮ ಪರಂಪರೆಯಲ್ಲಿ ಸಂಗೀತಕ್ಕಿರುವ ಎತ್ತರವನ್ನು ಸೂಚಿಸುತ್ತದೆ.

ವೀಣಾಗಾನವು ಭಗವಂತನನ್ನು ಕುರಿತಾಗಿಯೆ ಎಂದು ಸಾಮವೇದದ – ಛಾಂದೋಗ್ಯ ಉಪನಿಷತ್ತು ತಿಳಿಸುತ್ತದೆ. ಶಂಕರರು ಅದನ್ನು ವೇದಗಾನವಷ್ಟೆ ಅಲ್ಲದೆ ಲೌಕಿಕಗಾನಕ್ಕೂ ಅನ್ವಯಿಸುತ್ತಾರೆ. ಸಂಗೀತಕ್ಕೂ, ಮೋಕ್ಷಕ್ಕೂ ಒಂದು ಬಗೆಯ ಸಹಜವಾದ ಸಂಬಂಧವೇ ಏರ್ಪಟ್ಟಿರುವುದು ಮತ್ತು ಅದನ್ನೇ ಅನಾದಿಕಾಲದಿಂದಲೂ ಮಹಾತ್ಮರೆಲ್ಲರೂ ಸಾಕ್ಷಾತ್ಕರಿಸಿಕೊಳ್ಳುತ್ತ ಬಂದಿರುವುದು ವೇದ್ಯವಷ್ಟೆ. ವೇದಕರ್ಮವಾದ ಯಜ್ಞಗಳಲ್ಲಿ ಸಾಮದ ವಿನಿಯೋಗದಿಂದ ಹಿಡಿದು ನಮ್ಮ ಇಂದಿನ ಭಜನೆಗಳ ತನಕ ಎಲ್ಲೆಡೆಯೂ ಸಂಗೀತವು ಪರತತ್ತ ್ವೆಡೆಗೆ ಕರೆದೊಯ್ಯಲು ವಾಹಕವಾಗಿಯೇ ವಿನಿಯೋಗವಾಗಿದೆ. ಅಷ್ಟೇ ಏಕೆ, ಭಗವಂತನೇ ಸೂಚಿಸಿರುವಂತೆ ಇಲ್ಲಿ ಮಾಧ್ಯಮವೇ ಗಮ್ಯವೂ ಆಗಿದೆ. ಸಂತ ತ್ಯಾಗರಾಜಾದಿಗಳ ಸಂಗೀತತತ ¤ದಲ್ಲಿ ಈ ವಿಚಾರದ ಸಂವಾದಿತ್ವವನ್ನು ಕಾಣಬಹುದು.

ಗೀತಂ ಜ್ಞಾನಂ ಶಿವಪ್ರಾಪ್ತೇಃ ಸುತರಾಂ ಕಾರಣಂ ಭವೇತ್ | ಗೀತ ಜ್ಞಾನೇನ ಯೋಗಸ್ಯಾದ್ಯೋಗಾದೇವ ಶಿವಕೃತಾ || ಶಿವಪ್ರಾಪ್ತಿಗೆ ಸಂಗೀತಜ್ಞಾನವೇ ಮುಖ್ಯಕಾರಣವೂ, ಸಂಗೀತಜ್ಞಾನದಿಂದ ಯೋಗವೂ, ಯೋಗದಿಂದ ಮೋಕ್ಷವೂ ಲಭಿಸುತ್ತದೆ – ಎಂಬ ಸೂತಸಂಹಿತೆಯ ಮಾತು ಸಹ ಭಾರತದಲ್ಲಿ ಸಂಗೀತಕ್ಕಿರುವ ಸ್ಥಾನವನ್ನು ಸೂಚಿಸುತ್ತದೆ. ಸಂಗೀತದ ಉದ್ದೇಶ ಮತ್ತು ವಿನಿಯೋಗದ ಕುರಿತಾದ ಇಂತಹ ಸೂಚನೆಗಳು ನಮ್ಮಲ್ಲಿ ಯಥೇಚ್ಛವಾಗಿ ಸಿಗುವಂತಹುದು. ನಮ್ಮ ಪರಂಪರೆಯ ಶಾಸ್ತ್ರಗ್ರಂಥಗಳನ್ನೆಲ್ಲ ಅವಲೋಕಿಸುವಾಗಲೂ ನಮಗೆ ಹೇರಳವಾಗಿ ಕಂಡುಬರುವಂಥದ್ದು ನಾದದ ಬಗೆಗಿನ ಪ್ರಶಂಸೆ.

ಭಾರತೀಯ ಪರಿಕಲ್ಪನೆಯಲ್ಲಿ ಯಾವುದೇ ಚಿಂತನೆ ನಡೆಯುವಾಗಲೂ ಅದರ ಹುಟ್ಟಿನ ಚಿಂತನೆಯ ಜೊತೆಗೆ ಮೂಲ ಸೃಷ್ಟಿಯ ತಾತ್ವಿಕತೆಯನ್ನೂ ವಿವೇಚಿಸುವುದು ಸಾಮಾನ್ಯವಾಗಿ ಕಂಡುಬರುವ ವಿಚಾರವಷ್ಟೆ. ಸಂಗೀತದ ವಿಷಯದಲ್ಲಂತೂ ಇದು ಹೌದೇ ಹೌದು. ‘ಸಂಗೀತ ರತ್ನಾಕರ’ದ ಕರ್ತೃ ಸಾರಂಗದೇವ, ‘ನಾದದಿಂದ ವರ್ಣ, ವರ್ಣದಿಂದ ವಾಕ್, ವಾಕ್ಕಿನಿಂದ ವ್ಯವಹಾರ, ಹಾಗಾಗಿ ಇಡೀ ಜಗತ್ತೇ ನಾದಾಧೀನ’

(ನಾದೇನ ವ್ಯಜತೇ ವರ್ಣಃ ಪದಂ ವರ್ಣಾತ್ಪದಾದ್ವಚಃ | ವಚಸೋ ವ್ಯವಹಾರೋಯಂ ನಾದಾಧೀನಮತೋ ಜಗತ್ ||) ಎಂದು ಘೊಷಿಸುತ್ತಾನೆ. ಹೀಗೆ ನಾದಬ್ರಹ್ಮದ ಪರಿಕಲ್ಪನೆ ಮತ್ತು ತನ್ಮೂಲಕ ಸೃಷ್ಟಿಯ ಕಲ್ಪನೆ ಬಹಳ ಪ್ರಾಚೀನವಾದ್ದು.

ಭಾರತೀಯವಾದ ಯಾವುದೇ ವಿಚಾರಸರಣಿಯನ್ನು ತೆಗೆದುಕೊಂಡರೂ ಅವುಗಳ ಗಮ್ಯ ಸತ್ಯಸಾಕ್ಷಾತ್ಕಾರವೇ ಎನ್ನುವುದು ಗಮನಾರ್ಹವಾದ ಅಂಶ. ನಮ್ಮ ಎಲ್ಲ ಚಿಂತನೆಗಳ ಪ್ರಾತಿನಿಧಿಕ ತತ್ತ ್ವ ಅದೇ ಆಗಿದೆ ಎಂದರೂ ತಪ್ಪಿಲ್ಲವಷ್ಟೆ. ಈ ದೃಷ್ಟಿಯಿಂದ ಸಂಗೀತವೇ ಆದಿಯಾಗಿ – ಭಾರತೀಯ ಲಲಿತಕಲೆಗಳೆಲ್ಲ ಈ ಚಿಂತನೆಯಡಿಯಲ್ಲಿ ಸೂರು ಕಾಣುವುದು ಸಹಜವಷ್ಟೇ. ಈ ನಿಟ್ಟಿನಲ್ಲಿ ವಿದ್ವಾಂಸ ಪಾದೇಕಲ್ಲು ನರಸಿಂಹ ಭಟ್ಟರ ಮಾತುಗಳನ್ನು ಸ್ಮರಿಸಬಹುದು; ‘‘ತತ್ತ ್ವಾಸ್ತ್ರದ ಗುರಿಯೂ ಲಲಿತಕಲೆಗಳ ಗುರಿಯೂ ಒಂದೇ, ಸಮೀಪನ ವಿಧಾನಗಳಲ್ಲಿ ಮಾತ್ರ ವ್ಯತ್ಯಾಸ. ಜಾಗ್ರತ್ ಸ್ವಪ್ನಾದ್ಯಾವಸ್ಥೆಗಳನ್ನು ಅಂತಮುಖೀಯವಾಗಿ ನೋಡಿದಾಗಲೇ ಪರಮಾರ್ಥದ ಚಿಂತನೆ ಮೊದಲಾಗುತ್ತದೆ, ಅಂತಮುಖತೆ ಎನ್ನುವುದು ತತ್ತ ್ವಾಸ್ತ್ರೀಯವೂ ಹೌದು, ನಿತ್ಯಜೀವನಸಂಬಂಧಿಯೂ ಹೌದು. ಅಧ್ಯಾತ್ಮ ಎನ್ನುವುದರ ಅರ್ಥವೇ ‘ಎಲ್ಲವನ್ನೂ ತನ್ನಲ್ಲಿ ಕಾಣುವುದು’ ಎಂದು’’ (ಕಾವ್ಯಮೀಮಾಂಸೆಯ ಹೊಸ ಹೊಳಹುಗಳು: ಮುನ್ನುಡಿ). ಭಾರತೀಯ ಸಂಗೀತಕ್ಕೂ ಮತ್ತು ಅಧ್ಯಾತ್ಮಕ್ಕೂ ಇರುವ ಸಂಬಂಧ ಎಂಥದ್ದು ಎಂಬುದರ ತಾತ್ವಿಕವಾದ ವಿಚಾರವನ್ನು ನಮ್ಮ ಪರಂಪರೆಯ ಈ ದೃಷ್ಟಿಯೇ ಸಮರ್ಥವಾಗಿ ಪ್ರತಿನಿಧಿಸಬಲ್ಲುದು. ಇಲ್ಲಿ ಭಾರತೀಯ ಎನ್ನುವಂಥದ್ದು ಭೌಗೋಳಿಕವಲ್ಲ, ಮೇಲ್ಕಂಡ ಚಿಂತನೆಯ ಸ್ರೋತವನ್ನು ಪ್ರತಿನಿಧಿಸುವ ಪರಂಪರೆ ಎಂದು ಗಮನದಲ್ಲಿಟ್ಟರೆ ಸಂಗೀತ ಮತ್ತು ಅಧ್ಯಾತ್ಮದ ಜೊತೆಗಿನ ಅನ್ವಯ ಹೆಚ್ಚು ವೈಶ್ವಿಕವಾಗುತ್ತದೆ.

ಇತಿಹಾಸಕಾರ, ತತ್ತ ್ವಾಸ್ತ್ರಜ್ಞ, ಸಂಸ್ಕ ೃ ಚಿಂತಕ –

ವಿಲ್ ಡ್ಯುರಾಂಟ್ ‘ಸ್ಟೋರಿ ಆಫ್ ಸಿವಿಲೈಸೇಷನ್’ ಪುಸ್ತಕದಲ್ಲಿ ಭಾರತೀಯ ಸಂಗೀತ/ಸಂಗೀತಗಾರನ ಬಗ್ಗೆ ಆಡುವ ಮಾತುಗಳು ಮನನೀಯ. “He Starts with the finite, and sends his soul to infinite; He embroiders upon his theme until through an undulating stream of rhythm and recurrence, even through a hypnotizing monotony of notes, he has created a kind of musical Yoga, A forgetfulness of will and individuality, of matter, of space, of Time; Soul is lifted into almost mystic union with something “deeply inter fused”, some profound, immense and quite being, some primordial and pervasive reality that smiles upon all striving wills, all change and death”. (ಭಾವಾರ್ಥ: ‘‘ಭಾರತೀಯ ಸಂಗೀತಗಾರ, ತನ್ನ ಅಂತರಂಗವನ್ನು ಸೀಮಿತತೆಯಿಂದ ಅನಂತತೆಗೆ ಕೊಂಡೊಯ್ಯುತ್ತಾನೆ. ಅಂತ್ಯವೇ ಇಲ್ಲವೇನೋ ಎಂದು ಭಾಸವಾಗುವಂತೆ ಹರಿಯುವ ಲಯದ ಝುರಿಯಲ್ಲಿ, ವೃತ್ತೀಯವಾಗಿ ಅಲ್ಲಲ್ಲೇ ಸುತ್ತುವ ಸ್ವರಗಳ ಮೂಲಕ, ಒಂದು ಬಗೆಯ ಸಂಗೀತ ಯೋಗವನ್ನು ಸೃಷ್ಟಿಸಿ ತನ್ನತನವನ್ನೇ ಮರೆತು, ತನ್ಮೂಲಕ ದೇಶ-ಕಾಲ-ವಸ್ತುಗಳ ಪ್ರತ್ಯೇಕತೆಯನ್ನೇ ಇಲ್ಲವಾಗಿಸಿ, ತನ್ನ ಆತ್ಮವನ್ನು ಗಾಢವಾದ, ಸರ್ವವ್ಯಾಪಿಯಾದ, ತನ್ನಷ್ಟಕ್ಕೆ ತಾನಿದ್ದುಬಿಡುವ, ಅನಿತ್ಯವಾದವುಗಳನ್ನೆಲ್ಲ ನೋಡಿ ಮುಗುಳುನಗುವ ಆದಿಸ್ವರೂಪದ ಜೊತೆಗೆ ಬೆಸೆಯುತ್ತಾನೆ.) ಪಾಶ್ಚಿಮಾತ್ಯ ಜಗತ್ತು ಎಲ್ಲಿಯ ತನಕ ಅಸ್ತಿತ್ವಕ್ಕಾಗಿ ತಪನ, ಅಂಗೀಕಾರಕ್ಕಾಗಿ ಹಪಾಹಪಿ ಇಂತಹುವುಗಳನ್ನು ತ್ಯಜಿಸುವುದಿಲ್ಲವೋ ಅಲ್ಲಿಯ ತನಕ ಭಾರತೀಯ ಸಂಗೀತವನ್ನು ‘ತಮ್ಮದಾಗಿಸಿಕೊಳ್ಳುವುದು’ ಅಸಾಧ್ಯ ಎಂಬ ಮಾತುಗಳನ್ನಾಡಿದ್ದಾನೆ. ಈ ಮಾತುಗಳು ನಮ್ಮ ಸಂಗೀತದ ವಿವರಗಳ ಕುರಿತಾದ್ದಲ್ಲ, ಒಟ್ಟಾರೆ ಭಾರತೀಯ ಸಂಗೀತದಲ್ಲಿನ ಅಂತಮುಖೀಯತೆ ಮತ್ತು ಅದರೊಳಗೆಯೇ ಇರುವ ಒಂದು ತಪನವನ್ನು ಗುರುತಿಸಿದ ಬಗೆ.

Soul of a man is the stage for triumph and defeat, suffering and Joy. It is the point of intersection between divine and the human. Each human being has his roots here below, though he is also a reflection of celestial light – ” ‘ಮನುಷ್ಯನ ಜೀವ ಸೋಲು-ಗೆಲುವು, ನೋವು- ನಲಿವು ಇವೆಲ್ಲವುಗಳಿಗೆ ರಂಗಮಂಚ. ಮನುಷ್ಯತ್ವ ಮತ್ತು ದೈವತ್ವದ ನಡುವಣ ಬಿಂದು. ಪ್ರತಿಯೊಬ್ಬ ಮನುಷ್ಯನ ಬೇರು ಇಲ್ಲಿದ್ದರೂ, ಅವನು ಮಹತ್ತಾದ ಬೆಳಕಿನ ಪ್ರತಿಫಲನವೇ ಸರಿ. ತನ್ನನ್ನು ಅರಿಯುವ ಪ್ರಯತ್ನವೆಲ್ಲವೂ ತನ್ನೊಳಗಣ ಸೃಷ್ಟಿಕರ್ತನಿಗೆ ಸೃಷ್ಟಿಯ ಮೊರೆ.’ – ತ್ಯಾಗರಾಜರ ಬಗೆಗಿನ ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಲ್ಲಿ ಡಾ. ಎಸ್. ರಾಧಾಕೃಷ್ಣನ್ ಈ ಮಾತುಗಳನ್ನು ಹೇಳಿರುವುದು ಸೂಕ್ತವಾಗಿದೆ. ಈ ತಪನವೇ ಮನುಷ್ಯನ ಮೂಲ ಗುಣ, ಅದರ ಅರಸುವಿಕೆಯಲ್ಲೇ ಅವನ ಏಳಿಗೆಯೂ ಇರುವಂಥದ್ದು ಎನ್ನುವುದು ಪರಂಪರೆಯ ಅನುಭವಜನ್ಯವಾದ ನಂಬಿಕೆ. ಈ ಪ್ರಯತ್ನ ನಡೆಯುವ ಮಾಧ್ಯಮಗಳಲ್ಲಿ ಕಲೆ ಬಹುಮುಖ್ಯವಾದ್ದು, ಅದರಲ್ಲೂ ಅಮೂರ್ತವಾದ ಸಂಗೀತ ತನ್ನ ಉದ್ದೇಶ ಮತ್ತು ಸ್ವರೂಪದಲ್ಲಿ ಪರಂಪರೆಯ ಕಲ್ಪನೆಗೆ ಬಹಳ ಹತ್ತಿರ ಮತ್ತು ಸಹಜವಾಗಿಯೇ ಹೆಚ್ಚು ನಂಟುಳ್ಳದ್ದು. ಸಂಗೀತದಂತಹ ಮಾಧ್ಯಮ ಒದಗಿಸುವ ಅಂತಮುಖತೆ ಮತ್ತು ತಪನ ಅದನ್ನು ಸಾಧ್ಯವಾಗಿಸುತ್ತದೆ ಎನ್ನುವುದು ಅನುಭವದ ಮಾತಷ್ಟೇ. ತಮ್ಮ ಇಡೀ ಜೀವನವನ್ನು ನಾದಬ್ರಹ್ಮೋಪಾಸನೆಯಲ್ಲಿ ತೊಡಗಿಸಿಕೊಂಡ ತ್ಯಾಗರಾಜರು ‘ಪ್ರಾಣಾನಲ ಸಂಯೋಗಮುವಲ್ಲ ಪ್ರಣವ ನಾದಮು ಸಪ್ತಸ್ವರಮುಲೈ ಪರಗ, ವೀಣಾವಾದನಲೋಲುಡೌ ಶಿವ ಮನೋವಿಧಮೆರುಗರು’ ಎಂದು ಉದ್ಗರಿಸುವುದು ಸಹಜವಷ್ಟೇ. (ಭಾವಾರ್ಥ: ಪ್ರಾಣಾನಲ ಸಂಯೋಗದಿಂದ ಪ್ರಣವವು ಹುಟ್ಟಿತು, ಪ್ರಣವದ ಅನಾಹತನಾದದಿಂದ, ಆಹತ ನಾದಗಳಾದ ಸಪ್ತಸ್ವರಗಳು ಮೂಡಿದವು. ಆ ಸಪ್ತಸ್ವರಗಳನ್ನೇ ನುಡಿಸುತ್ತಾ ತನ್ನನ್ನೇ ತಾನು ಮರೆತು ವೀಣಾವಾದನಲೋಲನಾಗಿರುವ ಶಿವನ ಮನಸ್ಸನ್ನು ಸಂಗೀತದಿಂದಲ್ಲದೆ ಮತ್ತಿನ್ಯಾವುದರಿಂದ ಅರಿಯಲು ಸಾಧ್ಯ? – ಕೃತಿ: ಮೋಕ್ಷಮುಗಲದಾ.) ನಾದಬ್ರಹ್ಮೋಪಾಸನೆಯಲ್ಲೇ ಸತ್ಯವನ್ನು ಅರಸಿದ ತ್ಯಾಗರಾಜರಿಗೆ, ನಾದವೇ ದೇಹವಾಗಿರುವ ಶಂಕರನಿಗೆ ನಮಿಸುವೆ (ನಾದ ತನುಮುನಿಶಂ) ಎಂಬ ಭಾವ, ‘ನಾದೋಪಾಸನದಿಂದಲೇ ಶಂಕರ, ನಾರಾಯಣ, ಬ್ರಹ್ಮರು ತಮ್ಮೆಲ್ಲ ಕಾಂತಿಯಿಂದ ಬೆಳಗುತ್ತಿದ್ದಾರೆ’ (ಅವರೆಲ್ಲರ ಮಹಿಮೆಗೆ ನಾದೋಪಾಸನೆಯೇ ಕಾರಣ) ಎನ್ನುವ ಅಚಲವಾದ ನಂಬಿಕೆ. ಪರಮಾತ್ಮನನ್ನು ನಾದಾತ್ಮಕವಾಗಿಯೇ ಕಂಡ ನಮ್ಮ ವಾಗ್ಗೇಯಕಾರರು ಅದರ ಕಲ್ಪನೆಯನ್ನೇ ಹೆಚ್ಚೆಚ್ಚು

ತಾತ್ತಿ ್ವವಾಗಿ ಹಿಗ್ಗಿಸಿ, ಸಂಗೀತದ ಮೂಲೋದ್ದೇಶವನ್ನು ಏಕಕಂಠದಿಂದ ಜಗತ್ತಿಗೆ ಸಾರಿದ್ದಾರೆ. ಸಪ್ತಸ್ವರಗಳು ಶಿವನ ಐದು ಮುಖಗಳಿಂದ ಹೊರಟಿದ್ದು ಎನ್ನುತ್ತಾರೆ ತ್ಯಾಗರಾಜರು (ಸದ್ಯೋಜಾತಾದಿ ಪಂಚವಕ್ತ್ರಜ ಸರಿಗಮಪದನಿ ವರಸಪ್ತಸ್ವರ ವಿದ್ಯಾಲೋಲಂ – ಕೃತಿ: ನಾದತನುಂ). ರಾಮನ ಕೋದಂಡವನ್ನು ಸಂಗೀತದ ಅಂಶಗಳನ್ನು ಹೋಲಿಸುತ್ತಾರೆ (ಸ್ವರಮುಲಾರು, ಒಕ ಗಂಟಲು ವರ ರಾಗಮ ಕೋದಂಡಮು). ದೀಕ್ಷಿತರು ಭಗವತಿಯನ್ನು ಗೀತವಾದ್ಯ ವಿನೋದಿನಿ ಎಂದು ಸಂಬೋಧಿಸುತ್ತಾರೆ, ಭಗವತ್ ಕಲ್ಪನೆಯೇ ಸಂಗೀತಮಯವಾಗುವ ಉತ್ಕ ೃ್ಟ ಭಾವೋತ್ಕರ್ಷ ನಮ್ಮ ವಾಗ್ಗೇಯಕಾರರಲ್ಲಿ ಸಾಮಾನ್ಯ. ‘ತಂಬೂರಿ ಮೀಟಿದವ, ಭವಾಬ್ದಿ ದಾಟಿದವ’ ಎಂಬುವ ಹರಿದಾಸರ ಮಾತೂ ಇದಕ್ಕೆ ಸಂವಾದಿಯಾಗಿಯೇ ಇದೆ. ಇದೇ ಚಿಂತನೆಯ ಪ್ರಭಾವವೋ ಏನೋ, ಶೃಂಗಾರಪ್ರಧಾನವಾದ ಸಾಹಿತ್ಯವುಳ್ಳ ಪದಗಳು, ಜಾವಳಿಗಳು ಅದೆಷ್ಟೋ ಅಧ್ಯಾತ್ಮಪರವಾದ ಅರ್ಥ ವ್ಯಾಖ್ಯಾನವನ್ನು ಪಡೆದುಕೊಂಡಿವೆ. ಭಕ್ತಿಗೆ ಸಂಗೀತವೇ ಸೋಪಾನವಾಗಿ, ಭಕ್ತಿಯ ಗಮ್ಯವೇ ಸಂಗೀತಸ್ವರೂಪವಾಗಿ, ಕಡೆಗೆ ಸಂಗೀತವೇ ಗಮ್ಯವಾಗುವಷ್ಟು ವ್ಯಾಪ್ತಿಯನ್ನು ಕೊಟ್ಟಿದೆ ಪರಂಪರೆ. ರಸವೆಂದರೆ ರುಚಿ ಎಂಬರ್ಥದಿಂದ ಮೊದಲಾಗಿ ‘ರಸೋ ವೈ ಸಃ’ ಎಂಬಲ್ಲಿಗೆ ನಿಲ್ಲುವ ಪರಂಪರೆಯ ಚಿಂತನೆಗೆ ಸಂವಾದಿಯಾಗಿ, ಸಂಗೀತ ಮತ್ತು ಅಧ್ಯಾತ್ಮದ ನಂಟನ್ನು ಕಾಣಬಹುದು.

ಜರ್ಮನಿಯ ಶ್ರೇಷ್ಠ ಸಂಗೀತ ಸಂಯೋಜಕ ಬೆತೋವೆನ್ ಹೇಳುವ ಮಾತು ಮನನೀಯ. ‘‘ ‘ನಮಗೆ’ ಅರ್ಥವಾಗದ, ಆದರೆ ‘ನಮ್ಮನ್ನು’ ಅರ್ಥ ಮಾಡಿಕೊಳ್ಳಬಲ್ಲ ಆ ಒಂದು ಮಹತ್ತಿಗೆ – ರಹದಾರಿಯು ಸಂಗೀತ.’’ ಇದು ಅವನಿಗೆ ಸಂಗೀತದ ಬಗ್ಗೆ ಇದ್ದ ಆದರ್ಶವಾದ ನಿಲುವು. ಬೆತೊವನ್ ಮಹಾಶಯನ ಮತ್ತೊಂದು ಉದ್ಗಾರ ಇಂತಿದೆ. ‘ಸಂಗೀತವು ಎಲ್ಲ ಅರಿವು ಮತ್ತು ತಾತ್ತಿ್ವತೆಗಳಿಗಿಂತ ಮಿಗಿಲಾದುದು ಎಂದು ಅರಿಯದ

ಈ ಪ್ರಪಂಚವನ್ನು ಮನಃಪೂರ್ವಕವಾಗಿ ಬಿಡಲು ತಯಾರಿದ್ದೇನೆ’ – ಎಂಬುದು. ಜರ್ಮನಿಯ ಪ್ರಖ್ಯಾತ ಸಂಗೀತ ವಿಮರ್ಶಕ ಎಡ್ವರ್ಡ್ ಹಾನ್ಸಿ್ಲಕ್ ಹೇಳುವ ಮಾತಿದು,”Music is love. It springs from religion and leads to religion’. ಸಂಗೀತದ ಬಗೆಗಿನ ವೈಶ್ವಿಕವಾದ ಈ ಭಾವಕ್ಕೆ ಪಶ್ಚಿಮದೇಶಗಳೂ ಹೊರತಲ್ಲ ಎಂಬುದಕ್ಕೆ ಉದಾಹರಣೆಗಳಿವು. ಅನಿತ್ಯತೆಯ ಬದುಕಿಗೊಂದು ಶಾಶ್ವತತೆ ಕಲ್ಪಿಸಬಲ್ಲ ಶಕ್ತಿ ಸಂಗೀತದ್ದು ಎಂಬುದು ಜಗತ್ತಿನ ಅನೇಕ ಶ್ರೇಷ್ಠ ಸಂಗೀತಗಾರರ, ಸಂಗೀತೋಪಾಸಕರ, ಕಲಾ ವಿಮರ್ಶಕರ ಅಭಿಪ್ರಾಯವೂ ಹೌದು, ಅನುಭವವೂ ಹೌದು.

‘‘ಮದ್ಭಕ್ತಾ: ಯತ್ರ ‘ಗಾಯಂತಿ’ ತತ್ರ ತಿಷ್ಠಾಮಿ ನಾರದ’’ – ‘‘ಎಲ್ಲಿ ನನ್ನ ಭಕ್ತರು ‘ಹಾಡುತ್ತಾರೋ’ ಅಲ್ಲಿ ನಾನಿರುವೆ’’ ಎಂಬ ಭಗವಂತನ ಮಾತು, ಅಮೆರಿಕದ ವಿಲಿಯಂ ಮೆರ್ರಿಲ್ ಎಂಬುವನ -‘there is nothing in the world so much like prayer as music is’ಎಂಬ ಉಕ್ತಿಯಲ್ಲಿ ಪ್ರತಿಫಲಿಸಿದಲ್ಲಿ ಸಹಜವಷ್ಟೆ. ತ್ಯಾಗರಾಜರು ನಾರದಮುನಿಯ ಬಗ್ಗೆ ಹಾಡುತ್ತ ನಾರದನನ್ನು ನಾದಕಮಲದಿಂದ ನಾದರಸವನ್ನು ಹೀರುವ ದುಂಬಿ ಎಂದು ವರ್ಣಿಸುತ್ತಾರೆ (ಶ್ರೀನಾರದ ನಾದಸರಸೀರುಹ ಭೃಂಗ). ನಾವೂ ಕಮಲದ ಸುತ್ತಲೇ ಇರುವ ಕಪ್ಪೆಯಾಗದೆ, ಭೃಂಗವಾದಲ್ಲಿ ಏನಾದರೂ ದಕ್ಕಬಹುದೇನೋ!

(ಪ್ರತಿಕ್ರಿಯಿಸಿ: [email protected][email protected] )