More

    26ರಂದು ಕೋಲಾರದಲ್ಲಿ ಹಿಂದು ಜಾಗರಣ ವೇದಿಕೆ ತ್ರೈಮಾಸಿಕ ಸಮ್ಮೇಳನ

    ಕೋಲಾರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜ.26ರ ಸಂಜೆ 4.30ಕ್ಕೆ ಹಿಂದು ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತೀಯ ಕಾರ್ಯಕರ್ತರ ತ್ರೈವಾರ್ಷಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ತಿಳಿಸಿದರು.

    ಹಿಂದುತ್ವದ ಮೇಲೆ ಅತಿಕ್ರಮಣ ನಡೆಯದಂತೆ ಜಾಗೃತಿ ಮೂಡಿಸುವುದು, ಸಂಸ್ಕೃತಿ, ರಾಷ್ಟ್ರೀಯ ಭಾವೈಕ್ಯತೆ ಉಳಿಸಿಕೊಳ್ಳುವುದು ಸಮ್ಮೇಳನದ ಉದ್ದೇಶವಾಗಿದ್ದು, ರಾಜಕೀಯಕ್ಕೆ ಅವಕಾಶವಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    18 ಜಿಲ್ಲೆಗಳಿಂದ 3,000 ಹಾಗೂ ಸ್ಥಳೀಯವಾಗಿ 2,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಯಶಸ್ವಿಗೆ ಜಿಲ್ಲೆಯ ಹಿಂದು ನಾಗರಿಕರು ಸಹಕಾರ ನೀಡಬೇಕು ಎಂದು ಕೋರಿದರು.

    ನಿರ್ಣಯ: ಎಸ್‌ಡಿಪಿಐನಂತಹ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಲಾಗುವುದು. ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು. ಒತ್ತಾಯಿಸುವುದು ನಮ್ಮ ಹಕ್ಕು ಎಂದರು.

    ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ದಿಕ್ಸೂಚಿ ಭಾಷಣ ಮಾಡುವರು ಎಂದರು.
    ಸಮಿತಿ ಕಾರ್ಯಾಧ್ಯಕ್ಷ ಡಾ.ಸಿ.ಕೆ. ಶಿವಣ್ಣ ಮಾತನಾಡಿ, ಮಧ್ಯಾಹ್ನ 2.30ಕ್ಕೆ ಶೋಭಾಯಾತ್ರೆ ನಡೆಯಲಿದೆ. ಕಾಲೇಜು ಬಳಿಯಿಂದ ಕುರುಬರಪೇಟೆ, ಗೌರಿಪೇಟೆಯ ಅಕ್ಷಯ ನರ್ಸಿಂಗ್ ಆಸ್ಪತ್ರೆ ಮಾರ್ಗವಾಗಿ ಎಂ.ಜಿ.ರಸ್ತೆ, ಎಂಜಿ ಚೌಕ, ದೊಡ್ಡಪೇಟೆ, ಶಾರದಾ ಚಿತ್ರಮಂದಿರ ರಸ್ತೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕಾಳಮ್ಮಗುಡಿ ಬೀದಿ ರಸ್ತೆ, ಸರ್ವಜ್ಞ ಪಾರ್ಕ್‌ನಿಂದ ಕಾಲೇಜು ಮೈದಾನದಲ್ಲಿ ಕೊನೆಗೊಳ್ಳುತ್ತದೆ ಎಂದರು.

    ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಈಕಂಬಳ್ಳಿ ಧನುಷ್ ಮಾತನಾಡಿ, ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕರ್ತರ ಆಂತರಿಕ ಜಿಲ್ಲಾವಾರು ಸಭೆ ನಡೆಯಲಿದೆ. ಮೂರು ವರ್ಷಗಳ ಹಿಂದೆ ಮೈಸೂರಿನಲ್ಲಿ ಸಮ್ಮೇಳನ ಯಶಸ್ವಿಯಾಗಿ ನೆರವೇರಿತ್ತು. ಅದಕ್ಕೂ ಹಿಂದೆ ಚಾಮರಾಜನಗರ, ಬಳ್ಳಾರಿ, ಧಾರವಾಡ ಮುಂತಾದ ಕಡೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts