ಸಮ್ಮೇಳನಾಧ್ಯಕ್ಷರಿಗೆ ಗೌರವದ ಆಮಂತ್ರಣ

ಮಹಾಲಿಂಗಪುರ: ಕನ್ನಡ ಸಾಹಿತ್ಯ ಪರಿಷತ್​ನ ಜಿಲ್ಲಾ ಹಾಗೂ ಮುಧೋಳ ತಾಲೂಕು ಘಟಕದ ಆಶ್ರಯದಲ್ಲಿ ಮುಧೋಳದಲ್ಲಿ ನ.14ರಂದು ಪ್ರಥಮ ಬಾರಿಗೆ ಜರುಗುತ್ತಿರುವ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಮಕ್ಕಳ ಸಾಹಿತಿ ಅಣ್ಣಾಜಿ ಫಡತಾರೆ ಅವರನ್ನು ಅವರ ನಿವಾಸದಲ್ಲಿ ಗೌರವಿಸಿ ಸಮ್ಮೇಳನಕ್ಕೆ ಆಮಂತ್ರಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ಧುತ್ತರಗಿ ಪ್ರತಿಷ್ಠಾನದ ಚಂದ್ರಶೇಖರ ದೇಸಾಯಿ, ಕಜಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಸಾಪ ಮುಧೋಳ ಅಧ್ಯಕ್ಷ ಸಂಗಮೇಶ ನೀಲಗುಂದ, ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡ್ರ, ರಬಕವಿ-ಬನಹಟ್ಟಿ ಕಸಾಪ ಅಧ್ಯಕ್ಷ ವಿರೇಶಕುಮಾರ ಆಸಂಗಿ, ಕಸಾಪ ಮುಧೋಳ ಕಾರ್ಯದರ್ಶಿ ವೆಂಕಟೇಶ ಗುಡೆಪ್ಪನವರ, ಕವಿ ಆನಂದ ಪೂಜಾರಿ, ಮಕ್ಕಳ ಸಾಹಿತಿ ಮಲ್ಲಿಕಾರ್ಜುನ ಅರಬಿ, ಪತ್ರಕರ್ತರಾದ ಜಯರಾಮಶೆಟ್ಟಿ, ಎಸ್.ಎಸ್. ಈಶ್ವರಪ್ಪಗೋಳ ಇತರರಿದ್ದರು.