More

  ಸಮೀರಾ ರೆಡ್ಡಿ ಯಾಕೆ ಬಾಲಿವುಡ್​ನಲ್ಲಿ ಮಿಂಚಲಿಲ್ಲ? ಕಾರಣ ಹೇಳ್ತಾರೆ ಕೇಳಿ …

  ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಮಿಂಚಿದವರು ಸಮೀರಾ ರೆಡ್ಡಿ. ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ ಅವರು, ಕ್ರಮೇಣ ಬಾಲಿವುಡ್​ನತ್ತ ಮುಖ ಮಾಡಿದರು. ಒಂದಿಷ್ಟು ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದರಾದರೂ, ಅಷ್ಟೇನೂ ಮಿಂಚಲಿಲ್ಲ.

  ಇದನ್ನೂ ಓದಿ: ಲವ್ ​ಮಾಕ್​ಟೇಲ್​ ತೆಲುಗು ರಿಮೇಕ್​ಗೆ ಶೀರ್ಷಿಕೆ ಫಿಕ್ಸ್; ಮುಹೂರ್ತಕ್ಕೆ ದಿನಾಂಕವೂ ನಿಗದಿ

  ಇಷ್ಟಕ್ಕೂ ಸಮೀರಾಗೆ ಯಾಕೆ ಬಾಲಿವುಡ್​ನಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಈ ಕುರಿತು ಅವರೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ತಾನು ಕಪ್ಪು, ಉದ್ದ ಎಂಬ ಕಾರಣಕ್ಕೆ ಬಾಲಿವುಡ್​​ನಲ್ಲಿ ಅವಕಾಶಗಳು ಸಿಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

  ‘ಎಷ್ಟೋ ಜನ ನಾನು ಬಹಳ ಕಪ್ಪು, ಉದ್ದ ಮತ್ತು ದಪ್ಪ ಎಂದು ಹೇಳುತ್ತಿದ್ದರು. ಪಕ್ಕದ್ಮನೆ ಹುಡುಗಿ ಪಾತ್ರಕ್ಕೆ ನಾನು ಹೊಂದುವುದಿಲ್ಲ ಎಂದು ಹೇಳುತ್ತಿದ್ದರು. ಹಾಗೆ ಪಕ್ಕದ್ಮನೆ ಹುಡುಗಿ ಪಾತ್ರಗಳಿಗೆ ನಾನು ಸೂಟ್​ ಆಗದ ಕಾರಣಕ್ಕೆ, ಬಹುಶಃ ನಾನು ಹಿಂದಿ ಚಿತ್ರಗಳಲ್ಲಿ ಹೆಚ್ಚು ಕಾಲ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ ಸಮೀರಾ.

  ಹಾಗಂತ ಅವರಿಗೆ ಬೇಸರವಿಲ್ಲವಂತೆ. ‘ನಿಜ ಹೇಳಬೇಕೆಂದರೆ, ಈ ಕುರಿತು ನನಗೆ ಯಾವುದೇ ಬೇಸರವಿಲ್ಲ. ಏಕೆಂದರೆ, ನಾನು ಹೇಗಿದ್ದೀನೋ ಅದರ ಬಗ್ಗೆ ಸಂತೋಷವಿದೆ. ಪಾತ್ರಕ್ಕೆ ಫಿಟ್​ ಆಗಬೇಕು ಎಂಬ ಕಾರಣಕ್ಕೆ ನನ್ನನ್ನು ನಾನು ಬದಲಾಯಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: ಮೇಕಪ್​ಮ್ಯಾನ್​ಗೆ ಭಾವುಕ ವಿದಾಯ ಹೇಳಿದ ರಮೇಶ್ ಅರವಿಂದ್​

  ಅಂದಹಾಗೆ, ಸಮೀರಾ ರೆಡ್ಡಿ ಕನ್ನಡದಲ್ಲೂ ಅಭಿನಯಿಸಿದ್ದರು. ಸುದೀಪ್​ ಮತ್ತು ಚಿರಂಜೀವಿ ಸರ್ಜಾ ಅಭಿನಯದ ‘ವರದನಾಯಕ’ ಚಿತ್ರದಲ್ಲಿ ಸುದೀಪ್​ಗೆ ಜೋಡಿಯಾಗಿ ನಟಿಸಿದ್ದರು. ಅದೇ ಅವರ ಕೊನೆಯ ಚಿತ್ರವಾಯಿತು. ಆ ನಂತರ ಅವರು ಕಾರಣಾಂತರಗಳಿಂದ ಮತ್ತೆ ಚಿತ್ರಗಳಲ್ಲಿ ಅಭಿನಯಿಸಲಿಲ್ಲ.

  ‘ಮಿಸ್​ ಇಂಡಿಯಾ’ ಚಿತ್ರದ ಓಟಿಟಿ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಹೇಳಿ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts