More

    ಕಿಚ್ಚನ ನಾಯಕಿಗೆ ಬಾಲಿವುಡ್​ ಮಂದಿಯಿಂದ ಲೈಂಗಿಕ ಕಿರುಕುಳ!

    ಕಾಸ್ಟಿಂಗ್​ ಕೌಚ್​ ಸಿನಿಮಾ ಇಂಡಸ್ಟ್ರಿಯ ದೊಡ್ಡ ಪಿಡುಗು. ಈಗಷ್ಟೇ ಬಾಲಿವುಡ್​ ನಟಿ ಡಿಂಪಲ್​ ಕೌರ್​, ನಿರ್ಮಾಪಕ ಸಾಜಿದ್​ ಖಾನ್​ ಮೇಲೆ ಗಂಭೀರ ಆರೋಪ ಹೊರಿಸಿದ್ದರು. ಅಂಥದ್ದೆ ಮತ್ತೊಂದು ಘಟನೆಯನ್ನು ಬಹುಭಾಷಾ ನಟಿ ಸಮೀರಾ ರೆಡ್ಡಿ ನೆನಪು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ರಾಮ್​ಚರಣ್​ ಆಯ್ತು, ಈಗ ಅಖಿಲ್​ … ಇನ್ನೊಂದು ಚಿತ್ರದಲ್ಲಿ ರಶ್ಮಿಕಾ ಹೆಸರು

    ಬಾಲಿವುಡ್​ ಚಿತ್ರರಂಗದಲ್ಲಿ ನಡೆದ ಎರಡು ಘಟನೆಗಳನ್ನು ಮೆಲುಕು ಹಾಕಿರುವ ಸಮೀರಾ, ಈಗಲೂ ಆ ಘಟನೆಗಳನ್ನು ನೆನಪು ಮಾಡಿಕೊಂಡರೆ, ಕೋಪ ನೆತ್ತಿಗೇರುತ್ತದೆಯಂತೆ. ಹಾಗಾದರೆ, ಏನದು ಘಟನೆ? ಅದನ್ನು ಸ್ವತಃ ಸಮೀರಾ ಹೇಳಿಕೊಂಡಿದ್ದಾರೆ.

    ‘ಅದು ಬಾಲಿವುಡ್​ ಸಿನಿಮಾ. ಶೂಟಿಂಗ್​ ಸಮಯದಲ್ಲಿ ಸ್ಕ್ರಿಪ್ಟ್​ನಲ್ಲಿ ಕಿಸ್ಸಿಂಗ್​ ದೃಶ್ಯಗಳು ಇರಲಿಲ್ಲ. ನಾಯಕನ ಆದೇಶದ ಹಿನ್ನೆಲೆಯಲ್ಲಿ ನಿರ್ದೇಶಕರು ಕಿಸ್ಸಿಂಗ್​ ದೃಶ್ಯವನ್ನು ಸೇರಿಸಿದರು. ನಾನು ಅದಕ್ಕೆ ಒಪ್ಪಿರಲಿಲ್ಲ. ನೀವು ಈ ರೀತಿಯ ದೃಶ್ಯವನ್ನು ಮುಸಾಫಿರ್ ಚಿತ್ರದಲ್ಲಿ ಮಾಡಿದ್ದೀರಿ. ಹಾಗಾಗಿ ಸೇರಿಸಲಾಗಿದೆ. ನೀವು ಮ್ಯಾನೇಜ್​ ಮಾಡುತ್ತೀರಿ ಮಾಡಿ ಎಂದು ಹೀರೋ ಕಡೆಯಿಂದಲೇ ಇಂಥ ದೃಶ್ಯದ ಪ್ರಸ್ತಾಪ ಬಂದಿತ್ತು’ ಎನ್ನುತ್ತಾರವರು.

    ಇದನ್ನೂ ಓದಿ: ‘ರೈಡರ್​​’ ಮೋಷನ್​ ಪೋಸ್ಟರ್​ಗೆ ಒಂದು ಮಿಲಿಯನ್​ ಹಿಟ್ಸ್​

    ‘ನೀನು ಯಾವುದಕ್ಕೂ ಸಹಕರಿಸುತ್ತಿಲ್ಲ. ನೀನು ತುಂಬ ಬೋರಿಂಗ್​, ನೀನು ಶೂಟಿಂಗ್​ ಅನ್ನು ಫನ್​ ರೀತಿಯಲ್ಲಿ ತೆಗೆದುಕೊಳ್ಳುವುದೇ ಇಲ್ಲ. ನನಗೆ ಗೊತ್ತಿಲ್ಲ, ನಿನ್ನ ಜತೆ ನಾನು ಇನ್ನೊಮ್ಮೆ ಕೆಲಸ ಮಾಡುತ್ತೆನೋ ಇಲ್ಲವೋ ಎಂದು ಆ ಹೀರೋ ಹೇಳಿದ್ದ. ಆದರೆ, ನಾನು ಆತನ ಜತೆ ಬೇರೊಂದು ಸಿನಿಮಾ ಮಾಡಲೇ ಇಲ್ಲ. ಅದೇ ಕೊನೇ ಸಿನಿಮಾ ಎಂದು ಕಹಿ ಘಟನೆಗಳನ್ನು ನೆನೆಯುತ್ತಾರೆ ಸಮೀರಾ ರೆಡ್ಡಿ.

    ಅಂದಹಾಗೆ, ಬಾಲಿವುಡ್​, ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಸಮೀರಾ, ಕನ್ನಡದಲ್ಲಿ ಕಿಚ್ಚ ಸುದೀಪ್​ ಜತೆ ವರದ ನಾಯಕ ಸಿನಿಮಾದಲ್ಲಿ ನಟಿಸಿ ಚಂದನವನಕ್ಕೆ ಆಗಮಿಸಿದ್ದರು. (ಏಜೆನ್ಸೀಸ್​)

    ಸೈಫ್​ ಬೇಡ; ರಾಣ ಇರಲಿ … ಪ್ರಭಾಸ್​ಗೆ ಅಭಿಮಾನಿಗಳ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts