ಸಾಂಬ್ರಾದಲ್ಲಿ ಪ್ರಧಾನಿ ಮೋದಿಗೆ ಅತ್ಮೀಯ ಸ್ವಾಗತ

ಬೆಳಗಾವಿ: ಬಿಜೆಪಿ ಜಿಲ್ಲಾ ಪದಾಧಿಕಾರಿಗಳಿಂದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಬೆಳಗ್ಗೆ ಆತ್ಮೀಯ ಸ್ವಾಗತ ನೀಡಲಾಯಿತು. ತಮಗಿತ್ತ ಸ್ವಾಗತಕ್ಕೆ ಕೃತಜತೆ ಸಲ್ಲಿಸುತ್ತ ಹೆಲಿಕಾಪ್ಟರ್ ಏರಲು ತೆರಳಿದ ಮೋದಿ ಅವರು ಹತ್ತು ಹೆಜ್ಜೆ ಹಿಂದಕ್ಕೆ ಮರಳಿ ಪಕ್ಷದ ಪದಾಧಿಕಾರಿಗಳ ಬಳಿ ಚರ್ಚೆ ನಡೆಸಿದರು. ಇಲ್ಲಿನ ಚುನಾವಣೆ ಟ್ರೆಂಡ್, ಸಮಸ್ಯೆ, ಗೆದ್ದ ನಂತರ ಮಾಡಬೇಕಿರುವ ಕಾರ್ಯಗಳ ಮಾಹಿತಿ ಪಡೆದುಕೊಂಡರು.

ಚುನಾವಣೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳಿದರು. ಅಲ್ಲಿಂದ ನೇರವಾಗಿ ಚಿಕ್ಕೋಡಿಗೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು. ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ಅಭ್ಯರ್ಥಿ ಸುರೇಶ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದು, ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಚಿಕ್ಕೋಡಿಯಲ್ಲಿ ಮೋದಿ ಭಾಷಣ ಕೇಳಲು ಲಕ್ಷಾಂತರ ಅಭಿಮಾನಿಗಳು ಕಾದು ಕುಳಿತಿದ್ದರು.
ಚಿಕ್ಕೋಡಿ ಕಾರ್ಯಕ್ರಮದ ನಂತರ ಮರಳಿ ಬೆಳಗಾವಿ ಮೂಲಕ ತ್ರಿವೇಂದ್ರಂಗೆ ಪ್ರಧಾನಿ ಮೋದಿ ಪಯಣಿಸಲಿದ್ದಾರೆ.