ನುಗ್ಗೇಹಳ್ಳಿ: ಇತಿಹಾಸ ಪ್ರಸಿದ್ಧ ಶ್ರೀ ಸಾಂಬ ಸದಾಶಿವಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದಲ್ಲಿ ಬೆಳಗ್ಗೆ ಶ್ರೀ ಸಾಂಬ ಸದಾಶಿವಸ್ವಾಮಿ ದೇವರಿಗೆ ಅಭಿಷೇಕ, ಹೂವಿನ ಅಲಂಕಾರ, ಸಂಪ್ರದಾಯದಂತೆ ವಿವಿಧ ಪೂಜೆಗಳು ಜರುಗಿದವು. ಬಳಿಕ ಪ್ರಮುಖ ರಸ್ತೆಗಳಲ್ಲಿ ಶ್ರೀ ಸಾಂಬ ಸದಾಶಿವ ಸ್ವಾಮಿ ದೇವರ ಉತ್ಸವ ಸಾಗಿತು.
ರಥದ ಸುತ್ತ ದೇವರ ಉತ್ಸವ ನಡೆಸಿದ ನಂತರ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು ವಿಧಿ ವಿಧಾನದಂತೆ ಪೂಜೆಗಳು ನೆರವೇರಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವದಲ್ಲಿ ಪುರ ವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಾಂಬ ಸದಾಶಿವಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎನ್.ಡಿ. ಕುಮಾರಸ್ವಾಮಿ, ಹೋಬಳಿ ವೀರಶೈವ ಸಮಾಜದ ಅಧ್ಯಕ್ಷ ಎನ್.ಎಸ್.ಗಿರೀಶ್, ರಾಜ್ಯ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಶಶಾಂಕ್ ಗೋಪಾಲಸ್ವಾಮಿ, ಆಗಮಿಕರಾದ ರಘು ಶರ್ಮಾ ಮಠ ಮುದ್ರೆ, ಪ್ರಧಾನ ಅರ್ಚಕ ರಘು ದೀಕ್ಷಿತ್, ಸೇವಾ ಸಮಿತಿ ಗೌರವಾಧ್ಯಕ್ಷ ಎನ್.ಟಿ. ಸಿದ್ದಪ್ಪ, ಸಂಚಾಲಕ ಬಾಬು ಪ್ರಸಾದ್, ಚೀಟಿ ಸಮಿತಿ ಅಧ್ಯಕ್ಷ ಎನ್. ಆರ್. ಮುರಳಿ, ಎನ್. ಎನ್. ಕೃಷ್ಣಮೂರ್ತಿ, ಎನ್. ಜಿ. ವಿರೂಪಾಕ್ಷಪ್ಪ, ವಾಣಿಜ್ಯ ತೆರಿಗೆ ಪರಿವೀಕ್ಷಕ ಎನ್. ಎನ್. ಪ್ರಸನ್ನ, ಜಿಂದಾಲ್ ನಿವೃತ್ತ ವ್ಯವಸ್ಥಾಪಕ ವಸಂತ ಪಿ. ಕೃಷ್ಣೇಗೌಡ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಗ್ರಾಪಂ ಸದಸ್ಯರಾದ ಹೊನ್ನೇಗೌಡ, ರಮ್ಯಾ ಲೋಕೇಶ್ ಇತರರು ಇದ್ದರು.