18 C
Bengaluru
Monday, January 20, 2020

ಪ್ರಾಚೀನ ಸಂಸ್ಕೃತಿ ಸಂಪತ್ತಿನ ನೆಲೆನಾಡು ಈಜಿಪ್ಟ್

Latest News

ವಿಜಯವಾಣಿ ಸಂಪಾದಕೀಯ | ಸಹಜತೆಗೆ ಮರಳಲಿ ಕಾಶ್ಮೀರ

ಸಂವಿಧಾನದ 370ನೇ ವಿಧಿ ಅನುಸಾರ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಜಮ್ಮು-ಕಾಶ್ಮೀರ ಅಕ್ಟೋಬರ್ 31ರಿಂದಲೇ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿದೆ. ಆದರೆ,...

ಬ್ರಿಟನ್ ಅರಮನೆಯಲ್ಲಿ ಬಿರುಗಾಳಿ: ರಾಜಮನೆತನದ ಬಿಕ್ಕಟ್ಟಿಗೆ ರಾಣಿ ಎಲಿಜಬೆತ್ ಪರಿಹಾರ ಸೂತ್ರ

ಲಂಡನ್: ರಾಜಮನೆತನ ತೊರೆಯುವ ನಿರ್ಧಾರದಿಂದ ರಾಜಕುಮಾರ ಹ್ಯಾರಿ ದಂಪತಿ ಹಿಂದೆ ಸರಿಯದ ಕಾರಣ ಬ್ರಿಟನ್ ರಾಜಕುಟುಂಬದ ಬಿರುಗಾಳಿ ತಣ್ಣಗಾಗಿಸಲು ರಾಣಿ 2ನೇ ಎಲಿಜಬೆತ್...

ಆಚಾರ್ಯ ಶ್ರೀ ಶಂಕರ ಚಿತ್ರೀಕರಣಕ್ಕೆ ಮುಹೂರ್ತ

ಶೃಂಗೇರಿ: ಬೆಂಗಳೂರಿನ ‘ಯಮ್ಮನೂರು ಕ್ರಿಯೇಷನ್ಸ್ ಪ್ರೖೆವೇಟ್ ಲಿಮಿಟೆಡ್’ನ ‘ಆಚಾರ್ಯ ಶ್ರೀ ಶಂಕರ’ ಚಿತ್ರೀಕರಣ ಮುಹೂರ್ತ ಭಾನುವಾರ ತುಂಗಾ ನದಿ ತೀರದಲ್ಲಿ ನೆರವೇರಿತು. ಚಿತ್ರೀಕರಣದ ಆರಂಭ...

ಮನೋಲ್ಲಾಸ|ಸಹಾಯ ಯೋಗ್ಯವಾಗಿರಲಿ

ಜೀವನದಲ್ಲಿ ನಾವು ಅನೇಕರಿಗೆ ಹಣ ಕೊಡುವ ಪ್ರಸಂಗ ಬರುತ್ತದೆ. ರಸ್ತೆಯಲ್ಲಿ ಹೋಗುವಾಗ ಅಥವಾ ಪ್ರಯಾಣ ಮಾಡುವಾಗ ಭಿಕ್ಷೆ ಬೇಡುವವರು ಎದುರಾಗುತ್ತಾರೆ. ಹೆಂಗಸರು, ಅದರಲ್ಲಿಯೂ...

PHOTOS| ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ ಪುಷ್ಪಪ್ರಿಯರು

ಬೆಂಗಳೂರು: ಲಾಲ್​ಬಾಗ್​ನಲ್ಲಿ ಜ.26ರ ವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನವು ಪುಷ್ಪಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದು, ಭಾನುವಾರವೂ ಸಾವಿರಾರು ಮಂದಿ ಭೇಟಿ ನೀಡಿ ಪುಷ್ಪಗಳಿಂದ...

ಪಿರಮಿಡ್ ಜಗತ್ತಿನ 7 ಅದ್ಭುತಗಳಲ್ಲಿ ಒಂದೆಂಬುದು ನಮಗೆಲ್ಲ ಗೊತ್ತಿರುವ ಸಂಗತಿ. ಈಜಿಪ್ಟಿನಾದ್ಯಂತ ಸುಮಾರು 130 ಪಿರಮಿಡ್​ಗಳಿವೆಯಾದರೂ ಕೈರೋ ಹೊರವಲಯದ ಗೀಜಾದಲ್ಲಿರುವ ಪಿರಮಿಡ್ ತ್ರಿವಳಿ ಪ್ರಸಿದ್ಧವಾದುದು. ಇವುಗಳಲ್ಲಿ 481 ಅಡಿಗಳಷ್ಟು ಎತ್ತರವಿರುವ ಕುಫು ಪಿರಮಿಡ್ ಬೃಹತ್ತಾದುದು. ಎರಡನೆಯ ಕಾಫ್ರೆ ಪಿರಮಿಡ್ 448 ಅಡಿಗಳಷ್ಟು ಎತ್ತರವಿದೆ.

ಶಿವಕುಮಾರ್ ನನ್ನ ಹಳೆಯ ಗೆಳೆಯರು. ಮೂಲತಃ ಉದ್ಯಮಿಯಾದರೂ ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮಗಳಲ್ಲಿ ಆಸಕ್ತಿ ಇರುವಂಥವರು. ಯೋಗಗುರುಗಳೂ ಹೌದು. ಅವರ ಶ್ರೀಮತಿ ತ್ರಿವೇಣಿಯವರು ಲೇಖಕಿ. ಹಲವು ಪ್ರವಾಸಕಥನ ಹಾಗೂ ಜೀವನಚಿತ್ರಗಳನ್ನು ಬರೆದಿದ್ದಾರೆ. ಇಬ್ಬರೂ ಪ್ರವಾಸಪ್ರಿಯರು. ಅನೇಕ ದೇಶಗಳ ಪರ್ಯಟನ ಮಾಡಿದ್ದಾರೆ. ಈಗ್ಗೆ ಕೆಲವು ದಿನಗಳ ಹಿಂದೆ ನನಗೆ ದೂರವಾಣಿ ಕರೆ ಮಾಡಿದ ಶಿವಕುಮಾರ್ ‘ಈಜಿಪ್ಟ್ ಪ್ರವಾಸ ಹೋಗುತ್ತಿದ್ದೇವೆ, ಬರುವಿರಾ?’ ಎಂದು ಕೇಳಿದರು. ತಕ್ಷಣ ಒಪ್ಪಿಕೊಂಡೆ. ಕಾರಣ ಶಿವಕುಮಾರ್ ಪ್ರವಾಸದ ಎಲ್ಲ ವ್ಯವಸ್ಥೆ ಮಾಡುತ್ತಾರೆಂದು ಗೊತ್ತಿತ್ತು. ನಾವು ಅವರ ಜತೆ ಹೋದರೆ ಯಾವ ಸಮಸ್ಯೆಯೂ ಇರುವುದಿಲ್ಲವೆಂಬ ನಂಬಿಕೆಯಿತ್ತು. ಹೀಗೆ ಯಾರಾದರೂ ವ್ಯವಸ್ಥೆ ಮಾಡಿದರೆ ಹೋಗುತ್ತೇನೆ. ನನಗೇ ಇವೆಲ್ಲ ಸಾಧ್ಯವಾಗದ ಸಂಗತಿ. ರಜನಿಯವರಿಗೂ ಪ್ರವಾಸವೆಂದರೆ ಉತ್ಸಾಹ. ಪ್ರವಾಸಕ್ಕೆ ಬೇಕಾದ ಸಿದ್ಧತೆಯನ್ನು ಅವರು ಮಾಡುತ್ತಾರೆ. ನಾವು ಮುಂಬೈ ತಲುಪಿದಾಗ ನಮ್ಮ ಜತೆ ಆನಂದ್-ವಿನ್ನಿಮಾನೆ ದಂಪತಿಯೂ ಸೇರಿಕೊಂಡರು. ಜೀವನೋತ್ಸಾಹದ ಇವರಿಬ್ಬರೂ ಅತ್ಯಾಧುನಿಕ ಪ್ರೆಸ್​ನ ಒಡೆಯರು. ಪ್ರವಾಸ ಇವರ ಪ್ರೀತಿಯ ಹವ್ಯಾಸ. ಆರು ಜನರ ನಮ್ಮ ಗುಂಪು ಕೌಟುಂಬಿಕ ವಾತಾವರಣ ಸೃಷ್ಟಿಸಿತ್ತು. ಪರಸ್ಪರ ತೋರಿಸುತ್ತಿದ್ದ ಕಾಳಜಿ ನನಗೆ ಮಾನಸಿಕ ಭದ್ರತೆ ಒದಗಿಸಿತ್ತು.

ಈಜಿಪ್ಟ್​ನ ಬಗ್ಗೆ ನನ್ನ ಆಸಕ್ತಿಗೆ ಮೂಲಕಾರಣ ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರ್ತಿಸುವಾಗ ಗೋವಿಂದ ಪೈಯವರು ಈಜಿಪ್ಟಿನ ‘ಪಾಪಿರೈ’ನಲ್ಲಿ ಕನ್ನಡ ಪದಗಳಿರುವುದನ್ನು ಗುರ್ತಿಸಿ ಈಜಿಪ್ಟಿಗೂ ಕನ್ನಡದ ಕರಾವಳಿಗೂ ಕೊಡುಕೊಳೆಯ ನಂಟಿತ್ತೆಂದು ಹೇಳಿದ್ದಾರೆ. ಮಲ್ಪೆಯ ರಾಜನೊಬ್ಬ ಈಜಿಪ್ಟಿನ ಕನ್ಯೆಯೊಡನೆ ಕನ್ನಡದಲ್ಲಿ ಸಂಭಾಷಿಸಿದನೆಂದು ಹೇಳುವ ಪ್ರಹಸನ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಈಜಿಪ್ಟಿನಲ್ಲಿ ನಾವು ಪಾಪಿರೈ ಕಲಾಕೃತಿಗಳ ಅಂಗಡಿಗೆ ಹೋಗಿದ್ದೆವು.

ಈಜಿಪ್ಟ್ ಅತ್ಯಂತ ದೀರ್ಘ ಸಾಂಸ್ಕೃತಿಕ ಇತಿಹಾಸವುಳ್ಳ ದೇಶ. ಮೆಡಿಟರೇನಿಯನ್ ಪ್ರಾಂತ್ಯದಲ್ಲಿರುವ ಇಸ್ಲಾಮಿಕ್ ರಾಷ್ಟ್ರ ಈಜಿಪ್ಟ್​ನಲ್ಲಿ ಅರೇಬಿಕ್ ಜನಭಾಷೆ. ಕ್ರಿಶ್ಚಿಯನ್ನರ ಸಂಖ್ಯೆಯೂ ಸಾಕಷ್ಟಿದೆ. ಇವರಿಬ್ಬರ ಸಂಸ್ಕೃತಿ ಸಂಘರ್ಷದ ನಿದರ್ಶನಗಳು ಇತಿಹಾಸದ ಪುಟಗಳಲ್ಲಿದೆ. ಅನೇಕ ವರ್ಷಗಳ ಕಾಲ ಪರರ ಆಳ್ವಿಕೆಯಲ್ಲಿದ್ದ ಈಜಿಪ್ಟ್ 20ನೆಯ ಶತಮಾನದ ಮೊದಲಾರ್ಧದಲ್ಲಿ ಸ್ವಾತಂತ್ರ್ಯ ಪಡೆದರೂ 1952ರವರೆಗೆ ಬ್ರಿಟಿಷ್ ಸೈನ್ಯದ ಅಧೀನದಲ್ಲಿಯೇ ಇತ್ತು. ಸೈನ್ಯದ ವಿರುದ್ಧ ಬಂಡೆದ್ದ ಈಜಿಪ್ಟ್ ನಂತರ ತನ್ನದೇ ಸರ್ಕಾರ ರೂಪಿಸಿಕೊಂಡಿದೆ. ಈಗಲೂ ಅನೇಕ ತಲ್ಲಣಗಳ ನಡುವೆ ಬದುಕುತ್ತಿರುವ ಈಜಿಪ್ಟಿನಲ್ಲಿ ಆತಂಕದ ವಾತಾವರಣವಿದೆ. ಉಗ್ರರ ದಾಳಿಯ ಭಯವಿದೆ. ನಾವು ಪ್ರಯಾಣಿಸುತ್ತಿದ್ದ ಬಸ್ಸಿಗೆ ಒಬ್ಬ ಬಂದೂಕುಧಾರಿಯ ರಕ್ಷಣೆಯಿತ್ತು. ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಬಾರದೆಂಬ ಮುನ್ನೆಚ್ಚರಿಕೆಯ ಕ್ರಮ. ನಮ್ಮ ಗೈಡ್, ಈಜಿಪ್ಟ್ ಜನರು ಮೃದುಮಾತಿನ ಸ್ನೇಹಶೀಲರೆಂದು ಹೇಳುತ್ತಿದ್ದ. ಆದರೆ ಕೈರೋ ವಿಮಾನನಿಲ್ದಾಣದಲ್ಲಿಯೇ ಏರುದನಿಯಲ್ಲಿ ಜಗಳವಾಗುತ್ತಿತ್ತು. ಹೋಟೆಲೊಂದರಲ್ಲಿಯೂ ಇಂಥದೇ ಜಗಳದ ವಾತಾವರಣವಿತ್ತು. ನಾನು ಗಮನಿಸಿದ ಹಾಗೆ ಏರುದನಿ ಅಲ್ಲಿಯ ಸಹಜಲಯ.

ಈಜಿಪ್ಟಿನ ಸಂಸ್ಕೃತಿಗೆ ಎರಡು ನೆಲೆಯಿದೆ. ಒಂದು ಪಿರಮಿಡ್, ಮತ್ತೊಂದು ನೈಲ್. ಇವೆರಡೂ ಈಜಿಪ್ಟ್ ಬದುಕನ್ನು ರೂಪಿಸಿದಂತೆ ತೋರುತ್ತದೆ.

ಪಿರಮಿಡ್ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆಂಬುದು ನಮಗೆಲ್ಲ ಗೊತ್ತಿರುವ ಸಂಗತಿ. ಈಜಿಪ್ಟಿನಾದ್ಯಂತ ಸುಮಾರು 130 ಪಿರಮಿಡ್​ಗಳಿವೆಯಾದರೂ ಕೈರೋ ಹೊರವಲಯದ ಗೀಜಾದಲ್ಲಿರುವ ಪಿರಮಿಡ್ ತ್ರಿವಳಿ ಪ್ರಸಿದ್ಧವಾದುದು. ಇವುಗಳಲ್ಲಿ 481 ಅಡಿಗಳಷ್ಟು ಎತ್ತರವಿರುವ ಕುಫು ಪಿರಮಿಡ್ ಬೃಹತ್ತಾದುದು. ಎರಡನೆಯ ಕಾಫ್ರೆ ಪಿರಮಿಡ್ 448 ಅಡಿಗಳಷ್ಟು ಎತ್ತರವಿದೆ. ಮೂರನೆಯ ಮಿಕೆಲಿನಸ್ ಪಿರಮಿಡ್ ಚಿಕ್ಕದು, 213 ಅಡಿಗಳ ಎತ್ತರವಿದೆ. ಮೂರನೆಯ ಪಿರಮಿಡ್​ನ ತಳಪಾಯ ಚಂದವಿದೆ. ಎರಡನೆಯ ಪಿರಮಿಡ್​ನ ಬಂಧ ಬಿಗಿಯಾಗಿದೆ. ಮೊದಲನೆಯ ಪಿರಮಿಡ್ ಎಲ್ಲ ದೃಷ್ಟಿಯಿಂದಲೂ ಭವ್ಯವಾಗಿದೆ. ನಮಗೆ ಎರಡನೆಯ ಪಿರಮಿಡ್ ಒಳಗೆ ಹೋಗಲು ಅವಕಾಶವಿತ್ತು. ಒಂಟೆಯ ಮೇಲೆ ಕುಳಿತು ಮರಳುಗಾಡಿನ ಬೇರೊಂದು ದಿಕ್ಕಿನಿಂದ ನೋಡಲೂ ಅವಕಾಶವಿದೆ. ಪಿರಮಿಡ್ ನೋಡಿ ಕೆಳಗಿಳಿದು ಬಂದರೆ ಬಳಿಯೇ ಸ್ಪಿಂಕ್ಸ್​ನ ಬೃಹತ್ ಭಗ್ನ ಪ್ರತಿಮೆಯಿದೆ. ಪಿರಮಿಡ್ ಹಿಂದಿನ ಆಶಯವೇನು? ನಾಲ್ಕು ಸಾವಿರ ವರ್ಷಗಳ ಹಿಂದಿನ ಮನುಷ್ಯನ ಸಾಹಸಗಾಥೆಯನ್ನು ಪಿರಮಿಡ್ ಹೇಳುತ್ತದೆ. ಸಾವನ್ನು ಗೆಲ್ಲುವ ಮನುಷ್ಯನ ಬಯಕೆಯನ್ನು ಅದು ಸೂಚಿಸುತ್ತದೆಯೇ? ಸಾವು ಎಲ್ಲ ಕಾಲ, ದೇಶಗಳಲ್ಲಿಯೂ ಮನುಷ್ಯನನ್ನು ಗಾಢವಾಗಿ ಕಾಡಿದ ಸಂಗತಿ. ಇಲ್ಲಿ ಅದು ತೀವ್ರವಾಗಿ ನಮ್ಮ ಅನುಭವಕ್ಕೆ ಬರುತ್ತದೆ. ಈಜಿಪ್ಟ್​ನ ಪ್ರೇಕ್ಷಣೀಯ ಸ್ಥಳಗಳ ಭೇಟಿಯೆಂದರೆ ಅದೊಂದು ರೀತಿ ಸತ್ತವರ ಜತೆಗಿನ ಒಡನಾಟ. ಈಜಿಪ್ಟ್​ನ ಒಂದು ಭಾಗದಲ್ಲಿ ಎತ್ತರದ ಈ ಪಿರಮಿಡ್​ಗಳಿದ್ದರೆ ಮತ್ತೊಂದು ಭಾಗದಲ್ಲಿ ಕಣಿವೆಯಾಳದಲ್ಲಿ ಇಂಥದೇ ಪ್ರಯತ್ನವಿದೆ. ಇದು ಪಿರಮಿಡ್​ಗಳಿಗೆ ಪರ್ಯಾಯ! ಈಜಿಪ್ಟ್ ಅನ್ನು ಲೋಯರ್ ಈಜಿಪ್ಟ್ ಮತ್ತು ಅಪ್ಪರ್ ಈಜಿಪ್ಟ್ ಎಂದು 2 ಭಾಗ ಮಾಡುತ್ತಾರೆ. ಒಂದು ಭಾಗದ ರಾಜರಿಗೆ ಎತ್ತರದ ಪಿರಮಿಡ್, ಮತ್ತೊಂದು ಭಾಗದ ರಾಜರಿಗೆ ಕಣಿವೆಯಾಳದ ಸ್ಮಾರಕ! ಅದನ್ನು ‘ವ್ಯಾಲಿ ಆಫ್ ಕಿಂಗ್ಸ್’ ಎಂದು ಕರೆಯುತ್ತಾರೆ. ಅಲ್ಲಿಯೂ ಮನುಷ್ಯನ ಸಾಹಸಗಾಥೆಯ ಕತೆಯೇ! ಅಬುಸಿಂಬೇಲ್, ಕಾರ್ನಕ್, ಲಕ್ಸರ್ ಮೊದಲಾದ ದೇವಸ್ಥಾನಗಳೂ ಬೃಹತ್ತಾಗಿವೆ.

ಇವೆಲ್ಲ ಭವ್ಯ ನಿರ್ವಣಗಳು. ಕೆಲವನ್ನು ನೈಲ್ ನದಿಯ ಪ್ರವಾಹದಿಂದ ಹಾಗೂ ಡ್ಯಾಮ್ ನಿರ್ಮಾಣದಿಂದ ರಕ್ಷಿಸಲು ಸ್ಥಳಾಂತರ ಮಾಡಲಾಗಿದೆ. ಇದು ಆಧುನಿಕ ಸಾಹಸ. ಉತ್ಖನನ ನಡೆಯುತ್ತಲೇ ಇದೆ. ಇಲ್ಲಿನ ಕಲಾಕುಶಲತೆಯೂ ಗಮನ ಸೆಳೆಯುತ್ತದೆ. ಇಲ್ಲಿನ ಚಿತ್ರಗಳು ನಿಸ್ಸಂದೇಹವಾಗಿ ಕಾಲವನ್ನು ಗೆಲ್ಲುವ ಮನುಷ್ಯಪ್ರಯತ್ನಗಳು. ಆ ಕಾಲದ ಸಂಸ್ಕೃತಿಯ ಸ್ವರೂಪ ನಮಗೆ ಇಂದು ಗೊತ್ತಾಗುವುದು ಈ ಚಿತ್ರಗಳ ಮೂಲಕವೇ! ನನಗೆ ಅತ್ಯಂತ ಕುತೂಹಲ ಮೂಡಿಸಿದ್ದು ಅಲೆಗ್ಸಾಂಡ್ರಿಯಾದಲ್ಲಿನ ರಹಸ್ಯ ಗ್ರಂಥಾಲಯ. ನೆಲಮಾಳಿಗೆಯ ಗೋಡೆಗಳಲ್ಲಿ ಗೂಡಿನ ರೂಪದಲ್ಲಿದ್ದ ಶೆಲ್ಪುಗಳಲ್ಲಿ ಅಮೂಲ್ಯ ಗ್ರಂಥಗಳನ್ನು ರಕ್ಷಿಸುತ್ತಿದ್ದರೆಂಬ ಸಂಗತಿಯೇ ಜ್ಞಾನವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಅವರ ಕಾಳಜಿಯನ್ನು ಮನವರಿಕೆ ಮಾಡಿಸುತ್ತಿತ್ತು. ಪ್ರಾಚೀನ ಈಜಿಪ್ಟ್ ನಿಸ್ಸಂದೇಹವಾಗಿ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು. ಆ ಕಾಲದ ಅದ್ಭುತ ರಂಗಭೂಮಿಯ ಅವಶೇಷವನ್ನೂ ನಾವು ನೋಡಿದೆವು. ಸಂಸ್ಕೃತಿಯೇ ತಮ್ಮ ನಿಜವಾದ ಸಂಪತ್ತು ಎಂಬ ಭಾವ ಪ್ರಾಚೀನ ಈಜಿಪ್ಟ್ ಮನಸ್ಸುಗಳಿಗಿದ್ದಂತೆ ನನಗೆ ತೋರಿತು. ಈಗ ಪ್ರಾಚೀನ ಸಂಸ್ಕೃತಿಯ ಈ ಅವಶೇಷಗಳೇ ಆಧುನಿಕ ಈಜಿಪ್ಟಿನ ಸಂಪನ್ಮೂಲದ ಪ್ರಮುಖ ಸಾಧನವಾಗಿವೆ. ಇಲ್ಲಿಯ ನಿರ್ಮಾಣಗಳನ್ನು ನೋಡುತ್ತಿದ್ದರೆ ಅಡಗುದಾಣಗಳ ರೀತಿಯೂ ಭಾಸವಾಗುತ್ತದೆ. ಒಳಮಾರ್ಗಗಳು ಸಾಕಷ್ಟಿವೆ. ಧರ್ಮ ಮತ್ತು ರಾಜಕೀಯ ಕೈಜೋಡಿಸಿರುವಂತೆಯೂ ಇವುಗಳ ಸ್ವರೂಪವಿದೆ. ಈಜಿಪ್ಟ್​ನ ಅವಶೇಷಗಳಲ್ಲಿ ಎಲ್ಲಿಯೂ ರಾಜರು ವಾಸಿಸಿದ ಅರಮನೆಗಳಾಗಲೀ, ಬದುಕಿದ್ದಾಗಿನ ಕುರುಹುಗಳಾಗಲೀ ಕಾಣಿಸಲಿಲ್ಲ. ಸತ್ತಮೇಲಿನ ಸ್ಮಾರಕಗಳೇ ಎಲ್ಲ ಕಡೆ! ಆ ಸ್ಮಾರಕಗಳಲ್ಲಿ ಬದುಕಿನ ಚಿತ್ರಗಳು! ಸಾವಿನ ಹಿನ್ನೆಲೆಯಲ್ಲಿ ಬದುಕು.

ನೈಲ್ ನದಿ ಈಜಿಪ್ಟಿನ ಜೀವನಾಡಿ. ಜಗತ್ತಿನ ಅತ್ಯಂತ ಉದ್ದವಾದ ಈ ನದಿ ಸುಮಾರು 6,885 ಕಿ.ಮೀ. ಹರಿಯುತ್ತದೆ. ಕೆಲವು ಕಡೆ ಇದರ ಅಗಲ ಎರಡೂವರೆ ಕಿ.ಮೀ.ನಷ್ಟಿದ್ದು, ನದಿ ಸಮುದ್ರದಂತೆ ಕಾಣುತ್ತದೆ. ಆಳ 25-30 ಅಡಿಯಿದೆ. ಈಜಿಪ್ಟಿನ ಬಹುಪಾಲು ಜನರು ಇದರ ದಡಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಮರುಭೂಮಿಯ ನಾಡು ಈಜಿಪ್ಟಿಗೆ ನೈಲ್ ಜೀವಜಲವಾಗಿದ್ದು ಕೃಷಿ ಇಲ್ಲಿ ಪ್ರಧಾನವಾಗಿದೆ. ಬತ್ತ, ಬಾಳೆ, ಕಬ್ಬು, ಕಡಲೆ, ತೆಂಗು ನದಿಯ ಇಕ್ಕೆಲಗಳಲ್ಲೂ ಕಂಗೊಳಿಸುತ್ತಿದ್ದವು.

ಈಜಿಪ್ಟ್​ನ ಸಂಪನ್ಮೂಲಗಳಲ್ಲಿ ಪ್ರವಾಸೋದ್ಯಮಕ್ಕೆ ಪ್ರಮುಖ ಸ್ಥಾನವಿದೆ. ಪಿರಮಿಡ್ ಹಾಗೂ ನೈಲ್ ಎರಡೂ ಈ ಉದ್ಯಮದ ಪ್ರಧಾನ ಆಕರ್ಷಣೆಗಳು. ಪ್ರಾಚೀನ ಸಂಸ್ಕೃತಿಯನ್ನು ವೈಭವೀಕರಿಸುವ ಮೂಲಕ ಈಜಿಪ್ಟ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಗೀಜಾ ಪಿರಮಿಡ್​ಗಳು, ಸ್ಪಿಂಕ್ಸ್, ಕೈರೋ ಮ್ಯೂಸಿಯಂ, ಅಬುಸಿಂಬೇಲ್, ಕಾರ್ನಕ್, ಲಕ್ಸರ್ ದೇವಸ್ಥಾನಗಳು, ವ್ಯಾಲಿ ಆಫ್ ಕಿಂಗ್ಸ್, ನ್ಯೂಬಿಯನ್ ವಿಲೇಜ್ ಇವೆಲ್ಲವನ್ನೂ ಅವರು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಿದ್ದಾರೆ.

ಕ್ರೂಸ್ ಪ್ರಯಾಣ ನೈಲ್ ನದಿಯ ಪ್ರಮುಖ ಆಕರ್ಷಣೆ. ಹಲವಾರು ಕ್ರೂಸ್​ಗಳು ಪ್ರಮುಖ ಪಟ್ಟಣಗಳ ನದೀ ತೀರಗಳಲ್ಲಿ ಸಾಲುಗಟ್ಟಿ ನಿಂತಿರುತ್ತವೆ. ನಾವು ಕೈರೋದಿಂದ ಅಬುಸಲೇಮ್ೆ ವಿಮಾನದಲ್ಲಿ ಪ್ರಯಾಣಿಸಿದೆವು. ಅಲ್ಲಿ ವಿಮಾನ ಕೆಲಸಮಯ ನಿಂತಿದ್ದಾಗ ನಾವು ಹತ್ತಿರದಲ್ಲಿಯೇ ಇದ್ದ ಎರಡು ಬೃಹತ್ ದೇವಾಲಯಗಳನ್ನು ಬಸ್ಸಿನಲ್ಲಿ ಹೋಗಿ ನೋಡಿದೆವು. ಇವೆರಡೂ ನೈಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದವು. ಅಲ್ಲಿಂದ ಸ್ಥಳಾಂತರ ಮಾಡಿ ಮರುರೂಪಿಸಿದ್ದಾರೆ. ಅಲ್ಲಿಯ ಬೃಹತ್ ದೇವಾಲಯಗಳೆಲ್ಲವೂ ಬಹುಮಟ್ಟಿಗೆ ನಮ್ಮ ಕೋಟೆಗಳಂತಿವೆ. ರಕ್ಷಕರಂತಿರುವ ಬೃಹತ್ ಪ್ರತಿಮೆಗಳುಳ್ಳ ಎತ್ತರದ ಗೋಡೆಗಳ ನಡುವೆ 50-60 ಅಡಿಗಳೆತ್ತರದ ಪ್ರವೇಶದ್ವಾರದ ಮೂಲಕ ಒಳಗೆ ಪ್ರವೇಶಿಸಬೇಕು. ಒಳಗೆ 3-4 ಸಾವಿರ ವರ್ಷಗಳಾದರೂ ಮಾಸಿರದ ಬಣ್ಣದ ಚಿತ್ರಗಳುಳ್ಳ ವೈಭವದ ಕಟ್ಟಡಗಳ ಪಳೆಯುಳಿಕೆಗಳು. ಅಲ್ಲಿಂದ ಮತ್ತೆ ವಿಮಾನದಲ್ಲಿ ಆಸ್ವಾನ್ ನಗರಕ್ಕೆ ನಮ್ಮ ಪ್ರಯಾಣ ಮುಂದುವರಿಯಿತು.

ಆಸ್ವಾನ್​ನಿಂದ ಲಕ್ಸರ್​ಗೆ ನಾವು ನೈಲ್ ನದಿಯ ಮೇಲೆ ಕ್ರೂಸ್​ನಲ್ಲಿ ಪಯಣಿಸಿದೆವು. ಆ ಕ್ರೂಸ್​ನ ಕೊಠಡಿಗಳು ಐಷಾರಾಮಿ ಹೋಟೆಲಿನ ಕೊಠಡಿಯಂತೆಯೇ ಇದ್ದು ಬಾಲ್ಕನಿಯೂ ಇತ್ತು. ಈ ಪ್ರಯಾಣದಲ್ಲಿ ನಮ್ಮನ್ನು ದೋಣಿಯ ಮೂಲಕ ‘ನ್ಯೂಬಿಯನ್ ವಿಲೇಜ್’ಗೆ ಕರೆದುಕೊಂಡು ಹೋಗಿದ್ದರು. ಅದು ಆದಿವಾಸಿಗಳ ಆವಾಸ. ಆದರೆ ಅದು ಈಗ ಸಂಪೂರ್ಣ ವಾಣಿಜ್ಯೀಕರಣಗೊಂಡು ಪ್ರದರ್ಶನಾಲಯದಂತಿತ್ತು. ಅವರು ಆದಿವಾಸಿಗಳ ವೇಷಧಾರಿಗಳಂತೆ ಕಾಣಿಸುತ್ತಿದ್ದರು. ಹಾಗೆಯೇ ದೋಣಿಯಲ್ಲಿಯೇ ದೇವಾಲಯವೊಂದಕ್ಕೂ ಕರೆದೊಯ್ದರು. ಲಕ್ಸರ್​ನಲ್ಲಿ ‘ಹಾಟ್ ಬಲೂನ್ ಶೋ’ ವ್ಯವಸ್ಥೆಯಿದೆ. ಬಿಸಿಗಾಳಿ ತುಂಬಿದ ಬಲೂನಿನಲ್ಲಿ ಆಕಾಶದೆತ್ತರದಲ್ಲಿ ಹಾರುವ ಆ ಅನುಭವ ವಿಶಿಷ್ಟವಾದುದು. ಇವೆಲ್ಲಕ್ಕೂ ನಿಗದಿತ ದರಗಳಿವೆ. ಅಷ್ಟು ದೂರ ಹೋದ ಮೇಲೆ ನೋಡದಿದ್ದರೆ ಹೇಗೆ ಎಂದು ಇವೆಲ್ಲವನ್ನೂ ನಾವು ಹಣತೆತ್ತು ನೋಡುತ್ತೇವೆ. ಪ್ರತಿಕಡೆಯೂ ಪ್ರವೇಶ ಶುಲ್ಕವಿದೆ. ಇಲ್ಲಿ ಎಲ್ಲವೂ ವ್ಯಾಪಾರ. ಪ್ರವಾಸಿಗರೇ ಇಲ್ಲಿ ಗ್ರಾಹಕರು. ನಾವು ಕ್ರೂಸ್​ನಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲಿ ದೋಣಿಯಲ್ಲಿ ಬಂದು ನಾಲ್ಕಂತಸ್ತಿನ ಕೊಠಡಿಯ ಬಾಲ್ಕನಿಯಲ್ಲಿ ನಿಂತಿರುವ ನಮ್ಮೊಂದಿಗೆ ನದಿಯಲ್ಲಿ ದೋಣಿ ನಡೆಸುತ್ತ ಅವರು ವ್ಯಾಪಾರ ಮಾಡುತ್ತಿದ್ದರು. ಅವರ ಸಾಹಸ ಕೌಶಲಕ್ಕೆ ಮೆಚ್ಚುಗೆಯಾದರೂ ಅವರ ಆ ಸ್ಥಿತಿ ಮನಸ್ಸನ್ನು ಮುದುಡಿಸುತ್ತಿತ್ತು. ಅಂತಹ ವ್ಯಾಪಾರವನ್ನು ಸರ್ಕಾರ ಅಪಾಯವೆಂದು ನಿಷೇಧಿಸಿದೆ. ಪೊಲೀಸರು ಮೋಟಾರ್​ಬೋಟಿನಲ್ಲಿ ಕಾವಲು ಕಾಯುತ್ತಿರುತ್ತಾರೆ. ಆದರೆ ನಾವು ನೋಡುತ್ತಿದ್ದಂತೆಯೇ ಪೊಲೀಸ್ ಬೋಟ್ ಬಂದು ಆ ವ್ಯಾಪಾರಿಗಳಿಂದ ಹಣ ಪಡೆದು ವ್ಯಾಪಾರ ಮುಂದುವರಿಸಲು ಅವಕಾಶ ಮಾಡಿಕೊಟ್ಟು ಹೋದರು. ಗೈಡ್ ಕರೆದುಕೊಂಡು ಹೋಗುವ ಅಂಗಡಿಗಳಲ್ಲಿ ಹೋದ ತಕ್ಷಣ ನಮಗೆ ಕಾಫಿ, ಜ್ಯೂಸ್ ಕೊಟ್ಟು ಉಪಚರಿಸಿ, ನಮ್ಮ ಮನಸ್ಸು ಹದಗೊಳಿಸಿ ನಂತರ ವ್ಯಾಪಾರ ಆರಂಭಿಸುತ್ತಿದ್ದರು. ಈಜಿಪ್ಟಿಗೆ ಹೋಗಿ ಬಂದಿದ್ದೇವೆಂದು ಹೆಮ್ಮೆಪಡಲು ಅಲ್ಲಿಯ ವಸ್ತುಗಳು ಬೇಕಲ್ಲ! ಹೀಗಾಗಿ ವ್ಯಾಪಾರವಾಗುತ್ತಿತ್ತು. ಚೌಕಾಸಿ ಎಲ್ಲ ಕಡೆಯೂ ಸಾಮಾನ್ಯವಾಗಿತ್ತು. ಗೈಡ್ ಸಹ ಕಡೆಕಡೆಗೆ ನಮಗೆ ಕಮಿಷನ್ ಏಜೆಂಟ್​ನಂತೆ ಕಾಣಿಸತೊಡಗಿದ. ಹಾಟ್ ಬಲೂನಿನಲ್ಲಿ ಹಾರಾಟ ಮುಗಿಸಿದಾಗ ಅದು ನಿರ್ದಿಷ್ಟ ಜಾಗದ ಬದಲು ಪಕ್ಕದ ಹೊಲದ ಬದಿಯಲ್ಲಿ ಇಳಿಯಿತು. ಆಗ ಕೆಲವರು ಕುರುಚಲು ಬೆಳೆದು ನಿರ್ಜನವಾಗಿದ್ದ ಆ ಪ್ರದೇಶದಲ್ಲಿ ಮೂತ್ರವಿಸರ್ಜನೆ ಮಾಡಿದರು. ಎಲ್ಲಿಂದಲೋ ಪ್ರತ್ಯಕ್ಷವಾದ ಒಬ್ಬ ದಢೂತಿ ಆಸಾಮಿ ಆ ಜಾಗ ತನ್ನದೆಂದು ಬಲವಂತವಾಗಿ ಅವರೆಲ್ಲರಿಂದ ತಲಾ ಐದು ಈಜಿಪ್ಟಿಯನ್ ಪೌಂಡ್ ವಸೂಲು ಮಾಡಿದ. ಬಡತನದ ದೃಶ್ಯಗಳಿಗೆ ಅಲ್ಲಿ ಬರವಿರಲಿಲ್ಲ. ಈಜಿಪ್ಟ್​ಗೆ ಪ್ರಾಚೀನ ಸಂಸ್ಕೃತಿಯ ವೈಭವವೇ ಸಂಪತ್ತು. ‘ಇತ್ತು’ಗಳ ಧ್ವಜವ ಹಾರಾಡಿಸುವ ಅಲ್ಲಿ ದಿನನಿತ್ಯದ ಸವಾಲು ಎದುರಿಸುವ ಆತಂಕದ ಪರಿಸ್ಥಿತಿ ‘ಇದೆ’.

(ಲೇಖಕರು ಖ್ಯಾತ ವಿಮರ್ಶಕರು)

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...