More

  ಸಂಪಖಂಡ ಶಾಲೆ ಸುವರ್ಣ ಮಹೋತ್ಸವ 18ಕ್ಕೆ

  ಶಿರಸಿ: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಜಾಗೃತಿಗೆ ಕಾರಣವಾದ ತಾಲೂಕಿನ ಸಂಪಖಂಡದ ಗಜಾನನ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಜ. 18 ಮತ್ತು 19ರಂದು ಜರುಗಲಿದೆ ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಬ್ರಾಯ ಹೆಗಡೆ ಜಾನ್ಮನೆ ಹೇಳಿದರು.

  ಶಾಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1967ರಲ್ಲಿ ಆರಂಭಗೊಂಡ ಸಂಪಖಂಡ ಪ್ರೌಢಶಾಲೆ ಇಂದು ಜಿಲ್ಲೆಯ ಅಗ್ರಗಣ್ಯ ಶಾಲೆಗಳಲ್ಲಿ ಒಂದಾಗಿದೆ. 1996ರಲ್ಲಿ ರಜತ ಮಹೋತ್ಸವ ಆಚರಿಸಿಕೊಂಡಿದೆ. ಶಾಲೆಯಲ್ಲಿ ಈವರೆಗೆ 2,341 ವಿದ್ಯಾರ್ಥಿಗಳು ಕಲಿತಿದ್ದು, ಹಲವಾರು ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. ಇಂಥ ವಿದ್ಯಾ ಸಂಸ್ಥೆಯ 50ನೇ ವರ್ಷವನ್ನು ಸಂಭ್ರಮದಿಂದ ಆಚರಿಸಲು ತೀರ್ವನಿಸಲಾಗಿದೆ ಎಂದರು.

  ಇದು ಅನುದಾನಿತ ಶಾಲೆಯಾಗಿದ್ದು, ಹೆಚ್ಚಿನ ಸಿಬ್ಬಂದಿಗೆ ಸರ್ಕಾರದ ಅನುದಾನ ಸಿಗುತ್ತಿಲ್ಲ. ಹಾಗಾಗಿ ಸ್ಥಿರ ನಿಧಿ ಸ್ಥಾಪಿಸಬೇಕು. ಕಟ್ಟಡ ನವೀಕರಣ, ಆವರಣ ಗೋಡೆ ನಿರ್ವಣ, ವಿದ್ಯಾರ್ಥಿನಿ ನಿಲಯ ನಿರ್ವಣ, ವಾಚನಾಲಯ, ಶೈಕ್ಷಣಿಕ ವ್ಯವಸ್ಥೆಗೆ ಅನುಗುಣವಾಗಿ ಇಂಗ್ಲಿಷ್ ಮಾಧ್ಯಮ ಕುರಿತು ವಿಶೇಷ ಆಸಕ್ತಿಯಿಂದ ಕಾರ್ಯಯೋಜನೆ ನಿರ್ವಿುಸಲು ಅಂದಾಜು 5 ಕೋ.ರೂ.ಗೂ ಅಧಿಕ ವೆಚ್ಚ ತಗುಲಲಿದೆ. ಆದ್ಯತೆಯ ಮೇರೆಗೆ ಈ ಎಲ್ಲ ಕಾರ್ಯಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

  ಜ.18ರಂದು ಬೆಳಗ್ಗೆ 10.30ಕ್ಕೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಸ್. ಹೆಗಡೆ ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ದಿವಾಕರ ಶೆಟ್ಟಿ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸದಸ್ಯ ರಾಮಾ ಭಟ್ಟ ಬಾಳೆಗದ್ದೆ, ಮುಖ್ಯಶಿಕ್ಷಕ ಆರ್.ಜಿ. ಪಂಡಿತ ಪಾಲ್ಗೊಳ್ಳುವರು. 19ರಂದು ಪೂರ್ವ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 4.30ಕ್ಕೆ ಸಮಾರೋಪ ನಡೆಯಲಿದೆ ಎಂದರು.

  ನಿವೃತ್ತ ಶಿಕ್ಷಕ ಜಿ.ಎನ್. ಹೆಗಡೆ ಹಾವಳಿಮನೆ, ಜಿ.ವಿ. ಹೆಗಡೆ, ಮಧುಕೇಶ್ವರ ಭಟ್ಟ ಅಜ್ಜಿಬಳ, ವಸಂತ ಹೆಗಡೆ ಸಿರಿಕುಳಿ, ಎಸ್.ಜಿ. ಹೆಗಡೆ, ರವಿ ಹೆಗಡೆ ಕೌಲಕುಳಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts