ಸೌಂದರ್ಯ ಕಾಳಜಿಯೇ ಸಮಂತಾಗೆ ಮುಳುವಾಯ್ತಾ? ಮಯೋಸಿಟಿಸ್​ ಕಾಯಿಲೆಗೆ ಕಾರಣ ಬಹಿರಂಗ

ಹೈದರಾಬಾದ್​: ಕಳೆದ ಎರಡು ತಿಂಗಳಿನಿಂದ ಸಮಂತಾ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ, ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದಾರೆ ಎಂದು ಸುದ್ದಿಯಾಗಿತ್ತು. ಅಲ್ಲದೆ, ಈ ಸುದ್ದಿ ಸುಳ್ಳು ಎಂದು ಹೇಳಲಾಗಿತ್ತು. ಆದರೆ, ಸಮಂತಾ ಮಾತ್ರ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಇದೀಗ ಸಮಂತಾ ಅವರೇ ತಮಗಿರುವ ಆರೋಗ್ಯದ ಸಮಸ್ಯೆ ಬಗ್ಗೆ ಬಹಿರಂಗಪಡಿಸಿದ್ದಾರೆ. ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಈ ಕಾಯಿಲೆಯಿಂದ ಮಾಂಸಖಂಡಗಳು ವೀಕ್​ ಆಗುತ್ತವಂತೆ. … Continue reading ಸೌಂದರ್ಯ ಕಾಳಜಿಯೇ ಸಮಂತಾಗೆ ಮುಳುವಾಯ್ತಾ? ಮಯೋಸಿಟಿಸ್​ ಕಾಯಿಲೆಗೆ ಕಾರಣ ಬಹಿರಂಗ