ಮತ್ತೆ ಬಣ್ಣ ಹಚ್ಚಿದ ಸಮಂತಾ … ಯಾವ ಚಿತ್ರ?

blank
blank

ಲಾಕ್‍ಡೌನ್ ಸಮಯದಿಂದ ಅದ್ಯಾರಿಗೆ, ಎಷ್ಟು ಸಹಾಯವಾಯಿತೋ ಗೊತ್ತಿಲ್ಲ. ಆದರೆ, ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿಗೆ ಮಾತ್ರ ಸಿಕ್ಕಾಪಟ್ಟೆ ಸಹಾಯವಾಯಿತು ಎಂದು ಹೇಳಲಾಗುತ್ತಿದೆ. ಮೊದಲ ಎರಡು ತಿಂಗಳುಗಳ ಕಾಲ ಅಕ್ಷರಶಃ ನಾಪತ್ತೆಯಾಗಿದ್ದ ಸಮಂತಾ, ಆ ನಂತರ ಸೋಷಿಯಲ್ ಮೀಡಿಯಾದ ಹೆಚ್ಚು ಸಕ್ರಿಯರಾದರು. ಯೋಗ, ಕೃಷಿ ಅಂತ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇದ್ದರು.

ಇದನ್ನೂ ಓದಿ: PHOTOS: ರಿಷಬ್ ಶೆಟ್ಟಿ ಪುತ್ರನ ಕೃಷ್ಣನ ಅವತಾರ ಹೇಗಿದೆ ನೋಡಿ…

ಹೀಗೆ ಕಳೆದ ಐದು ತಿಂಗಳುಗಳಿಂದ ಮನೆಯಲ್ಲೇ ಇದ್ದ ಸಮಂತಾ, ಈಗ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಸಮಂತಾ ಬಣ್ಣ ಹಚ್ಚಿದರು, ಕ್ಯಾಮೆರಾ ಮುಂದೆ ನಿಂತರು ಎಂದರೆ ಯಾವ ಚಿತ್ರ, ಏನು ಕಥೆ, ಯಾರು ಹೀರೋ ಎಂಬ ಹಲವು ಪ್ರಶ್ನೆಗಳು ಬರುವುದು ಸಹಜ. ಸಮಂತಾ ಮುಂದೆ ಹಲವು ಅವಕಾಶಗಳಿದ್ದರೂ, ಅವರು ದಸರಾ ಹಬ್ಬ ಕಳೆಯುವವರೆಗೂ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಬಾರದು ಎಂದು ತೀರ್ಮಾನಿಸಿದ್ದಾರಂತೆ. ಕರೊನಾ ಹಾವಳಿ ಕೊಂಚ ತಗ್ಗಿದ ನಂತರ ಮತ್ತೆ ಚಿತ್ರದಲ್ಲಿ ನಟಿಸಬೇಕು ಎಂದು ನಿರ್ಧರಿಸಿದ್ದಾರಂತೆ.

ಹಾಗಾದರೆ, ಅವರು ಕ್ಯಾಮೆರಾ ಮುಂದೆ ನಿಂತು ಯಾತಕ್ಕಾಗಿ ಎಂಬ ಪ್ರಶ್ನೆ ಇನ್ನಷ್ಟು ಹೆಚ್ಚಾಗಬಹುದು. ಸಮಂತಾ ಹೊಸ ಆ್ಯಡ್‍ವೊಂದರರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಂಟ್ರಾ ಫ್ಯಾಶನ್‍ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಮಂತಾ ಒಪ್ಪಿಕೊಂಡಿದ್ದು, ಈಗ ಅದರ ಚಿತ್ರೀಕರಣ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಜಾಹೀರಾತು ಟಿವಿಯಲ್ಲಿ ಬರಲಿದೆ.

ಇದಕ್ಕೂ ಮುನ್ನ ಸಮಂತಾ ಅವರ ಮಾವ ನಾಗಾರ್ಜುನ, `ಬಿಗ್ ಬಾಸ್’ನ ಪ್ರೋಮೋದ ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. ಈಗ ಸಮಂತಾ ಸಹ ಕ್ಯಾಮೆರಾ ಎದುರಿಸುತ್ತಿದ್ದಾರೆ. ಹಾಗೆ ನೋಡಿದರೆ, ಸಮಂತಾ ಕ್ಯಾಮೆರಾ ಎದುರಿಸಿ ಆರು ತಿಂಗಳ ಮೇಲಾಗಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ಅವರು `ದಿ ಫ್ಯಾಮಿಲಿ ಮ್ಯಾನ್’ನ ಎರಡನೆಯ ಸೀಸನ್‍ನಲ್ಲಿ ನಟಿಸಿದ್ದರು. ಆ ನಂತರ ಲಾಕ್‍ಡೌನ್ ಘೋಷಣೆಯಾಗಿ, ಅವರ ಪ್ಲಾನ್‍ಗಳೆಲ್ಲಾ ತಲೆಕೆಳಗಾದವು.

ಇದನ್ನೂ ಓದಿ: ನಟ ವಿಜಯ್​ ರಾಘವೇಂದ್ರರ ಕಾರಿಗೆ ಪೆಟ್ರೋಲ್​ ಬದಲು ಡೀಸೆಲ್​ ಹಾಕಿದ ಬಂಕ್ ಸಿಬ್ಬಂದಿ​: ಕಾರಣ ಹೀಗಿದೆ…

ಈಗ `ಗೇಮ್ ಓವರ್’ ಮತ್ತು ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರಗಳನ್ನು ಸಮಂತಾ ಒಪ್ಪಿಕೊಂಡಿದ್ದು, ದಸರಾ ಹಬ್ಬದ ನಂತರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಅಮೀರ್ ಖಾನ್ ಟರ್ಕಿಗೆ ಹೋಗಿದ್ದು ಯಾಕೆ?

Share This Article

ಮೀನಿನ ಕಣ್ಣು ಆರೋಗ್ಯಕ್ಕೆ ಉತ್ತಮ! ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Fish Eye

Fish Eye: ಮೀನಿನ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅದಕ್ಕಿಂತ ಹೆಚ್ಚಿನ ಆರೋಗ್ಯಕಾರಿ ಅಂಶಗಳು ಮೀನಿನ…

ಪಾರ್ಲಿಮೆಂಟ್​ ಮೆನುವಿನಲ್ಲಿ ರಾಗಿ ಇಡ್ಲಿ ದರ್ಬಾರ್​! ಮಾಡೊದೇಗೆ? ಇಲ್ಲಿದೆ ಸಿಂಪಲ್ಸ್​ ಟಿಪ್ಸ್​​.. | Ragi Idli

Ragi Idli : ಇತ್ತೀಚಿನ ವೇಗದ ಆಧುನಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದೆ ಕಷ್ಟವಾಗಿದೆ. ಆದರಲ್ಲೂ ಪಟ್ಟಣ…