ಸಾಲುಮರದ ತಿಮ್ಮಕ್ಕ ಉದ್ಯಾನ ಮಾರ್ಚ್‌ನಲ್ಲಿ ಲೋಕಾರ್ಪಣೆ

ಶ್ರವಣ್‌ಕುಮಾರ್ ನಾಳ
ಪುತ್ತೂರು ನಗರದಲ್ಲಿರುವ ಎತ್ತರ ಪ್ರದೇಶ ಬಿರುಮಲೆ ಗುಡ್ಡದಲ್ಲಿ ನಿರ್ಮಾಣ ಹಂತದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಮಾರ್ಚ್ ತಿಂಗಳ ಮೊದಲ ವಾರ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಉದ್ಘಾಟನೆಗೆ ಪೂರ್ವಭಾವಿ ಎರಡನೇ ಹಂತದ ಕಾಮಗಾರಿಗೆ ಸರ್ಕಾರ ಅನುದಾನವನ್ನೂ ಬಿಡುಗಡೆಗೊಳಿಸಿದೆ.

ಪುತ್ತೂರಿಗೆ ಹಸಿರು ವನ ಅಗತ್ಯವಿರುವುದನ್ನು ಗಮನಿಸಿ ಎತ್ತರದ ಪ್ರದೇಶದಲ್ಲಿ ಸಸ್ಯೋದ್ಯಾನ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿತ್ತು. ಇದಕ್ಕೆ ಬಿರುಮಲೆ ಗುಡ್ಡವೇ ಸೂಕ್ತ ಎಂದು ನಿಶ್ಚಯಿಸಿ ಗುಡ್ಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಭಿವೃದ್ಧಿ ಸಮಿತಿಯೂ, ಅರಣ್ಯ ಇಲಾಖೆಯೂ ಯೋಜನೆಗೆ ಸಮ್ಮತಿಸಿತು. ಒಂದನೇ ಹಂತದ ಅನುದಾನವಾಗಿ 40 ಲಕ್ಷ ರೂ. ಬಿಡುಗಡೆಗೊಂಡಿದ್ದು, ಕಾಮಗಾರಿ ಪೂರ್ಣಗೊಂಡಿದೆ.

ಎರಡನೇ ಹಂತದ 20 ಲಕ್ಷ ರೂ. ಬಿಡುಗಡೆ: ಈಗಾಗಲೇ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಸರ್ಕಾರದ ಹಂತದಲ್ಲಿ ಅನುದಾನ ಬಿಡುಗಡೆಗೆ ಅಡ್ಡಿಯಾಗಿದ್ದರಿಮದ ಕೆಲಸ ವಿಳಂಬವಾಯಿತು. ಪ್ರಸ್ತುತ ಎರಡನೇ ಹಂತದ ಅನುದಾನ 20 ಲಕ್ಷ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ 3ನೇ ಹಂತದ ಅನುದಾನ ಬಿಡುಗಡೆ ಆಗಲಿದೆ. ಅದಕ್ಕೆ ಮೊದಲೇ ಉದ್ಯಾನ ಉದ್ಘಾಟನೆಯಾಗಲಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ೆಬ್ರವರಿ ಕೊನೇ ವಾರ ಅಥವಾ ಮಾರ್ಚ್ ಪ್ರಾರಂಭದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಪೂರ್ಣಗೊಂಡ ಕಾಮಗಾರಿ: ಪ್ರಥಮ ಹಂತದಲ್ಲಿ ವಾಕಿಂಗ್ ಪಾಥ್‌ವೇ, ಕಟ್ಟಡ ಮರುನಿರ್ಮಾಣ, ಆರ್ಕ್ ವಿಸ್ತರಣೆ, ಬೋರ್‌ವೆಲ್ ಮೊದಲಾದ ಕೆಲಸ ಪೂರ್ತಿಯಾಗಿದೆ. ಎರಡನೇ ಹಂತದಲ್ಲಿ ಆವರಣ ಗೋಡೆ, ಆರ್ಕ್, ಬೋರ್ಡ್‌ಗಳು ಮತ್ತು ಮಾಹಿತಿ ಕೇಂದ್ರ, ನೀರಿನ ಟ್ಯಾಂಕ್, ೌಂಟೇನ್ ರಿಪೇರಿ, ಟಿಕೆಟ್ ಕೌಂಟರ್, ಶೌಚಗೃಹ ನಿರ್ವಹಣೆ, ಮಕ್ಕಳ ಪಾರ್ಕ್‌ಗೆ ಸಾಮಗ್ರಿ ಖರೀದಿ, ಕಾವಲುಗಾರರ ನೇಮಕ ಹಾಗೂ 800 ಗಿಡಗಳ ನೆಡುವ ಕಾರ್ಯ ನಡೆಯಲಿದೆ.

ಉದ್ಘಾಟನೆ ನಡೆಯುತ್ತಿದ್ದಂತೆ ಸಾರ್ವಜನಿಕರ ಪ್ರವೇಶಕ್ಕೆ ಸಸ್ಯೋದ್ಯಾನ ಮುಕ್ತವಾಗಲಿದೆ. ಟಿಕೆಟ್ ನಿಗದಿ ಮಾಡಬೇಕೋ ಬೇಡವೋ ಎಂಬ ತೀರ್ಮಾನ ಆಗಿಲ್ಲ. ಕೆಲಸ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ, ಮಕ್ಕಳ ಪ್ರವೇಶಕ್ಕೆ ಸಸ್ಯೋದ್ಯಾನ ಮುಕ್ತವಾಗಿರಲಿದೆ. ಸಾರ್ವಜನಿಕರು ಬಿಡುವಿನ ವೇಳೆಯಲ್ಲಿ ಸಸ್ಯೋದ್ಯಾನಕ್ಕೆ ಆಗಮಿಸಿ ಶುದ್ಧ ಗಾಳಿ ಸೇವಿಸಿಬಹುದು, ವಾಕಿಂಗ್ ಮಾಡಬಹುದು. ಮನಶ್ಯಾಂತಿ ಪಡೆಯಬಹುದು. ಮಕ್ಕಳು ಮನಸೋ ಇಚ್ಛೆ ಆಟ ಆಡಬಹುದು.
ಎನ್.ಸುಬ್ರಹ್ಮಣ್ಯ ರಾವ್ ಎಸಿಎ್, ಅರಣ್ಯ ಇಲಾಖೆ