ಡೈಮಂಡ್ ವಾಚ್ ಧರಿಸಿದ ಸಲ್ಮಾನ್!: 714 ವಜ್ರಗಳಿರುವ 167 ಕೋಟಿ ರೂ. ಮೌಲ್ಯದ ಕೈ ಗಡಿಯಾರ


ಬಾಲಿವುಡ್ ನಟ-ನಟಿಯರಿಗೆ ಕಾರು, ಬೈಕ್ ಹಾಗೂ ಐಶಾರಾಮಿ ವಸ್ತುಗಳ ಮೇಲಿನ ಕ್ರೇಜ್ ಹೊಸದೇನೆಲ್ಲ. ಹೊಸ ಹೊಸ ವಸ್ತುಗಳನ್ನು ಖರೀದಿಸಿ ಅಥವಾ ಧರಿಸಿ ಬಿಟೌನ್ ಮಂದಿ ಆಗಾಗ ಸುದ್ದಿಯಾಗುತ್ತಾರೆ. ಇದೀಗ, ಬಾಲಿವುಡ್ ನಟ ಸಲ್ಮಾನ್ ಖಾನ್ ಬಹುಮೌಲ್ಯದ ಡೈಮಂಡ್ ವಾಚ್ ಧರಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಸಲ್ಮಾನ್ ಅಮೆರಿಕ ಮೂಲದ ಪ್ರತಿಷ್ಠಿತ ಜೇಕಬ್ ಅರೋಬ ಕಂಪನಿಯ ‘ಬಿಲಿಯನೇರ್ 3’ ಡೈಮಂಡ್ ವಾಚ್ ಧರಿಸಿ ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ. ಕಂಪನಿಯ ಮಾಲೀಕ ಜೇಕಬ್ ಅರೋಬಾ ಸ್ವತಃ ಸಲ್ಮಾನ್‌ಗೆ ವಾಚ್ ಕಟ್ಟುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ‘ಇದುವರೆಗೂ ಬಿಲಿಯನೇರ್ ವಾಚ್ ಅನ್ನು ನಾನು ಯಾರಿಗೂ ಕಟ್ಟಲು ಪ್ರಯತ್ನಿಸಲಿಲ್ಲ. ಆದರೆ, ಸಲ್ಮಾನ್‌ಗೆ ಈ ವಿನಾಯಿತಿ ನೀಡಿದ್ದೇನೆ’ ಎಂದು ಜೇಕಬ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಡೈಮಂಡ್ ವಾಚ್ ಸರಣಿಯ ಬೆಲೆ ಅಂದಾಜು 48 ಕೋಟಿ ರೂ.ನಿಂದ 167 ಕೋಟಿ ರೂಪಾಯಿ ಇರಬಹುದು ಎನ್ನಲಾಗಿದೆ. ಈ ವಾಚ್‌ನಲ್ಲಿ 152 ಎಮರಾಲ್ಡ್ ಕಟ್ ವಜ್ರಗಳು, 57 ಬ್ಯಾಗೇ ಕಟ್ ಹಾಗೂ ಬ್ರೇಸ್‌ಲೈಟ್‌ಗೆ 504 ಬಿಳಿ ಎಮರಾಲ್ಡ್ ಕಟ್ ಡೈಮಂಡ್‌ಗಳು ಸೇರಿ ಒಟ್ಟು 714 ಡೈಮಂಡ್‌ಗಳಿವೆ ಎನ್ನಲಾಗಿದೆ. -ಏಜೆನ್ಸೀಸ್

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…