ಸ್ವಾತಂತ್ರ್ಯ ದಿನಕ್ಕೆ ಸಲ್ಮಾನ್​ ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನ ಬಾಕಿಯಿರುವಾಗಲೇ ಬಾಲಿವುಡ್​ ನಟ ಸಲ್ಮಾನ್​ ಖಾನ್​, ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ಗಳನ್ನು ಶೇರ್​ ಮಾಡುವ ಮೂಲಕ ತಾಯ್ನಾಡಿಗೆ ತೊಂದರೆ ಕೊಡಬೇಡಿ ಎಂಬ ಸಂದೇಶ ಕೊಟ್ಟಿದ್ದಾರೆ ದಬಾಂಗ್​ ಹೀರೊ.

ಹಮ್​ ಫಿಟ್​ ತೊ ಇಂಡಿಯಾ ಫಿಟ್​ ಹಾಗೂ ಸ್ವಚ್ಛ ಭಾರತ ಯೋಜನೆಗಳ ಬಗ್ಗೆ ಹೇಳುವ ಮೂಲಕ ಇನ್​ಸ್ಟಾದಲ್ಲಿ ಅವುಗಳಿಗೆ ಬೆಂಬಲ ಸೂಚಿಸಿದ್ದಾರೆ. ಸ್ವಚ್ಛ ಭಾರತದಿಂದ ನಾವು ಫಿಟ್​ ಆಗುತ್ತೇವೆ, ನಾವು ಫಿಟ್​ ಆದರೆ ಭಾರತ ಫಿಟ್​ ಆಗಿರುತ್ತದೆ. ನಂತರ ನೀವು ಏನೆಲ್ಲಾ ಮಾಡಬೇಕೆಂದಿರುತ್ತೀರೊ ಎಲ್ಲವನ್ನೂ ಮಾಡಬಹುದು. ಆದರೆ, ನಿಮ್ಮ ತಾಯ್ನಾಡಿಗೆ ಮಾತ್ರ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ.

ಈ ಸಂದೇಶದ ಜತೆ 52 ವರ್ಷದ ಸಲ್ಮಾನ್​ ತಾವು ವರ್ಕ್​ ಔಟ್​ ಮಾಡುವ ಫೋಟೋ ಹಾಗೂ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಕೇಂದ್ರ ಸಚಿವ ಕಿರಣ್​ ರಿಜಿಜು ಸಲ್ಮಾನ್​ಗೆ ಹಮ್​ ಫಿಟ್​ ತೊ ಇಂಡಿಯಾ ಫಿಟ್​ ಚಾಲೆಂಜ್​ ನೀಡಿದ್ದರು. ಈ ಚಾಲೆಂಜ್​ ಒಪ್ಪಿಕೊಂಡ ಸಲ್ಮಾನ್​ ಕ್ರೀಡಾ ಸಚಿವ ರಾಜ್ಯವರ್ಧನ್​ ರಾಥೋಡ್​ ಫ್ಯಾಬುಲೆಸ್​ ಅಭಿಯಾನ ಆರಂಭಿಸಿದ್ದಾರೆ. ನನ್ನ ಫಿಟ್ನೆಸ್​ ವಿಡಿಯೋ ಇಲ್ಲಿದೆ ನೋಡಿ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)