ಮುಂಬೈ: ( Sushant Singh Rajput ) ಬಾಲಿವುಡ್ ನಟ ಸಲ್ಮಾನ್ ಖಾನ ಅವರ ಮಾಜಿ ಪ್ರೇಯಸಿ ಸೋಮಿ ಅಲಿ ಇತ್ತಿಚೇಗೆ ಸೋಶಿಯಲ್ ಮೀಡಿಯಾದಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವುದನ್ನು ನೆಟ್ಟಿಗರ ಮುಂದೆ ಇಟ್ಟಿದ್ದರು. ಈ ವೇಳೆ ನಟ ಸುಶಾಂತ್ ಸಿಂಗ್ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಆಸ್ಕ್ ಮೀ ಎನಿಥಿಂಗ್ನಲ್ಲಿ ಸೋಮಿ ಅವರಿಗೆ ಸುಶಾಂತ್ ಸಿಂಗ್ ಪ್ರಕರಣದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸೋಮಿ ” ವರನ್ನು ಬಾಲಿವುಡ್‌ನಿಂದ ಮೂಲೆಗುಂಪು ಮಾಡಿದ ರೀತಿ ನಿಜವಾಗಿಯೂ ನಿರಾಶಾದಾಯಕವಾಗಿದೆ. ಸುಶಾಂತ್ ಅವರನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಶವಪರೀಕ್ಷೆಯ ವರದಿಯನ್ನು ಸಹ AIIMS ಡಾ. ಸುಧೀರ ಗುಪ್ತಾ ಬದಲಾಯಿಸಿದ ಡಾ. ಸುಧೀರ್ ಗುಪ್ತಾ ಅವರನ್ನು ಕೇಳಿ ಎಂದು ಪ್ರಶ್ನಿಸಿದ್ದಾರೆ.
ಚಿತ್ರರಂಗದಲ್ಲಿ ಅವರ ಹೇಳಿಕೆ ಸದ್ದು ಮಾಡುತ್ತಿದ್ದು, ಅದರ ಸ್ಕ್ರೀನ್ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಸುಶಾಂತ್ ಸಿಂಗ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಸುಶಾಂತ್ ಸಿಂಗ್ 2020 ಜೂ.14 ರಂದು ಬಾಂದ್ರಾ ಅಪಾಟ್ರ್ಮೆಂಟ್ನ ಕೋಣೆಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅ.2020 ರಲ್ಲಿ AIIMS ವೈದ್ಯಕೀಯ ಮಂಡಳಿಯು ನಟ ಸುಶಾಂತ ಸಾವನ್ನು ಆತ್ಮಹತ್ಯೆ ಎಂದು ರಿಪೋರ್ಟ್ ನೀಡಿತ್ತು.
ವರದಿಗಳ ಪ್ರಕಾರ ” ಫೋರೆನ್ಸಿಕ್ನ ಆರು ವೈದ್ಯರ ತಂಡವು ಸುಶಾಂತ ದೇಹದಲ್ಲಿ ವಿಷ ಮತ್ತು ಕತ್ತು ಹಿಸುಕಿದ ಆರೋಪವನ್ನು ತಳ್ಳಿಹಾಕಿದೆ. ಡಾ. ಸುಧೀರ ಗುಪ್ತಾ ಅವರು, ದೇಹದ ಮೇಲೆ ನೇಣು ಹಾಕಿರುವ ಗುರುತು ಬಿಟ್ಟರೇ ಬೇರೆನು ಗಾಯಗಳು ಇಲ್ಲ ಎಂದು ವರದಿ ನೀಡಿದ್ದಾರೆ.