ಮೌನಿ ಈಗ ಮುನ್ನಿ!

ಕಳೆದ ವರ್ಷ ‘ಕೆಜಿಎಫ್’ ಚಿತ್ರದ ‘ಗಲಿ ಗಲಿ ಮೈಂ..’ ಹಾಡಿಗೆ ಹೆಜ್ಜೆ ಹಾಕಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ನಟಿ ಮೌನಿ ರಾಯ್, ಈಗ ಮತ್ತೊಂದು ಐಟಂ ಸಾಂಗ್​ನಲ್ಲಿ ಕಾಣಿಸಿಕೊಳ್ಳುವ ಕಾತರದಲ್ಲಿದ್ದಾರೆ. ಅದೂ ಸಲ್ಮಾನ್ ಖಾನ್ ಜತೆಗೆ ಎಂಬುದು ವಿಶೇಷ! ಹೌದು, ಪ್ರಭುದೇವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ದಬಂಗ್ 3’ ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ. ಇತ್ತೀಚೆಗಷ್ಟೇ ‘ಕಿಚ್ಚ’ ಸುದೀಪ್ ಜತೆಗೆ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಿದ್ದ ನಿರ್ದೇಶಕರು, ಈಗ ಐಟಂ ಹಾಡನ್ನು ಸೆರೆಹಿಡಿಯುವ ಪ್ಲಾ್ಯನ್​ನಲ್ಲಿದ್ದಾರೆ. ಮೊದಲ ಭಾಗದಲ್ಲಿ ‘ಮುನ್ನಿ ಬದ್ನಾಂ..’ ಮತ್ತು ಎರಡನೇ ಭಾಗದ ‘ಫೇವಿಕೋಲ್ ಸೇ..’ ಹಾಡಿನ ಕೆಲ ಸಾಲುಗಳನ್ನು ಪಡೆದು, ಅದಕ್ಕೆ ಮತ್ತಷ್ಟು ಮೆರುಗು ನೀಡಿ ‘ದಬಂಗ್ 3’ಯಲ್ಲಿ ಬಳಸಿಕೊಳ್ಳಲಾಗುತ್ತಿದೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್​ಗಾಗಿ ಮುಂಬೈ ಫಿಲಂ

ಸಿಟಿಯಲ್ಲಿ ಎರಡು ಬೃಹತ್ ಸೆಟ್​ಗಳನ್ನು ನಿರ್ವಿುಸಲಾಗಿದೆ. ಈ ಹಾಡಿಗೂ ವಿಶೇಷ ಸೆಟ್ ಸಿದ್ಧಪಡಿಸಿದ್ದು, ಇನ್ನು ಕೆಲದಿನಗಳಲ್ಲಿ ಹಾಡಿನ ಚಿತ್ರೀಕರಣ ಶುರುವಾಗಲಿದೆ. ‘ದಬಂಗ್’ ಚಿತ್ರದ ‘ಮುನ್ನಿ ಬದ್ನಾಂ..’ ಹಾಡಿಗೆ ಮಲೈಕಾ ಅರೋರಾ ಹೆಜ್ಜೆ ಹಾಕಿದ್ದರು. ಅದಾದ ಬಳಿಕ ಬಂದ ‘ದಬಂಗ್ 2’ದಲ್ಲಿ ‘ಫೇವಿಕೋಲ್ ಸೇ..’ ಐಟಂ ನಂಬರ್​ನಲ್ಲಿ ಕರೀನಾ ಕಪೂರ್ ಬೋಲ್ಡ್ ಆಗಿ ಮಿಂಚಿದ್ದರು. ಈಗ ಮೌನಿ ರಾಯ್ ಮೂರನೇ ಭಾಗದಲ್ಲಿ ಮುನ್ನಿಯಾಗಲಿದ್ದಾರೆ.-ಏಜೆನ್ಸೀಸ್

Leave a Reply

Your email address will not be published. Required fields are marked *