More

    ಅಕ್ರಮ ಮದ್ಯ ಮಾರಾಟ – ವ್ಯಕ್ತಿ ಪೊಲೀಸ್ ವಶಕ್ಕೆ

    ವಿಟ್ಲ: ನೆಟ್ಲಮುಡ್ನೂರು ಗ್ರಾಮದ ಗಣೇಶ್ ನಗರದ ಸಾರ್ವಜನಿಕ ರಸ್ತೆ ಬದಿಯಲ್ಲಿ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಟ್ವಾಳ ಮುಡ್ನೂರು ಗ್ರಾಮದ ನಿವಾಸಿ ಶಶಿಧರ ಶೆಟ್ಟಿ ಪೊಲೀಸ್ ವಶದಲ್ಲಿರುವ ವ್ಯಕ್ತಿಯಾಗಿದ್ದಾರೆ. ಆತನ ಕೈಚೀಲವನ್ನು ಪರಿಶೀಲಿಸಲಾಗಿ ಸುಮಾರು 2.880 ಲೀಟರ್ ಅಕ್ರಮ ಮದ್ಯದ ಸ್ಯಾಚೆಟ್ ಗಳು ಹಾಗೂ ಮದ್ಯ ಮಾರಾಟದಿಂದ ಬಂದ 550ರೂ. ದೊರಕಿರುತ್ತದೆ.

    ಆರೋಪಿಯು ಅನಂತಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿರುವ ಮದಿರಾ ವೈನ್ ಶಾಫ್ ನಿಂದ ಮದ್ಯವನ್ನು ಹೆಚ್ಚಿನ ಬೆಲೆ ಮಾರಾಟ ಮಾಡುವ ಉದ್ದೇಶದಿಂದ ಖರೀದಿಸಿರುವುದಾಗಿ ತನಿಖೆಯ ಸಂದರ್ಭ ಹೇಳಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts