ಜಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಘಟಕ ತಾಲೂಕು ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಒಂಬತ್ತನೇ ದಿನ ಪೂರೈಸಿತು.

ಸಂಘದ ತಾಲೂಕು ಅಧ್ಯಕ್ಷ ಅರುಣ್ ಮಾತನಾಡಿ, ಕೆಲಸಕ್ಕೆ ರಜೆ ಹಾಕಿ ಕಳೆದ ಒಂಬತ್ತು ದಿನಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ಪ್ರತಿಭಟನೆಗೆ ಸ್ಪಂದಿಸುತ್ತಿಲ್ಲ. ಮೂಲಸೌಲಭ್ಯಗಳ ಜತೆ ಬೇಡಿಕೆಗಳನ್ನು ಈಡೇರಿಸಲು ಸಚಿವರು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಖಜಾಂಚಿ ಮಧುಸೂದನ್, ಸೊಕ್ಕೆ ದುರುಗೇಶ್, ಆರ್.ಐ. ಧನಂಜಯ್, ಕೀರ್ತಿಕುಮಾರ್, ಆಡಳಿತಾಧಿಕಾರಿಗಳಾದ ಪ್ರದೀಪ್ ನಾಯಕ, ದಿಲೀಪ್ಕುಮಾರ್, ಬಸಪ್ಪಗೌಡರ್, ಬಸವರಾಜ್, ಸರ್ವಶ್ರೀ, ಕೀರ್ತಿಕುಮಾರಿ, ನೇತ್ರಾವತಿ, ಶ್ವೇತಾ, ದಸಂಸ ಮುಖಂಡ ಗೌರಿಪುರ ಸತ್ಯಮೂರ್ತಿ ಸೇರಿ ಮತ್ತಿತರರಿದ್ದರು.