| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಭೀಮ
ನಿರ್ದೇಶನ: ವಿಜಯ್ ಕುಮಾರ್
ನಿರ್ಮಾಣ: ಜಗದೀಶ್ ಮತ್ತು ಕೃಷ್ಣ ಸಾರ್ಥಕ್
ತಾರಾಗಣ: ವಿಜಯ್ ಕುಮಾರ್, ಅಶ್ವಿನಿ, ಬ್ಲ್ಯಾಕ್ ಡ್ರ್ಯಾಗನ್ ಮಂಜು, ಪ್ರಿಯಾ ಷಠಮರ್ಷಣ, ಕಲ್ಯಾಣಿ ರಾಜು, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಕಾಕ್ರೋಚ್ ಸುಧಿ, ಪುನೀತ್ ಮುಂತಾದವರು
“ಈ ಪ್ರೊಫೆಷನ್ನಲ್ಲಿ ಹಣ ಬೀಳುತ್ತೆ, ಹೆಣನೂ ಬೀಳುತ್ತೆ, ಹೆಣಕ್ಕೆ ಹುಳನೂ ಬೀಳುತ್ತೆ. ಆದರೆ, ಬಿಜಿನೆಸ್ ಮಾತ್ರ ಬೀಳಲ್ಲ…’ ಅಂತಾನೆ ಡ್ರಗ್ಸ್ ಪೆಡ್ಲರ್ ಗಿಲಿಗಿಲಿ ಚಂದ್ರು. “ಆಡು ಮುಟ್ಟದ ಸೊಪ್ಪಿಲ್ಲ, ಅದು ಆಗ. ಸೊಪ್ಪು ಮುಟ್ಟದ ಪಾರ್ಟಿ ಇಲ್ಲ, ಇದು ಈಗ’ ಅಂತಾನೆ ಡ್ರಗ್ಸ್ ಪಾರ್ಟಿ ಆಯೋಜಿಸುವ ಎಂಎಲ್ಎ ಶ್ರೀಕಂಠಯ್ಯನ ಮಗ. ಚಿತ್ರದಲ್ಲಿ ಗಾಂಜಾ ಸುಡುವ ಘಾಟಿದೆ. ಟೈಬಲ್ ಮಾತ್ರೆ ಕರಗಿಸಿ ಇಂಜೆಕ್ಷನ್ ಚುಚ್ಚಿಕೊಂಡು ನಶೆಯೇರಿಸಿಕೊಳ್ಳುವ ಹೊಸ ವ್ಯಸನವಿದೆ. ಸಿಗರೇಟು ಹೊಗೆಯ ನಡುವೆ, ಎಣ್ಣೆ ಬಾಟಲಿಗಳ ಸದ್ದಿದೆ. ಲಾಂಗು, ಮಚ್ಚು, ತುಕ್ಕು ಹಿಡಿದ ಡ್ಯಾಗರ್ಗಳಿವೆ. ವೀಲಿಂಗ್ ಥ್ರಿಲ್ ಇದೆ. ಡ್ರಗ್ಸ್ನ ನಶೆಯಲ್ಲಿರುವ ಕೊಳಗೇರಿ ಹುಡುಗರ ಕಿರಿಕ್, ಹೈ ಕ್ಲಾಸ್ ಪಾರ್ಟಿಗಳ ಚಮಕ್, ರಾ ಸಂಭಾಷಣೆಯ ಝಲಕ್… ಹೀಗೆ “ಭೀಮ’ನ ಅಡ್ಡದಲ್ಲಿ ದಾರಿತಪ್ಪಿದ ಬೆಂಗಳೂರಿನ ಇಂದಿನ ಯುವಕರ ಅನಾವರಣವಾಗಿದೆ.
ಆತ ಜೆಸಿ ರಸ್ತೆಯಲ್ಲಿ ಗ್ಯಾರೇಜ್ ನಡೆಸುವ ಜಾವಾ ರಾಮಣ್ಣ (ಅಚ್ಯುತ್). ಅವನ ಶಿಷ್ಯ ಬ್ಲ್ಯಾಕ್ ಡ್ರ್ಯಾಗನ್ ಮಂಜು. ಇದ್ದ ಒಬ್ಬ ಮಗನ ಸಾವಿಗೆ ಶಿಷ್ಯನೇ ಕಾರಣ ಅಂತ ಗೊತ್ತಾಗಿ, ರಾಮಣ್ಣ ಮಂಜನನ್ನು ಬಡಿದು ಅಟ್ಟುತ್ತಾನೆ. ಆಗ ರಾಮಣ್ಣನ ಗ್ಯಾರೇಜ್ ಸೇರುವ ಅನಾಥ ಭೀಮ, ಶಿಷ್ಯ ಮತ್ತು ಮಗನ ಸ್ಥಾನ ತುಂಬುತ್ತಾನೆ. ಕೆಲ ಕಾಲ ಕಳೆದ ಬಳಿಕ ರಾಮಣ್ಣ ಕಾಲವಾಗುತ್ತಾನೆ. ಅಡ್ಡದಾರಿ ಹಿಡಿದ ಮಂಜ ಗಾಂಜಾ ಕಿಂಗ್ಪಿನ್ ಆದರೆ, ಭೀಮ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಡ್ರಗ್ಸ್ ವಿರುದ್ಧ ಹೋರಾಟಕ್ಕಿಳಿಯುತ್ತಾನೆ. ದುಷ್ಟ ಪೊಲೀಸರು ಭೀಮನ ವಿರುದ್ಧ ನಿಂತರೆ, ದಕ್ಷ ಪೊಲೀಸ್ ಅಧಿಕಾರಿ ಗಿರಿಜ (ಪ್ರಿಯಾ) ಆತನ ಪರ ನಿಲ್ಲುತ್ತಾರೆ. “ಭೀಮ’ ಬ್ಲ್ಯಾಕ್ ಡ್ರ್ಯಾಗನ್ ಮಂಜನನ್ನು ಹೇಗೆ ಮಟ್ಟ ಹಾಕುತ್ತಾನೆ? ಆ ಪಯಣದಲ್ಲಿ ಏನು ಗಳಿಸುತ್ತಾನೆ? ಏನೆಲ್ಲಾ ಕಳೆದುಕೊಳ್ಳುತ್ತಾನೆ? ಸಿನಿಮಾ ನೋಡಿ.
ಮೊದರ್ಲಧದಿಂದಲೇ ವೇಗ ಪಡೆಯುವ ಭೀಮನಿಗೆ ಇಂರ್ಟವಲ್ ಒಳಗೆ ಬರುವ ಮೂರು ಹಾಡುಗಳು, ಒಂದು ಬಿಟ್ ಸಾಂಗ್ ಬ್ರೇಕ್ ಹಾಕುತ್ತದೆ. ಕ್ಲೆಮ್ಯಾಕ್ಸ್ ೈಟ್ ಸುದೀರ್ವೆನಿಸಿದರೂ, ಆ ಬಳಿಕ ಬರುವ ಒಂದು ಟ್ವಿಸ್ಟ್ ಕುತೂಹಲ ಮೂಡಿಸುತ್ತದೆ! ಬ್ಲ್ಯಾಕ್ ಡ್ರ್ಯಾಗನ್ ಮಂಜು, ಬೇಬಿಯಮ್ಮ, ಗಿಲಿಗಿಲಿ ಚಂದ್ರು, ಕಾಂಪ್ರಮೈಸ್ ಆ್ಯಂಟನಿ, ಜ್ಯಾಕಣ್ಣ, ಮೋಗ್ಲಿ, ಡಯಾನಾ ಅಜ್ಜಿ, ಅಲ್ಲು, ಬಾಬ್… ಹೀಗೆ ವಿಭಿನ್ನ ಪಾತ್ರಗಳಿವೆ. ದುನಿಯಾ ವಿಜಯ್ ಆ್ಯಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿದ್ದಾರೆ. ಮಂಜು ಮೂಲಕ ಕನ್ನಡಕ್ಕೆ ಹೊಸ ವಿಲನ್ ಸಿಕ್ಕಂತಾಗಿದೆ. ಡೇರಿಂಗ್ ಪೊಲೀಸ್ಆಗಿ ಪ್ರಿಯಾ ಷಠಮರ್ಷಣ ಮಿಂಚಿದ್ದಾರೆ. ಚರಣರಾಜ್ ಹಾಡುಗಳು ಈಗಾಗಲೇ ಗೆದ್ದಿವೆ. ಮಾಸ್ತಿ ಸಂಭಾಷಣೆ ಹಿಂದೆಂದಿಗಿಂತೂ ರಾ ಆಗಿದೆ. “ಸಲಗ’ ಬಳಿಕ “ಭೀಮ’ನೂ ಪೊಲೀಸರ ಮೇಲೆ ವಾಗ್ದಾಳಿ ನಡೆಸುತ್ತಾನೆ. ಆದರೆ, “ಭೀಮ’ ಪ್ರಸ್ತುತ ಸಾಮಾಜಿಕ ಪಿಡುಗಿನ ಬಗ್ಗೆ ಗಮನ ಸೆಳೆಯುವ ಪ್ರಯತ್ನವನ್ನಂತೂ ಮಾಡಿದ್ದಾನೆ.