23.9 C
Bangalore
Friday, December 6, 2019

‘ಸಲಗ’ ಚಿತ್ರತಂಡಕ್ಕೆ ‘ಟಗರು’ ಬಲ: ದುನಿಯಾ ವಿಜಿ ಜತೆ ಡಾಲಿ ಧನಂಜಯ್​ ದರ್ಬಾರ್​

Latest News

ಹಲವು ನಿಗೂಢ ಅಪರಾಧ ಪ್ರಕರಣ ಪತ್ತೆ ಮಾಡಿದ್ದ ಪೊಲೀಸ್​ ಶ್ವಾನ ರೂಬಿ ಸಾವು

ರಾಯಚೂರು : ಅಪರಾಧಿಗಳ ಪತ್ತೆಗೆ ತರಬೇತಿ ಪಡೆದಿದ್ದ ರೂಬಿ ಹೆಸರಿನ ಪೊಲೀಸ್​ ಶ್ವಾನ ಮೃತಪಟ್ಟಿದೆ.ಪೊಲೀಸ್​ ಇಲಾಖೆಯಲ್ಲಿ 13 ವರ್ಷ 6 ತಿಂಗಳು ಸೇವೆ...

ಗ್ರಹಣವು ಅಚ್ಚರಿಗಳ ಸಂಗಮ

ದಾವಣಗೆರೆ: ಗ್ರಹಣವು ಅಚ್ಚರಿಗಳ ಸಂಗಮವಾಗಿದ್ದು ಅದರ ಬಗ್ಗೆ ತಿಳಿಯುವ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್. ನಾಗರಾಜು ಹೇಳಿದರು. ಡಿ. 26ರಂದು ಸಂಭವಿಸುವ ಕಂಕಣ ಸೂರ್ಯ...

ಎನ್​ಕೌಂಟರ್​ಗೆ ಮಾನವಹಕ್ಕುಗಳ ಕಾರ್ಯಕರ್ತರಿಂದ ಅಸಮಾಧಾನ: ಸಿಎಂ ಕೆ ಚಂದ್ರಶೇಖರ್ ವಿರುದ್ಧ ಆರೋಪ

ನವದೆಹಲಿ: ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ನಂತರ ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಶುಕ್ರವಾರ ಮುಂಜಾನೆ ಎನ್​ಕೌಂಟರ್​ನಲ್ಲಿ ಕೊಂದಿದ್ದಕ್ಕೆ ಮಾನವ ಹಕ್ಕುಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು...

ಸೀತಾರಾಮನ್​ ಅವರ ಈರುಳ್ಳಿ ಹೇಳಿಕೆ ತಿರುಚಿ ಟ್ರೆಂಡಿಂಗ್ ಮಾಡಲಾಗಿದೆ: ಫ್ಯಾಕ್ಟ್​​ಚೆಕ್​ನಲ್ಲಿ ಬಹಿರಂಗ

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ಸಂಬಂಧ ಸಂಸತ್ತಿನಲ್ಲಿ ನಡೆದ ಚರ್ಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು....

ಬೆಂಗಳೂರು: ನಟ ದುನಿಯಾ ವಿಜಯ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆಯಾಗಿದ್ದ ‘ಸಲಗ’ ಚಿತ್ರದ ಟೀಸರ್ ಗಾಂಧಿನಗರದಲ್ಲಿ​ ಸಾಕಷ್ಟು ಸದ್ದು ಮಾಡಿತ್ತು. ಇದೀಗ ‘ಸಲಗ’ ಚಿತ್ರತಂಡಕ್ಕೆ ‘ಟಗರು’ ಸಿನಿಮಾ ತಂಡ ಸೇರಿರುವುದು ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ಈ ಹಿಂದೆ ತಮ್ಮದೆ ‘ದುನಿಯಾ ಟಾಕೀಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ‘ದುನಿಯಾ’ ವಿಜಯ್ ಹೇಳಿಕೊಂಡಿದ್ದರು. ‘ಚೂರಿಕಟ್ಟೆ’ ಸಿನಿಮಾ ಖ್ಯಾತಿಯ ರಘು ಶಿವಮೊಗ್ಗ ನಿರ್ದೇಶನ ಹೊಣೆ ಹೊತ್ತುಕೊಂಡಿದ್ದರು. ನಂತರದಲ್ಲಿ ನಿರ್ದೇಶಕನ ಸ್ಥಾನದಲ್ಲಿ ಬದಲಾವಣೆ ಆಗಿತ್ತು. ಇದೀಗ ನಿರ್ಮಾಪಕನ ಸ್ಥಾನದಲ್ಲೂ ಬದಲಾಗಿದ್ದು, ‘ಟಗರು’ ಖ್ಯಾತಿಯ ಕೆ.ಪಿ. ಶ್ರೀಕಾಂತ್ ‘ಸಲಗ’ಕ್ಕೆ ಬಂಡವಾಳ ಹೂಡಲಿದ್ದಾರೆ. ಅಲ್ಲದೆ, ‘ಟಗರು’ಗೆ ಸಂಗೀತ ನೀಡಿದ್ದ ಚರಣ್​ರಾಜ್ ಇಲ್ಲಿಗೆ ಬ್ಯಾಕ್​​ಗ್ರೌಂಡ್​ ಮ್ಯೂಸಿಕ್​ ನಿರ್ವಹಿಸಲಿದ್ದು, ನವೀನ್​ ಸಜ್ಜು ಸಂಗೀತ ನೀಡಲಿದ್ದಾರೆ. ಟಗರುಗೆ ಸಂಭಾಷಣೆ ಬರೆದಿದ್ದ ಮಾಸ್ತಿ ಇಲ್ಲಿಯೂ ಮುಂದುವರಿಯಲಿದ್ದಾರೆ.

ಟಗರು ಚಿತ್ರದಲ್ಲಿ ಡಾಲಿ ಹೆಸರಿನಲ್ಲಿ ವಿಲನ್​ ಪಾತ್ರದಲ್ಲಿ ಮಿಂಚಿದ್ದ ನಟ ಧನಂಜಯ್​, ಸಲಗ ಚಿತ್ರದಲ್ಲೂ ತಮ್ಮ ಖದರ್​ ತೋರಲಿದ್ದು, ಅವರಿಗೆ ಕಾಕ್ರೋಚ್​ ಖ್ಯಾತಿಯ ಸುಧಿ ಸಾಥ್​ ನೀಡಲಿದ್ದಾರೆ.

‘ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ‘ಸಲಗ’ ಸಿನಿಮಾ ಸಿದ್ಧವಾಗಲಿದೆ. ಭೂಗತ ಲೋಕದ ಬಗ್ಗೆಯೂ ಈ ಸಿನಿಮಾ ಮಾತನಾಡಲಿದೆ. ‘ಟಗರು’ ಚಿತ್ರದಲ್ಲಿ ಕಾಣಿಸಿದ ರಾ ಫೀಲ್ ಇಲ್ಲಿಯೂ ಸಿಗಲಿದೆ. ಮುಂದಿನ ವಾರದಲ್ಲಿ ನಿರ್ದೇಶಕ ಯಾರು ಎಂಬ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಶ್ರೀಕಾಂತ್. ಜೂನ್ ಮೊದಲ ವಾರದಲ್ಲಿ ‘ಸಲಗ’ ಮುಹೂರ್ತ ನಡೆಯಲಿದ್ದು, ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

Stay connected

278,732FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...