More

  ಏಷ್ಯನ್ ಕುಸ್ತಿ ಆಯ್ಕೆ ಟ್ರಯಲ್ಸ್ ಸಾಕ್ಷಿಗೆ ಆಘಾತ

  ಲಖನೌ: ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್ ಮತ್ತು 2018ರ ವಿಶ್ವ ಚಾಂಪಿಯನ್​ಷಿಪ್ ಕಂಚು ವಿಜೇತೆ ಪೂಜಾ ದಾಂಢ ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನ ಆಯ್ಕೆ ಟ್ರಯಲ್ಸ್​ನಲ್ಲಿ ಆಘಾತಕಾರಿ ಸೋಲು ಎದುರಿಸಿದ್ದಾರೆ. ಇದರಿಂದ ಇವರಿಬ್ಬರ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಅವಕಾಶ ತೂಗುಯ್ಯಾಲೆಯಲ್ಲಿ ನಿಂತಿದೆ.

  ಮಹಿಳೆಯರ 62 ಕೆಜಿ ವಿಭಾಗದ ಆಯ್ಕೆ ಟ್ರಯಲ್ಸ್ ನಲ್ಲಿ ಸಾಕ್ಷಿ ಮಲಿಕ್, ವಿಶ್ವ ಕೆಡೆಟ್ ಚಾಂಪಿಯನ್ ಸೋನಮ್ ಮಲಿಕ್ ವಿರುದ್ಧ ಸೋಲು ಅನುಭವಿಸಿದರು. 57 ಕೆಜಿ ವಿಭಾಗದಲ್ಲಿ ಪೂಜಾ, ಯುವ ಕುಸ್ತಿಪಟು ಅಂಶು ಮಲಿಕ್​ಗೆ ಶರಣಾದರು. ಸ್ಟಾರ್ ಆಟಗಾರ್ತಿ ವಿನೇಶ್ ಪೋಗಟ್ (53), ದಿವ್ಯಾ ಕ್ಯಾಕ್ರನ್ (68 ಕೆಜಿ), ನಿರ್ಮಲಾ ದೇವಿ (50 ಕೆಜಿ) ಮತ್ತು ಕಿರಣ್ ಗೊದರ (76 ಕೆಜಿ) ಸುಲಭವಾಗಿ ಟ್ರಯಲ್ಸ್ ಗೆದ್ದು ಏಷ್ಯನ್ ಚಾಂಪಿಯನ್​ಷಿಪ್​ಗೆ ಆಯ್ಕೆಯಾದರು.

  ಆಯ್ಕೆ ಟ್ರಯಲ್ಸ್​ನಲ್ಲಿ ವಿಜೇತ ರಾದವರು ಇನ್ನು ಜನವರಿ 15ರಿಂದ 18ರವರೆಗೆ ರೋಮ್ಲ್ಲಿ ರ‍್ಯಾಂಕಿಂಗ್ ಸರಣಿ ಮತ್ತು ಫೆಬ್ರವರಿ 18ರಿಂದ 23ರವರೆಗೆ ದೆಹಲಿಯಲ್ಲಿ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧಿಸಲಿ ದ್ದಾರೆ. ಇವೆರಡು ಕೂಟಗಳಲ್ಲಿ ಪದಕ ಗೆಲ್ಲುವಲ್ಲಿ ಸಫಲರಾದವರು ಮಾತ್ರ ಮಾರ್ಚ್ 27ರಿಂದ 29ರವರೆಗೆ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಕೂಟಕ್ಕೆ ನೇರಅರ್ಹತೆ ಪಡೆಯಲಿದ್ದಾರೆ ಎಂದು ಭಾರತೀಯ ಕುಸ್ತಿ ಒಕ್ಕೂಟ ತಿಳಿಸಿದೆ. ಹೀಗಾಗಿ ಸೋನಮ್ ಮತ್ತು ಅಂಶು ಪದಕ ಗೆಲ್ಲಲು ವಿಫಲರಾದರೆ ಮಾತ್ರ ಸಾಕ್ಷಿ ಮತ್ತು ಪೂಜಾಗೆ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಸ್ಪರ್ಧಿಸುವ ಅವಕಾಶ ಜೀವಂತವಾಗಿರಲಿದೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತ

  ಸುಶೀಲ್ ಕುಮಾರ್​ಗೂ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಕೈತಪು್ಪವ ಭೀತಿ ಇದೆ. ಅವರು ಗಾಯ ದಿಂದಾಗಿ ಪುರುಷರ ವಿಭಾಗದ ಆಯ್ಕೆ ಟ್ರಯಲ್ಸ್​ನಿಂದ ಹೊರಗುಳಿದಿರು ವುದು ಇದಕ್ಕೆ ಕಾರಣ.  (ಪಿಟಿಐ) 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts