ಪ್ರಶ್ನೆ: ನನ್ನ ತಂದೆ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾಗ ನಿಧನ ಹೊಂದಿದರು. ನಂತರ ನನ್ನ ತಾಯಿ ಅನುಕಂಪ ಆಧಾರದ ಮೇಲೆ “ಸಿ’ ವೃಂದದ ಹುದ್ದೆಯಲ್ಲಿ ಗುಮಾಸ್ತರಾಗಿ 6 ವರ್ಷ ಸೇವೆ ಸಲ್ಲಿಸಿದರು. ನಮ್ಮ ತಾಯಿಯವರೂ ಕ್ಯಾನ್ಸರ್ ರೋಗ ಪೀಡಿತರಾಗಿ 2 ತಿಂಗಳ ಹಿಂದೆ ನಿಧನಹೊಂದಿದರು. ನಾನು ಒಬ್ಬನೇ ಮಗನಾಗಿರುವುದರಿಂದ ನನಗೆ ಅನುಕಂಪ ಆಧಾರದ ಮೇಲೆ ನೇಮಕಾತಿ ಹುದ್ದೆ ಲಭ್ಯವಾಗುವುದೇ?
| ಬಿ. ಬಾಲಾಜಿ, ಕೊಪ್ಪಳ
ಉತ್ತರ: ಕರ್ನಾಟಕ ಸಿವಿಲ್ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3ರ ರೀತ್ಯ ಮೃತ ಸರ್ಕಾರಿ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ಆದ ಕಾರಣ ನೀವು ಸಹ ಪುನರ್ ಅನುಕಂಪದ ನೇಮಕಕ್ಕೆ ಸಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ “ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.