22.5 C
Bengaluru
Sunday, January 19, 2020

ಆನೆ ಸೆರೆಗೆ ಕಾಡಿದ ಅಭಿಮನ್ಯು ಅನುಪಸ್ಥಿತಿ

Latest News

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

ಸಕಲೇಶಪುರ: ಮಲೆನಾಡು ಜನರ ನಿದ್ದೆಗೆಡಿಸಿರುವ ಕಾಡಾನೆ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಾನೆ ‘ಅಭಿಮನ್ಯು’ವಿನ ಅನುಪಸ್ಥಿತಿ ಕಾಡುತ್ತಿದೆ.

ಎಂತಹ ಬಲಿಷ್ಠ ಸಲಗವಾದರೂ ಅಭಿಮನ್ಯು ಎದುರು ಶರಣಾಗಲೇಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಕಾಡಾನೆ ಸ್ಥಳಾಂತರಕ್ಕೆ ಆಗ್ರಹಿಸಿ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದ ಆರು ದಿನಗಳ ಪ್ರತಿಭಟನೆ ಪರಿಣಾಮವಾಗಿ ಕಾಡಾನೆ ಸೆರೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ್ದರು. ಆದರೆ ನೆಚ್ಚಿನ ಅಭಿಮನ್ಯು ಬಂಡಿಪುರ ಅರಣ್ಯದಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಕಾರಣ ಜಿಲ್ಲೆಗೆ ಬರಲು ಸಾಧ್ಯವಾಗಿಲ್ಲ.

ಅಧಿಕಾರಿಗಳಿಗೆ ನೆರವಾಗುವ ಅಭಿಮನ್ಯು: ಸಾಮಾನ್ಯವಾಗಿ ಪುಂಡಾನೆ ಸೆರೆ ಹಿಡಿಯಲು 8 ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದರೂ ಕಾಡಾನೆಗಳ ಗುಂಪು ಕಂಡಾಕ್ಷಣ ಸಾಕಾನೆಗಳು ಹೆದರುತ್ತವೆ. ಆದರೆ ಅಭಿಮನ್ಯು ಮಾತ್ರ ಯಾವುದಕ್ಕೂ ಹೆದರದೆ ಮುನ್ನುಗ್ಗುತ್ತಾನೆ. ಕಾಡಾನೆ ಗುಂಪಿನ ಸನಿಹಕ್ಕೆ ಹೋಗಿ ಅಧಿಕಾರಿಗಳು ಅರಿವಳಿಕೆ ಮದ್ದು ಹಾರಿಸುವವರೆಗೆ ಅಲ್ಲಿಯೇ ಇರುತ್ತಾನೆ. ಅಭಿಮನ್ಯುವಿನ ವಿಶಾಲವಾದ ಬೆನ್ನು ಸಹ ಚುಚ್ಚು ಮದ್ದು ಹಾರಿಸಲು ನೆರವಾಗುತ್ತದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.
ಪುಂಡಾನೆ ಎಷ್ಟೇ ರೋಷಾವೇಶ ತೋರಿದರೂ ನಿಗ್ರಹಿಸುವ ಜಾಣ್ಮೆ ಹಾಗೂ ಶಕ್ತಿ ಅಭಿಮಾನ್ಯುಗೆ ಇದೆ. ಸೆರೆ ಹಿಡಿದ ಸಲಗವನ್ನು ನಿಗದಿತ ಪ್ರದೇಶಕ್ಕೆ ಕರೆದೊಯ್ಯುವವರೆಗೆ ಅಭಿಮನ್ಯು ಜತೆಗಿರುತ್ತಾನೆ.

ಸಕಲೇಶಪುರಕ್ಕೆ ಉಂಟು ನಂಟು: ತಾಲೂಕಿನಲ್ಲಿ ಐದು ವರ್ಷಗಳಿಂದ ನಡೆದಿರುವ ಆನೆ ಸೆರೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ಪಾತ್ರ ಮಹತ್ವದ್ದಾಗಿದೆ. ಅಭಿಮನ್ಯು ಅನುಪಸ್ಥಿತಿಯ ಯಾವ ಕಾರ್ಯಾಚರಣೆಯು ಯಶಸ್ವಿಯಾಗಿಲ್ಲ ಎಂಬುದು ನಂಬಲೇಬೇಕಾದ ಸತ್ಯ. ಮೂರು ವರ್ಷದಲ್ಲಿ ಆಲೂರು ಹಾಗೂ ಸಕಲೇಶಪುರ ಭಾಗದಲ್ಲಿ 27ಕ್ಕೂ ಅಧಿಕ ಪುಂಡಾನೆಗಳ ಸೆರೆ ಹಿಡಿಯಲಾಗಿದ್ದು, ಈ ಎಲ್ಲ ಸಂದರ್ಭಗಳಲ್ಲಿ ಅಭಿಮನ್ಯು ಸಾಕಾನೆಗಳ ನೇತೃತ್ವ ವಹಿಸಿದ್ದ ಎಂಬುದು ಅದರ ಸಾಮರ್ಥ್ಯದ ದ್ಯೋತಕವಾಗಿದೆ.

 ಕಾಡಾನೆ ಸೆರೆ ಕಾರ್ಯಾಚರಣೆಗೆ ಅಭಿಮನ್ಯು ಬೇಕೆಬೇಕು. ಹುಲಿ ಕಾರ್ಯಾಚರಣೆಯಲ್ಲಿ ಅಭಿಮನ್ಯು ತೊಡಗಿರುವುದರಿಂದ ಆನೆ ಸೆರೆ ಕಾರ್ಯ ವಿಳಂಬವಾಗಿದೆ.
ಮೋಹನ್ ಆರ್‌ಎಫ್‌ಒ ಸಕಲೇಶಪುರ

 

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...