25.5 C
Bangalore
Monday, December 16, 2019

ಸಕಲೇಶಪುರ ಮಾರ್ಗ ಬೆಂಗಳೂರು ರೈಲು ಆರಂಭ

Latest News

ಜೆಡಿಎಸ್ ಕಾರ್ಯಕರ್ತರನ್ನು ಸೂರಜ್ ರೇವಣ್ಣ ಪ್ರಚೋದಿಸಿರುವ ಆಡಿಯೋ ಇದೆ, ಮಾಜಿ ಸಚಿವ ಎ.ಮಂಜು ಹೊಸ ಬಾಂಬ್

ಹಾಸನ: ಕೆಆರ್ ಪೇಟೆ ಉಪಚುನಾವಣೆ ಸಂದರ್ಭದಲ್ಲಿ ನಂಬಿಹಳ್ಳಿಯಲ್ಲಿ ನಡೆದ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣದ ವೇಳೆ , ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಸೂರಜ್...

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ ಮಾಡಿದ : ಸಾಮರಸ್ಯದ ಕಾರ್ಯಕ್ರಮ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ ಬಡಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದರು....

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಮಂಗಳೂರು: ಮಂಗಳೂರು – ಬೆಂಗಳೂರು ಸಕಲೇಶಪುರ ಮಾರ್ಗ ರೈಲು ಆರಂಭಗೊಂಡಿದೆ. ಆದರೆ ಪಡೀಲು ಬಳಿ ಹಳಿ ಇನ್ನೂ ಹಳಿ ಸಂಚಾರಕ್ಕೆ ಯೋಗ್ಯ ಆಗದಿರುವ ಕಾರಣ ಸದ್ಯ ಯಾವುದೇ ಬೆಂಗಳೂರು ರೈಲು ಕಾರವಾರ ತನಕ ಸಂಚರಿಸದೆ ಮಂಗಳೂರಿನಲ್ಲೇ ಪ್ರಯಾಣ ಮುಕ್ತಾಯಗೊಳಿಸುತ್ತಿದೆ.
ಭೂಕುಸಿತ ಸಂಭವಿಸಿ ಪಡೀಲು- ಕುಲಶೇಖರ ಬಳಿ ಹಳಿ ಮೇಲೆ ಬಿದ್ದಿರುವ ಮಣ್ಣು ಮತ್ತು ಕಲ್ಲು ತೆರವುಗೊಳಿಸುವ ಕಾಮಗಾರಿ ಭಾನುವಾರ ಭಾಗಶಃ ಮುಕ್ತಾಯಗೊಂಡಿದ್ದು, ಸೋಮವಾರ ಈ ಮಾರ್ಗ ರೈಲು ಸಂಚಾರಕ್ಕೆ ಸಿದ್ಧವಾಗುವ ಬಗ್ಗೆ ರೈಲ್ವೆ ಅಧಿಕಾರಿಗಳು ಶನಿವಾರ ಆಶಾಭಾವ ವ್ಯಕ್ತಪಡಿಸಿದ್ದರು.

- Advertisement -

ಆದರೆ ಭಾನುವಾರ ರಾತ್ರಿ ಹಾಗೂ ಸೋಮವಾರ ಮಧ್ಯಾಹ್ನ ತನಕ ಈ ಭಾಗದಲ್ಲಿ ನಿರಂತರ ಸುರಿದ ಮಳೆ ಸಮಸ್ಯೆ ಬಿಗಡಾಯಿಸಿತು. ಕಾಮಗಾರಿ ಪೂರ್ಣಗೊಂಡ ಹಳಿ ಇಕ್ಕೆಲ ಮಳೆ ನೀರು ಸಂಗ್ರಹಗೊಂಡಿತು. ಪರಿಣಾಮ ಈ ಮಾರ್ಗ ಮಂಗಳೂರಿನಿಂದ ಸುರತ್ಕಲ್ ವರೆಗಿನ ರೈಲು ಓಡಾಟವನ್ನು ಪಾಲಕ್ಕಾಡ್ ವಿಭಾಗ ಮತ್ತೆ ಮುಂದೂಡಿದೆ. ಈ ಮಾರ್ಗ ಹಾದು ಕೊಂಕಣದಲ್ಲಿ ಪ್ರಯಾಣಿಸಬೇಕಾಗಿರುವ ಕೆಲ ರೈಲುಗಳು ಸುರತ್ಕಲ್‌ನಿಂದ ಪ್ರಯಾಣ ಆರಂಭಿಸುವ, ಕೆಲ ರೈಲುಗಳ ಪಥ ಬದಲಿಸುವ ಹಾಗೂ ಇನ್ನು ಕೆಲವು ರೈಲುಗಳ ಸಂಚಾರ ಪೂರ್ಣ ರದ್ದುಪಡಿಸುವ ಕುರಿತು ಇಲಾಖೆ ಪ್ರಕಟಣೆ ಹೊರಡಿಸಿದೆ.

ಸುರತ್ಕಲ್‌ವರೆಗೆ ಮಾತ್ರ
ಮಂಗಳೂರು ಸೆಂಟ್ರಲ್- ಮುಂಬಯಿ ಲೋಕಮಾನ್ಯ ತಿಲಕ್ ಮತ್ಸೃಗಂಧ ಎಕ್ಸ್‌ಪ್ರೆಸ್, ಮಂಗಳೂರು ಜಂಕ್ಷನ್- ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ಎಕ್ಸ್‌ಪ್ರೆಸ್ ಮತ್ತು ಮಡ್‌ಗಾಂವ್- ಮಂಗಳೂರು ಸೆಂಟ್ರಲ್ ಡೆಮು ರೈಲುಗಳು ಸುರತ್ಕಲ್ ತನಕ ಮಾತ್ರ ಸಂಚರಿಸುತ್ತಿವೆ. ಮಂಗಳೂರು ಸೆಂಟ್ರಲ್- ಮಡ್‌ಗಾಂವ್ ಪ್ಯಾಸೆಂಜರ್ ಮತ್ತು ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣವನ್ನು ಆ.27ರಂದು ಕೂಡ ರದ್ದುಗೊಳಿಸಲಾಗಿದೆ.

ಮಂಗಳೂರಿನಿಂದಲೇ ಸಂಚಾರ
ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ (ನಂ.16515) ಸೋಮವಾರ ಮಂಗಳೂರು ಜಂಕ್ಷನ್‌ತನಕ ಮಾತ್ರ ಸಂಚರಿಸಿದ್ದು, ಇಲ್ಲಿಂದ ಕಾರವಾರ ತನಕದ ಪ್ರಯಾಣ ರದ್ದುಗೊಂಡಿತ್ತು. ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ (ನಂ.16516) ಮಂಗಳವಾರ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಲಿದೆ. ರೈಲ್ವೆ ಬೋಗಿಗಳ ಕೊರತೆಯಿಂದ ನೈರುತ್ಯ ರೈಲ್ವೆಯು ಯಶವಂತಪುರ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ನಂ.16575) ಗೋಮಟೇಶ್ವರ ಹಗಲು ರೈಲನ್ನು ಮಂಗಳವಾರ ರದ್ದುಪಡಿಸಿದೆ.
ಬೆಂಗಳೂರು- ಕಾರವಾರ ರಾತ್ರಿ ಎಕ್ಸ್‌ಪ್ರೆಸ್ (ಮೈಸೂರು ಮಾರ್ಗ- ನಂ.16523) ಸೋಮವಾರ ಮಂಗಳೂರು ಸೆಂಟ್ರಲ್‌ನಲ್ಲಿ ಪ್ರಯಾಣ ಕೊನೆಗೊಳಿಸಿದೆ. ಅದೇ ರೀತಿ ಕಾರವಾರ- ಬೆಂಗಳೂರು ರಾತ್ರಿ ಎಕ್ಸ್‌ಪ್ರೆಸ್ (ಶ್ರವಣಬೆಳಗೊಳ ಮಾರ್ಗ- 16514) ರೈಲು ಮಂಗಳವಾರ ಕಾರವಾರದ ಬದಲು ಮಂಗಳೂರು ಸೆಂಟ್ರಲ್‌ನಿಂದ ಪ್ರಯಾಣ ಆರಂಭಿಸಿದೆ.

ಪರ್ಯಾಯ ಮಾರ್ಗ ಬಳಕೆ
ದಕ್ಷಿಣ ಮತ್ತು ಕೊಂಕಣ ರೈಲ್ವೆ ಅಧಿಕೃತ ಮೂಲ ಪ್ರಕಾರ ಆ.26ರಂದು ಓಖಾ (ಗುಜರಾತ್)- ಎರ್ನಾಕುಳಂ ಎಕ್ಸ್‌ಪ್ರೆಸ್ (ನಂ.16337), ಕೊಯಮತ್ತೂರು- ಜಬಲಾಪುರ ಸಾಪ್ತಾಹಿಕ ಸುಪರ್ ಫಾಸ್ಟ್ ಸ್ಪೆಷಲ್‌ರೈಲು ಮತ್ತು ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್- ಕೊಚುವೆಲಿ (ನಂ.12201), ಆ. 25 ರಂದು ಓಖಾ- ಎರ್ನಾಕುಳಂ ಎಕ್ಸ್‌ಪ್ರೆಸ್ (ನಂ.16337)ಪಯಾರ್ಯಯ ಮಾರ್ಗ ಜೋಳಾರಪೇಟೆ ಮತ್ತು ಪಾಲಕ್ಕಾಡ್ ಮೂಲಕ ಸಂಚರಿಸಿದೆ. ಕೊಚುವೆಲಿ- ಪೋರಬಂದರ್ ಸ್ಪೆಷಲ್ ರೈಲು (ನಂ.09261) ಸೋಮವಾರ ಕೊಚುವೆಲಿಯಿಂದ ಪ್ರಯಾಣ ಆರಂಭಿಸಿ ಸೇಲಂ ಮಾರ್ಗದಲ್ಲಿ ಸಂಚರಿಸಿದೆ. ಮುಂಬೈ ಲೋಕಮಾನ್ಯ ತಿಲಕ್- ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ ಸಂಚಾರ ಸೋಮವಾರ ರದ್ದುಗೊಂಡಿದೆ. ತಿರುವನಂತಪುರ- ಮುಂಬಯಿ ಎಲ್‌ಟಿಟಿ ಎಕ್ಸ್‌ಪ್ರೆಸ್ (ನಂ.16346), ಎರ್ನಾಕುಳಂ- ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ಸಹಿತ ಉತ್ತರ ಮತ್ತು ದಕ್ಷಿಣದ ಹಲವು ರೈಲುಗಳು ಆ.27ರಂದು ಪರ್ಯಾಯ ಮಾರ್ಗದಲ್ಲಿ ಸಂಚರಿಸಲಿವೆ.

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...