ಚಿರತೆ ದಾಳಿಗೆ ಹಸು ಬಲಿ

ಸಕಲೇಶಪುರ: ಹೆತ್ತೂರು ಹೋಬಳಿಯ ಮಾಯನೂರು ಗ್ರಾಮದಲ್ಲಿ ಚಿರತೆ ದಾಳಿಗೆ ಹಸುವೊಂದು ಬಲಿಯಾಗಿದೆ.
ಗ್ರಾಮದ ಎಂ.ಎಸ್.ಸತೀಶ್ ಎಂಬುವರು ತಮ್ಮ ಹಸುವನ್ನು ಮೇಯಲು ಬಿಟ್ಟಿದ್ದರು. ಸಂಜೆಯ ಹೊತ್ತಿಗೆ ಹಸುಗಳು ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದ ವೇಳೆ ಗ್ರಾಮದ ಹೊರವಲಯದಲ್ಲಿ ಚಿರತೆ ಭಾಗಶಃ ತಿಂದು ಬಿಟ್ಟಿರುವ ಹಸುವಿನ ಕಳೇಬರ ದೊರೆತಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.