ಅರಕೇರಾ: ಸಂತ ಸೇವಾಲಾಲ್ ಮಹಾರಾಜರ ತಾಲೂಕು ಮಟ್ಟದ ಜಯಂತಿಯನ್ನು ಫೆ.15ರಂದು ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂತ ಸೇವಾಲಾಲ್ ಸೇನಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ರಾಠೋಡ ಹೇಳಿದರು.
ಇದನ್ನೂ ಓದಿ: ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಆಚರಣೆ
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅಲ್ಲಿಂದ ತೆರದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ಸುಮಾರು 42 ತಾಂಡಾದ ಜನರು ಭಾಗವಹಿಸಲಿದ್ದಾರೆ.
ಲಂಬಾಣಿ ಸಮುದಾಯದ ಉಡುಪು ಧರಿಸಿದ ಮಹಿಳೆಯರಿಂದ ಪೂರ್ಣ ಕುಂಭ ಮೆರವಣಿಗೆ ನಡೆಯಲಿದೆ ಎಂದರು. ಸರಿಗಮಪ ಖ್ಯಾತಿಯ ರಮೇಶ ಲಮಾಣಿ, ಬಂಜಾರ ಸಮಾಜದ ಧರ್ಮ ಗುರು ಶ್ರೀ ಬಳಿರಾಮ್ ಮಹಾರಾಜರು ಮತ್ತು ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಮಾಜಿ ಸಂಸದ ಬಿ.ವಿ ನಾಯಕ ಇತರರು ಭಾಗವಹಿಸಲಿದ್ದಾರೆ ಎಂದರು. ಪ್ರಮುಖರಾದ ಅಮರೇಶ ಚವ್ಹಾಣ್, ರಾಮುನಾಯ್ಕ ಪವಾರ, ರಾಜಶೇಖರ ರಾಠೋಡ ಇತರರಿದ್ದರು.