ವಿಜಯವಾಣಿ ಸುದ್ದಿಜಾಲ ಧಾರವಾಡ
ಪವಾಡ ಪುರುಷ, ಬಂಜಾರ ಸಮಾಜದ ಆರಾಧ್ಯ ದೈವ, ಸಂತ ಸೇವಾಲಾಲ ಮಹಾರಾಜರು ಗೋರಕ್ಷಕರು ಮತ್ತು ದುಡಿಮೆಯೇ ಹಿರಿಮೆ ಎಂದು ಅರಿತುಕೊಂಡವರು. ಸಮಾಜದ ಪ್ರಗತಿಯಲ್ಲಿ ಧರ್ಮದ ಪಾತ್ರವನ್ನು ಹೇಳಿ, ಸಮಾಜಕ್ಕೆ ಸಂತ ಸೇವಾಲಾಲರು ಸನ್ಮಾರ್ಗ ತೋರಿಸಿದ್ದಾರೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಉಪನ್ಯಾಸಕ ಡಾ. ಎಲ್.ಪಿ.ಲಮಾಣಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಸೇವಾಲಾಲರ ಜೀವನ ಚರಿತ್ರೆ ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಣದ ಮಹತ್ವ ತಿಳಿದು ಲಂಬಾಣಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಮತ್ತು ಅವರಲ್ಲಿನ ಮೂಢ ನಂಬಿಕೆಗಳನ್ನು ದೂರ ಮಾಡಿ, ಜ್ಞಾನದ ಮಾರ್ಗ ತೋರಿದ ಕೀರ್ತಿ ಸಂತ ಸೇವಾಲಾಲರಿಗೆ ಸಲ್ಲುತ್ತದೆ. ಹಬ್ಬ ಹರಿದಿನಗಳಲ್ಲಿ ಪಾಲಿಸುವ ಆಚರಣೆ, ಉಡುಗೆ ತೋಡಿಗೆಗಳು ಮಹತ್ವ ಉಳಿಸಿಕೊಂಡಿವೆ. ಸಮುದಾಯದ ಅನೇಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಪ್ರೇರಣೆ ಸೇವಾಲಾಲರ ಸಂದೇಶಗಳು ಎಂದರು.
ನವನಗರದ ಶ್ರೀ ಸೇವಾಲಾಲ ಬಂಜಾರ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ ಹಾಗೂ ನಾಗರಾಜ ಮಹಾರಾಜ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೃಷ್ಣಾಜಿ ಚವ್ಹಾಣ, ಎಲ್.ಆರ್. ನಾಯಕ, ಡಿ.ಬಿ.ನಾಯಕ, ರಾಮಾ ನಾಯಕ, ಕುಬೇರ ನಾಯಕ, ಗೋಪಾಲ ಲಮಾಣಿ, ಬಮನಪಾಡ, ಇತರರು ಇದ್ದರು.
ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕಣಿರ್ ನಿರೂಪಿಸಿದರು.
ಸಂತ ಸೇವಾಲಾಲರು ಸಮಾಜಕ್ಕೆ ಸನ್ಮಾರ್ಗ ತೋರಿದರು

You Might Also Like
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಸಿಗಲಿದ ಪರಿಹಾರ | Health Tips
ಇಂದಿನ ಕಾರ್ಯನಿರತ ಜೀವನ ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಇದು ಇಡೀ…
ಗಾಢನಿದ್ರೆಯಿಂದ ಮುಂಜಾನೆ 2-3 ಗಂಟೆಗೆ ಹಠಾತ್ ಎಚ್ಚರವಾಗುತ್ತಿದೆಯೇ?; ಅದರ ಹಿಂದಿನ ಕಾರಣ ಹೀಗಿದೆ.. | Health Tips
ರಾತ್ರಿಯಲ್ಲಿ ಆಳವಾದ ಮತ್ತು ಸಾಕಷ್ಟು ನಿದ್ರೆ ಪಡೆಯುವುದು ಮುಖ್ಯ. ಆದರೆ ಅನೇಕ ಜನರಿಗೆ ನಿದ್ರೆಯ ಮಧ್ಯದಲ್ಲಿ…
ಕಲ್ಲಂಗಡಿಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಯಾವುದೇ ಕಾರಣಕ್ಕೂ ಇಷ್ಟು ಹೊತ್ತು ಇಡಲೇಬೇಡಿ, ಅಪಾಯ ಫಿಕ್ಸ್! Watermelon
Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…