ಸೈನಾ ಸೆಮೀಸ್​ಗೆ, ಶ್ರೀಕಾಂತ್ ಔಟ್

ಕೌಲಾಲಂಪುರ: ಭಾರತದ ಅನುಭವಿ ಷಟ್ಲರ್ ಸೈನಾ ನೆಹ್ವಾಲ್ ವರ್ಷಾರಂಭದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಏಕೈಕ ಭರವಸೆಯಾಗಿದ್ದ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್​ಫೈನಲ್​ನಲ್ಲಿ ಸವಾಲು ಮುಗಿಸಿದರು. ಸೈನಾ ಕೇವಲ 48 ನಿಮಿಷಗಳಲ್ಲಿ ವಿಶ್ವ ನಂ.2 ಜಪಾನ್ ಬಲಿಷ್ಠ ಆಟಗಾರ್ತಿ ನಜೊಮಿ ಒಕುಹರಾ ವಿರುದ್ಧ 21-18, 23-21 ನೇರಗೇಮ್ಳಿಂದ ಜಯಿಸಿದರು. ಉಪಾಂತ್ಯದಲ್ಲಿ ಸೈನಾ, ವಿಶ್ವ ಚಾಂಪಿಯನ್ ಸ್ಪೇನ್ ತಾರೆ ಕ್ಯಾರೊಲಿನಾ ಮರಿನ್​ರನ್ನು ಎದುರಿಸಲಿದ್ದಾರೆ.

ಎಂಟರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ ಮೊದಲ ಗೇಮ್ ಗೆದ್ದರೂ, ಕೊನೆಗೆ 23-21, 16-21, 17-21ರಿಂದ ಕೊರಿಯಾದ ಸನ್​ವಾಹೊ ಎದುರು ಸೋತರು. -ಏಜೆನ್ಸೀಸ್